Monday, June 17, 2024

ಸತ್ಯ | ನ್ಯಾಯ |ಧರ್ಮ

ಮಣಿಪುರ ಕ್ರೌರ್ಯ: ವಿಷಯ ಗೊತ್ತಿದ್ದೂ ಸುಮ್ಮನಿದ್ದ ರಾಷ್ಟ್ರೀಯ ಮಹಿಳಾ ಆಯೋಗ!

ಮಣಿಪುರದ ವಿಡಿಯೋ ವೈರಲ್‌ ಆಗುವುದಕ್ಕೂ ಮೊದಲೇ ಈ ಕುರಿತು ಮಾಹಿತಿಯಿದ್ದರೂ ಮಹಿಳಾ ಆಯೋಗ ಕೇವಲ ಮಾಹಿತಿ ಕೇಳಿ ಸುಮ್ಮನಾಗಿತ್ತು ಎನ್ನುವ ಮಾಹಿತಿ ಈಗ ಬಹಿರಂಗವಾಗಿದೆ.

ನವದೆಹಲಿ: ಮಣಿಪುರದ ಅಮಾನವೀಯ ಘಟನೆಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ (NCW) ಈ ಮೊದಲೇ ಸಾಮಾಜಿಕ ಕಾರ್ಯಕರ್ತರು ದೂರು ನೀಡಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಸಾಮಾಜಿಕ ಕಾರ್ಯಕರ್ತರು ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದ ಪ್ರಕರಣವನ್ನು ರಾಷ್ಟ್ರಿಯ ಮಹಿಳಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ರಾಜ್ಯಕ್ಕೆ ಭೇಟಿ ನೀಡಿದ್ದ ಇಬ್ಬರು ಕಾರ್ಯಕರ್ತರು ಹಾಗೂ ಉತ್ತರ ಅಮೇರಿಕನ್ ಮಣಿಪುರ ಬುಡಕಟ್ಟು ಅಸೋಸಿಯೇಷನ್ ನವರು ಜೂ.12 ರಂದೇ ಮಣಿಪುರದಲ್ಲಿನ ಘಟನೆ ಬಗ್ಗೆ ಎನ್ ಸಿ ಡಬ್ಲ್ಯು ರೇಖಾ ಶರ್ಮಾ ಅವರಿಗೆ ಪತ್ರ ಬರೆದು ವಿವರಿಸಿದ್ದರು. ಆದರೆ ಈ ಕುರಿತು NCW ಕಣ್ಮುಚ್ಚಿ ಕುಳಿತಿತ್ತು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಮೇ.04 ರಂದು ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಥಳಿಸಿ, ಸಾರ್ವಜನಿಕವಾಗಿ, ಸಾಮೂಹಿಕ ಅತ್ಯಾಚಾರವೆಸಗಲಾಗಿತ್ತು.

ಈ ಎಲ್ಲಾ ಘಟನೆಗಳಿಗೆ ರಾಜ್ಯ ಪೊಲೀಸ್ ಕಮಾಂಡೋಗಳೂ ಮೂಕಪ್ರೇಕ್ಷಕರಾಗಿದ್ದರು, ಥಳಿತ, ಮನೆಗಳಿಗೆ ಬೆಂಕಿ ಇಡುವ ದೃಶ್ಯಗಳಿಗೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿದ್ದರು ಎಂದು ರೇಖಾ ಶರ್ಮಾ ಅವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ NCW ಮುಖ್ಯಸ್ಥರಾದ ರೇಖಾ ಶರ್ಮ ʼಜು. 19ರಂದು NCW ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಣಿಪುರದ ಅಧಿಕಾರಿಗಳನ್ನು ಸಂಪರ್ಕಿಸಿತ್ತು ಆದರೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಂದಿರಲಿಲ್ಲʼ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು