Saturday, October 25, 2025

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣ : ನವೀನ್ ಗೌಡ ಮತ್ತು ಚೇತನ್ ರನ್ನು ಬಂಧಿಸಿದ ಎಸ್‌ಐಟಿ

ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು SIT ಅಧಿಕಾರಿಗಳು ಆರೋಪಿಗಳಾದ ನವೀನ್ ಗೌಡ ಮತ್ತು ಚೇತನ್ ಅವರನ್ನು ಬಂಧಿಸಿದ್ದಾರೆ. ಇಂದು ಹೈಕೋರ್ಟ್ ಆವರಣದಲ್ಲಿ ಬಂದಿದ್ದ ಇಬ್ಬರನ್ನೂ SIT ಅಧಿಕಾರಿಗಳು ವಶಕ್ಕೆ ಪಡೆದು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದ ಆರೋಪಿಗಳು ವಿಚಾರಣೆ ಎದುರಿಸಲು ಹೈಕೋರ್ಟ್ ಬಳಿ ಬಂದಾಗ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೇ ತಿಂಗಳ ಅಂತ್ಯಕ್ಕೆ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳುವುದಾಗಿ ಹೇಳಿಕೆ ಕೊಡುತ್ತಿದ್ದಂತೆ ಕಾರ್ಯೋನ್ಮುಕರಾದ ಎಸ್‌ಐಟಿ ಅಧಿಕಾರಿಗಳು ಇಂದು ನವೀನ್ ಗೌಡ ಮತ್ತು ಚೇತನ್ ಅವರ ಬರುವಿಕೆಯನ್ನು ಅರಿತು ಬಂಧಿಸಲಾಗಿದೆ.

ನವೀನ್ ಗೌಡ ಮತ್ತು ಚೇತನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಇವರಿಬ್ಬರನ್ನೂ ಬಂಧಿಸದ ಬಗ್ಗೆ ಜೆಡಿಎಸ್ ನಾಯಕರಲ್ಲಿ ಅನೇಕರು ಬಹಿರಂಗವಾಗಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಅದರಲ್ಲೂ ನವೀನ್ ಗೌಡ ಅರೆಸ್ಟ್ ಮಾಡದೇ ಇರುವುದರಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪಕ್ಷಪಾತಿ ನಿಲುವು ಪ್ರದರ್ಶಿಸಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕೂಡ ಆರೋಪಿಸಿದ್ದರು.

ಅಂತೂ ಎಸ್‌ಐಟಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿ, ಇನ್ನು ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page