Monday, July 28, 2025

ಸತ್ಯ | ನ್ಯಾಯ |ಧರ್ಮ

NCP ಹಿರಿಯ ನಾಯಕ ನವಾಬ್ ಮಲಿಕ್ ಗೆ ಬಿಗ್ ರಿಲೀಫ್.. 6 ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ

ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ನವಾಬ್ ಮಲಿಕ್ ಅವರಿಗೆ ಸುಪ್ರೀಂ ಕೋರ್ಟ್ ನಿಂದ ಭಾರೀ ರಿಲೀಫ್ ಸಿಕ್ಕಿದೆ. ನವಾಬ್ ಮಲಿಕ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಲಾಯಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನವಾಬ್ ಮಲಿಕ್ 16 ತಿಂಗಳ ಕಾಲ ಜೈಲಿನಲ್ಲಿದ್ದರು. ಇದಕ್ಕೂ ಮುನ್ನ ಜುಲೈ 13 ರಂದು ಬಾಂಬೆ ಹೈಕೋರ್ಟ್ ವೈದ್ಯಕೀಯ ಚಿಕಿತ್ಸೆಯ ಹೆಸರಿನಲ್ಲಿ ಜಾಮೀನು ನೀಡಲು ನಿರಾಕರಿಸಿತ್ತು.

ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ನವಾಬ್ ಮಲಿಕ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಮಲಿಕ್ ಕಿಡ್ನಿ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ. ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ನೀಡಲಾಗುತ್ತಿದೆಯೇ ಹೊರತು ಪ್ರಕರಣದ ಆಧಾರದಲ್ಲಿ ಅಲ್ಲ ಎನ್ನಲಾಗಿದೆ. ನ್ಯಾಯಾಲಯದ ಆದೇಶದಂತೆ ಎನ್‌ಸಿಪಿ ಕಾರ್ಯಕರ್ತರು ಪಕ್ಷದ ಕಚೇರಿಯ ಹೊರಗೆ ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗಿದರು.

23 ಫೆಬ್ರವರಿ 2022ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಲಿಕ್ ಅವರನ್ನು ಇಡಿ ಬಂಧಿಸಿತ್ತು. ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರೊಂದಿಗೆ ಸಂಪರ್ಕವಿದೆ ಎಂಬ ಆರೋಪವೂ ಇದೆ. ಅವರು ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರೊಂದಿಗೆ ಕುರ್ಲಾದ ಗೋವಾಲಾ ಕಾಂಪೌಂಡ್‌ನಲ್ಲಿ ಕೆಲವು ಜಮೀನುಗಳಿಗಾಗಿ ಹಣದ ವಹಿವಾಟು ನಡೆಸುತ್ತಿದ್ದರು ಎನ್ನಲಾಗಿದೆ.

ಜಾಮೀನಿನ 6 ಷರತ್ತುಗಳು
-ವೈಯಕ್ತಿಕ ಬಾಂಡ್ ಮೇಲೆ 50,000 ರೂ

  • ED ಬಳಿ ಪಾಸ್ಪೋರ್ಟ್ ಪ್ರಸ್ತುತಪಡಿಸಬೇಕು
  • ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ
  • ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ವಿವರಗಳನ್ನು EDಗೆ ನೀಡಬೇಕು
  • ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗಬಾರದು
  • ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಹಾಳು ಮಾಡುವಂತಿಲ್ಲ

ಕುತೂಹಲಕಾರಿ ಸಂಗತಿಯೆಂದರೆ ಇದೇ NCPಯ ಒಂದು ಬಣ ಈಗ ಬಿಜೆಪಿಯನ್ನು ಸೇರಿದ್ದು. ಶರದ್‌ ಪವಾರ್‌ ಈಗ ಆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ. ಈಗ ಪವಾಡದಂತೆ ಮಲಿಕ್‌ ಅವರಿಗೆ ಜಾಮೀನು ಕೂಡಾ ದೊರಕಿದೆ. ಒಟ್ಟಾರೆ ಇತ್ತೀಚೆಗೆ NCPಯ ರೊಟ್ಟಿ ಪೂರ್ತಿಯಾಗಿ ತುಪ್ಪದಲ್ಲಿ ಜಾರಿ ಬಿದ್ದಿದೆ. ಅತ್ತ ಬಿಜೆಪಿಯನ್ನು ನಂಬಿದ್ದ ಶಿವಸೇನಾ ಎರಡು ಹೋಳಾಗಿ ಎಲ್ಲೂ ಸಲ್ಲದಂತೆ ಬದುಕುತ್ತಿವೆ. ಈಗ NCP ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಮುಖ್ಯಮಂತ್ರಿ ಶಿಂಧೆ ಹೆಚ್ಚು ಮಿಸುಕಾಡದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page