Wednesday, March 5, 2025

ಸತ್ಯ | ನ್ಯಾಯ |ಧರ್ಮ

ಹೊಸ ಐಟಿ ಬಿಲ್‌ | ಅಪಾಯದಲ್ಲಿ ಜನರ ಖಾಸಗಿತನ! ಇನ್ನು ಅನುಮಾನ ಬಂದ್ರೆ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟನ್ನ ಕೂಡಾ ತೆರಿಗೆ ಇಲಾಖೆ ತೆರೆದು ನೋಡುತ್ತೆ!

ಹೊಸದಿಲ್ಲಿ, ಮಾರ್ಚ್ 4: ನೀವು ಆದಾಯ ತೆರಿಗೆ(ಐಟಿ) ವಿಷಯದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಅನುಮಾನ ಬಂದರೆ ಸಾಕು ಐಟಿ ಅಧಿಕಾರಿಗಳು ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು, ವೈಯಕ್ತಿಕ ಇ-ಮೇಲ್, ಬ್ಯಾಂಕ್ ಖಾತೆಗಳನ್ನು, ಆನ್‌ಲೈನ್ ಹೂಡಿಕೆ, ಟ್ರೇಡಿಂಗ್ ಖಾತೆಗಳನ್ನು ಪರಿಶೀಲಿಸಬಹುದು.

ಕೇಂದ್ರ ಕ್ಯಾಬಿನೆಟ್ ಇತ್ತೀಚೆಗೆ ಅಂಗೀಕರಿಸಿದ ಹೊಸ ಐಟಿ ಬಿಲ್ ಇದಕ್ಕೆ ಅಧಿಕಾರ ನೀಡುತ್ತದೆ. ಲೆಕ್ಕದಲ್ಲಿ ತೋರಿಸದ ನಗದು, ಆಭರಣ, ಇತರ ಅಮೂಲ್ಯ ವಸ್ತುಗಳು, ಪತ್ರಗಳು ನಿಮ್ಮ ಬಳಿ ಕಂಡುಬಂದರೂ ಸಹ ಅಧಿಕಾರಿಗಳು ವೀಕ್ಷಿಸಲು ಪರಿಶೀಲಿಸಲು ಈ ಬಿಲ್ ವ್ಯಾಪಕ ಅಧಿಕಾರಗಳನ್ನು ಕೊಡುತ್ತದೆ.

ಪ್ರಸ್ತುತ ಅಮಲ್ಲೋ ಇರುವ ಐಟಿ ಕಾಯ್ದೆ-1961 ರ ಪ್ರಕಾರ ಯಾರಾದರೂ ತೆರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಶಂಕೆ, ಮಾಹಿತಿ ಇದ್ದರೆ ಅವರ ಮನೆ, ಆಫೀಸ್‌ಗಳು, ಲಾಕರ್‌ಗಳು, ಕಪಾಟುಗಳ ಗೀಗ ಒಡೆಯಲು ಮಾತ್ರ ಐಟಿ ಅಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಹೊಸದಾಗಿ ಪರಿಚಯಿಸಲಿರುವ ಕಾಯಿದೆಯಲ್ಲಿ ‘ವರ್ಚುವಲ್ ಡಿಜಿಟಲ್ ಸ್ಪೇಸ್’ ಅನ್ನು ಸಹ ಪರಿಶೀಲಿಸಲು ಅಧಿಕಾರ ನೀಡಲಾಗಿದೆ.

ಐಟಿ ಬಿಲ್‌ನಲ್ಲಿನ 247ನೇ ವಿಧಿಯಲ್ಲಿ ವರ್ಚುವಲ್‌ ಡಿಜಿಟಲ್ ಸ್ಪೇಸ್‌ ಅಡಿಯಲ್ಲಿ ಇ-ಮೇಲ್, ಟ್ರೇಡಿಂಗ್‌ ಖಾತೆಗಳು, ಸಾಮಾಜಿಕ ಮಾಧ್ಯಮ ಅಕೌಂಟ್‌ಗಳನ್ನು, ಕ್ಲೌಡ್‌ ಸರ್ವರ್‌ಗಳನ್ನು ಆ ಪಟ್ಟಿಯಲ್ಲಿ ಸೇರಿಸಲಾಗಿದೆ. ‌

ಆದರೆ ಈ ನಿಯಮಗಳ ಕುರಿತು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ವೈಯಕ್ತಿಕ ಗೌಪ್ಯತೆಗೆ ಭಂಗ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಹೊಸ ನಿಯಮಗಳನ್ನು ಫೆಬ್ರವರಿ 7ರಂದು ಕೇಂದ್ರ ಕ್ಯಾಬಿನೆಟ್ ಅಂಗೀಕರಿಸಿದೆ. ಸಂಸತ್ತಿನ ಅಂಗೀಕಾರವಾಗಿದೆ. ಕಾಯಿದೆಗೆ ರಾಷ್ಟ್ರಪತಿ ಸಹಿ ಮಾಡಿದರೆ ಇದು ಮುಂದಿನ ಎಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page