Monday, June 17, 2024

ಸತ್ಯ | ನ್ಯಾಯ |ಧರ್ಮ

ನವೆಂಬರ್ 11ಕ್ಕೆ ಯೆಲ್ಲೋ ಪೇಜಸ್ ಓಪನ್

ವಿಭಿನ್ನ ಸ್ಟುಡಿಯೋಸ್‌ ಅವರು ಕೀಲೈಟ್ಸ್‌ ಮತ್ತು ವಾಟ್‌ ನೆಕ್ಸ್ಟ್‌ ಮೂವೀಸ್‌ ಅವರ ಸಹಯೋಗದಲ್ಲಿ ನಿರ್ಮಿಸುತ್ತಿರುವ ಕ್ರೈಂ-ಥ್ರಿಲ್ಲರ್‌ ಕತೆಯ ʼಯೆಲ್ಲೋ ಗ್ಯಾಂಗ್ಸ್‌ʼ ಸಿನಿಮಾ ಇದೇ ನವೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದ್ದು, ಸುಜ್ಞಾನ್‌ ಅವರ ಛಾಯಾಗ್ರಹಣ, ರೋಹಿತ್‌ ಸೋವರ್‌ ಅವರ ಸಂಗೀತ, ಸುರೇಶ್‌ ಆರ್ಮುಗಂ ಅವರ ಸಂಕಲನವಿದೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್‌ ಕುಮಾರ್‌ ಜಿ ಅವರುಗಳು ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.

ಮನೋಜ್‌ ಪಿ, ಜಿ.ಎಂ.ಆರ್‌ ಕುಮಾರ್(ಕೆವಿಜಿ), ಜೆ.ಎನ್.ವಿ ಎಂಟರ್ಟೇನರ್ಸ್‌ ಮತ್ತು ಡಿ.ಎಸ್ ಪ್ರವೀಣ್‌ ಅವರುಗಳು ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ. ಲೋಕೇಶ್‌ ಹಿತ್ತಲಕೊಪ್ಪ ಅವರ ಕಾರ್ಯಕಾರಿ ನಿರ್ಮಾಣ ಮತ್ತು ನಿರಂಜನ್‌ ಹಾವಣಗಿ ಅವರ ಹಣಕಾಸು ನಿರ್ವಹಣೆ ಸಿನಿಮಾಕ್ಕಿದೆ.

 ದೇವ್‌ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್‌ ಪೂಜಾರಿ, ಅರುಣ್‌, ಸತ್ಯ, ನಾಟ್ಯ ರಂಗ, ವಿಠಲ್‌ ಪರೀಟ, ಉಮ್ಮತ್ತಾಲ್‌ ಸತ್ಯ,‌ ವಿನೀತ್ ಕಟ್ಟಿ, ನಂದ ಗೋಪಾಲ್‌, ದಯಾ ನೀನಾಸಂ, ಹರ್ಷ, ಪ್ರವೀಣ್‌ ಕೆಬಿ, ರವಿ ಜಿಗಣಿ, ಮಲ್ಲಿಕಾರ್ಜುನ್‌, ಮಧುಸೂದನ್‌, ಪವನ್ ಮುಂತಾದವರು ನಟಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು