Friday, May 23, 2025

ಸತ್ಯ | ನ್ಯಾಯ |ಧರ್ಮ

ರಂಗಪಯಣದಿಂದ ಹೊಸ ನಾಟಕ: ಹೆಸರೇ ಇಲ್ಲದವರು

ರಂಗಪಯಣ ನಾಟಕ ತಂಡದ ಹೊಸ ನಾಟಕ ʼ ಹೆಸರೇ ಇಲ್ಲದವರುʼ ಮೇ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಅವರು ರಚಿಸಿ ನಿರ್ದೇಶಿಸಿದ್ದಾರೆ.

“ಸದಾ ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಅವರ ಬದಕನ್ನೆ ಕಥೆಯಾಗಿಸಿ ಜೀವ ತುಂಬುವ ರಂಗಪಯಣ ತಂಡವು ಸಾಂಸ್ಕೃತಿಕವಾಗಿ ಅಲೆಮಾರಿಗಳಾಗಿ ತಮ್ಮದೇ ಬದುಕು ಕಟ್ಟಿಕೊಂಡವರ ಕಥೆಯನ್ನು ಹೇಳಲು ವೇದಿಕೆ ಹತ್ತುತ್ತಿದ್ದೆ. ಹೆಸರಿಲ್ಲದೇ ಆಧುನಿಕ ಜಂಜಡಗಳ‌ ನಡುವೆ ಕಳೆದುಹೋಗುತ್ತಿರುವ ಅಲೆಮಾರಿ ಸಮುದಾಯದ ನೋವನ್ನು, ಸಂಕಟವನ್ನು ಕಣ್ಣುಮುಂದೆ ತರುತ್ತಲೇ, ಭಾರತದ ಬಹುತ್ವವನ್ನು, ಜ್ಞಾನ ದ ಮೌಲ್ಯತೆಯನ್ನು ಮತ್ತೆ ನೆನಪಿಸುವ ಹೊಸ ನಾಟಕ ಪ್ರಯೋಗ ‘ಹೆಸರೇ ಇಲ್ಲದವರು’. ಸಮಾಜದ ಕಟ್ಟಲೆಗಳು ಒಂದು ಕಡೆ ನೋವಿನ ಕೂಪಕ್ಕೆ ತಳ್ಳಿದರೆ ಕುಲಕಸುಬುಗಳನ್ನೆ ನಂಬಿದ ಸಮುದಾಯಗಳು ಆಧುನಿಕತೆಯ ಬಾರುಕೋಲಿಗೆ ಸಿಲುಕಿ ನಲುಗಿದ ಕಥನವೇ ಹೆಸರೇ ಇಲ್ಲದವರು,” ರಂಗಪಯಣವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ಕೊಳಕು ರಾಜಕೀಯದಲ್ಲಿ ಸಿಲುಕಿ ನಲುಗುವ, ನೆಲವಿಲ್ಲದ ಅಲೆಮಾರಿಗಳು ಸಾಂಸ್ಕೃತಿಕ ಐಡೆಂಟಿಟಿ ಗೆ ಪರಿತಪಿಸುತ್ತಿರುವಾಗ ವ್ಯವಸ್ಥೆಯ ವ್ಯೂಹ ಅವರನ್ನು ಬಲಿ ತೆಗೆದುಕೊಳ್ಳವ ಹುನ್ನರಕ್ಕೆ ಸತ್ಯದ ರುಚಿ ತೋರಿಸಿದವರ ಕಥನವಾಗಿದೆ.”

ನಾಟಕ ಪ್ರದರ್ಶನ ಎಲ್ಲಿ? ಯಾವಾಗ?

ನಾಟಕ-ಹೆಸರೇ ಇಲ್ಲದವರು
ರಚನೆ – ವಿನ್ಯಾಸ – ಸಂಗೀತ – ನಿರ್ದೇಶನ — ರಾಜಗುರು ಹೊಸಕೋಟೆ
ಪ್ರಸಾದನ – ಜಯರಾಜ್ ಹುಸ್ಕೂರು
ಬೆಳಕು – ಎಂ ಜಿ ನವೀನ್
ನಿರ್ವಹಣೆ – ನಯನ ಸೂಡ

ದಿನಾಂಕ: ಮೇ 27, ಮಂಗಳವಾರ
ಸಮಯ : 7:30 ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ
ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page