Wednesday, November 20, 2024

ಸತ್ಯ | ನ್ಯಾಯ |ಧರ್ಮ

ಮಾವೋವಾದಿಗಳಿಂದ 5 ವಾಹನಗಳಿಗೆ ಬೆಂಕಿ, ಮಾತುಕತೆಗೆ ಕರೆಯುವಂತೆ ಆಗ್ರಹಿಸಿ ಕರಪತ್ರ ಎಸೆದುಹೋದ ಬಂಡುಕೋರರು

ರಾಂಚಿ: ಜಾರ್ಖಂಡ್ ನಲ್ಲಿ ಇಂದು ಎರಡನೇ ಹಂತದ ವಿಧಾನಸಭಾ ಮತದಾನ ನಡೆಯುತ್ತಿದೆ. ಆದರೆ ಆ ಚುನಾವಣೆಗೆ ಮುನ್ನ ಮಾವೋವಾದಿಗಳು ಐದು ಟ್ರಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಲಾತೇಹರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೆರಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾತ್ ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನ 1.30ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾತೇಹಾರ್‌ನಲ್ಲಿನ ಕಲ್ಲಿದ್ದಲು ಪ್ರಾಜೆಕ್ಟ್ ಸಾರಿಗೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ನಿಷೇಧಿತ ಜಾರ್ಖಂಡ್ ಸಮಿತಿಯು ಕಲ್ಲಿದ್ದಲು ಖಾಲಿ ಮಾಡಿ ಹಿಂತಿರುಗುತ್ತಿದ್ದ ಟ್ರಕ್‌ಗಳಿಗೆ ಬೆಂಕಿ ಹಚ್ಚಿದೆ ಎಂದು ತಿಳಿದುಬಂದಿದೆ.

ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಕುಮಾರ್ ಗೌರವ್ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಕರಪತ್ರಗಳನ್ನು ಬಿಸಾಡಲಾಗಿದೆ. ಟ್ಯೂಬ್ಡ್‌ ಕೋಲ್ ಪ್ರಾಜೆಕ್ಟ್‌ ಸಂಬಂಧಿ ಕಾಮಗಾರಿ ಮುಂದುವರಿಯಬೇಕಾದರೆ ತಮ್ಮೊಂದಿಗೆ ಮಾತುಕತೆ ನಡೆಸಬೇಕು ಎಂದು ಮಾವೋವಾದಿಗಳು ಆ ಕರಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಎಸ್ಪಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page