Wednesday, August 20, 2025

ಸತ್ಯ | ನ್ಯಾಯ |ಧರ್ಮ

ನೇಪಾಳ ದುರಂತ – ಸಾವಿನ ಸಂಖ್ಯೆ 41ಕ್ಕೆ ಏರಿಕೆ

ಕಠ್ಮಂಡು (ನೇಪಾಳ): ನೇಪಾಳದಲ್ಲಿ ನಿನ್ನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸತ್ತವರ ಸಂಖ್ಯೆ 41ಕ್ಕೆ ತಲುಪಿದೆ. ಚಾಲಕ ಮತ್ತು ಇಬ್ಬರು ಸಹಾಯಕರು ಸೇರಿದಂತೆ ಉತ್ತರ ಪ್ರದೇಶದ ಗೋರಖ್‌ಪುರದಿಂದ ಪ್ರವಾಸಿ ಬಸ್ ನೇಪಾಳದ ಪೋಖರಾದಿಂದ ಕಠ್ಮಂಡುವಿಗೆ ಹೊರಟಿತ್ತು.

ಪೋಖರಾದಿಂದ ಕಠ್ಮಂಡುವಿಗೆ ಹೋಗುತ್ತಿದ್ದಾಗ ಈ ಬಸ್ ಕಣಿವೆಗೆ ಬಿದ್ದಿದೆ. ಈ ಬಸ್ಸಿನಲ್ಲಿ 40 ಭಾರತೀಯರಿದ್ದರು. ರಸ್ತೆ ಬದಿಯಲ್ಲಿದ್ದ 150 ಅಡಿ ಆಳದಲ್ಲಿ ವೇಗವಾಗಿ ಹರಿಯುತ್ತಿದ್ದ ಮಾರ್ಸಯಾಂಗಡಿ ನದಿಗೆ ಬಸ್ ಬಿದ್ದಿದೆ. ಈ ಅಪಘಾತದಲ್ಲಿ 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತರನ್ನು ಮಹಾರಾಷ್ಟ್ರದ ನಿವಾಸಿಗಳು ಎಂದು ಗುರುತಿಸಿದ್ದಾರೆ. ಭಾರತೀಯರ ಮೃತ ದೇಹಗಳನ್ನು ತರಲು ವಾಯುಪಡೆಯ ವಿಮಾನವು ನೇಪಾಳಕ್ಕೆ ಹಾರಲಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಅವಘಡದಲ್ಲಿ ಒಟ್ಟು ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಮತ್ತೊಂದೆಡೆ ಭಾರಿ ಮಳೆಯಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page