Thursday, June 20, 2024

ಸತ್ಯ | ನ್ಯಾಯ |ಧರ್ಮ

ಪಠ್ಯ ಪರಿಷ್ಕರಣೆಗೆ ಹೊಸ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀತರ್ಥ ನೇತ್ರತ್ವದ ಪಠ್ಯ ತಿದ್ದುಪಡಿ ಸೃಷ್ಟಿಸಿದ್ದ ಅಧ್ವಾನಗಳನ್ನು ರಿಪೇರಿ ಮಾಡಿ ಹೊಸ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ನೀಡಲು ಸರ್ಕಾರ ಪಠ್ಯ ಪರಿಷ್ಕರಣೆ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ.

ರೂಹಿತ್‌ ಚಕ್ರತೀರ್ಥ ನೇತ್ರತ್ವದ ಪಠ್ಯ ಪುಸ್ತಕ ಸಮಿತಿ ನಡೆಸಿದ ಪಾಠ ಪರಿಷ್ಕರಣೆಯು ಹಲವು ವಿವಾದಗಳಿಗೆ ಕಾರಣವಾಗುವುದರ ಜೊತೆಗೆ ಹಲವು ಸಮುದಾಯಗಳನ್ನು ಕೆರಳಿಸುವಲ್ಲಿಯೂ ಯಶಸ್ವಿಯಾಗಿತ್ತು. ತನ್ನ ವೈಯಕ್ತಿಕ ಅಜೆಂಡಾಗಳನ್ನು ಪಾಠಗಳಲ್ಲಿ ತುರುಕಿ ಬಿಜೆಪಿಯ ಬೀದಿ ರಾಜಕಾರಣವನ್ನು ಪಠ್ಯಪುಸ್ತಕಗಳಲ್ಲೂ ತುಂಬಿಸಲು ಹೊರಟಿದ್ದ ರೋಹಿತ್‌ ಚಕ್ರತೀರ್ಥ ಸಮಿತಿಯ ಕ್ರಮವು ಜನಸಾಮಾನ್ಯರನ್ನು ಕೆರಳಿಸಿತ್ತು. ಜೊತೆಗೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇದು ತನ್ನ ಪಾಲನ್ನು ನೀಡಿತ್ತು.

ಪ್ರಸ್ತುತ ಕಾಂಗ್ರೆಸ್‌ ಸರ್ಕಾರವು ಈ ಅಪಸವ್ಯಗಳನ್ನು ತೊಡೆದು ಹಾಕಿ 2024-25ರ ಶೈಕ್ಷಣಿಕ ವರ್ಷಕ್ಕೆ ಹೊಸ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ಸಲುವಾಗಿ ಮಂಜುನಾಥ ಜಿ ಹೆಗಡೆಯವರ ನೇತ್ರತ್ವದಲ್ಲಿ ಹೊಸ ಸಮಿತಿಗಳನ್ನು ರಚಿಸಿದೆಯೆಂದು The file ವರದಿ ಮಾಡಿದೆ.

ಸರ್ಕಾರವು ಒಟ್ಟು ಒಬ್ಬ ಸಂಯೋಜಕ, ಐದು ಅಧ್ಯಕ್ಷರು ಹಾಗೂ 37 ಸದಸ್ಯರ ಐದು ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ.

ಮುಂದಿನ ಪಠ್ಯ ಪರಿಷ್ಕರಣೆಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF 2005) ಇದರಡಿ ಹೊಸ ಪಾಠ ಪುಸ್ತಕಗಳನ್ನು ರಚಿಸಲು ಸಮಿತಿಗೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು