ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಬೆಳಗಿನ ಸಮಯ 10.50 ರ ಆಸುಪಾಸಿನಲ್ಲಿ ಸುಮಾರು 90 ಸಾವಿರ ಮತಗಳ ಆಸುಪಾಸಿನ ಅಂತರದಲ್ಲಿ ಸಿ.ಎನ್.ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.
ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೆ ಇಳಿದ ಡಾ. ಮಂಜುನಾಥ್‌ಗೆ ಸಾಕಷ್ಟು ಸವಾಲು ಇದ್ದವು. ಇಷ್ಟೆಲ್ಲಾ ಸವಾಲುಗಳ ನಡುವೆ ಕೂಡ ಬಿಜೆಪಿ & ಜೆಡಿಎಸ್‌ನ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ ಡಾ. ಮಂಜುನಾಥ್ ಅವರ ಗೆಲುವಿಗೆ ಶ್ರಮವಹಿಸಿ ಪ್ರಚಾರ ನಡೆಸಿದ್ದರು.
ಮತ ಎಣಿಕೆಯ ಒಟ್ಟಾರೆ ಅಂಶಗಳನ್ನು ನೋಡಿದಾಗ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಮಾಗಡಿ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡು ಮುಂದುವರೆದಿದೆ. ಹಾಗೆಯೇ ಕನಕಪುರ, ರಾಮನಗರ, ಆನೇಕಲ್ ಕ್ಷೇತ್ರ ಬಹು ನಿರೀಕ್ಷೆ ಹೊಂದಿದ್ದು, ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೈ ಹಿಡಿಯಬಹುದು ಎಂಬುದು ಸಧ್ಯದ ನಿರೀಕ್ಷೆ.