Monday, June 24, 2024

ಸತ್ಯ | ನ್ಯಾಯ |ಧರ್ಮ

ಮೋಹಕ ತಾರೆ ರಮ್ಯಾ ಸಾವಿನ ಸುದ್ದಿ : ಅಸಲಿಯತ್ತೇನು?

ಸ್ಯಾಂಡಲ್‌ವುಡ್‌ನ ಕ್ವೀನ್ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಬುಧವಾರ ಬೆಳಿಗ್ಗೆಯಿಂದಲೇ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತು. ವಿಶೇಷವಾಗಿ ತಮಿಳುನಾಡು ಭಾಗದ ಹೆಚ್ಚಿನ ಸೆಲೆಬ್ರಿಟಿಗಳು ರಮ್ಯಾ ಫೋಟೊ ಹಾಕಿಕೊಂಡ ಸಂತಾಪದ ಫೋಟೋಗಳು ಹರಿದಾಡಿದ್ದು ಎಲ್ಲರಲ್ಲೂ ಆತಂಕ ಸೃಷ್ಟಿಸಿತ್ತು‌.

ತಮಿಳುನಾಡಿನ ಎಸ್‌ಎಸ್‌ ಮ್ಯೂಸಿಕ್‌, ದಿನಕರನ್‌ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್‌ ಪೇಜ್‌ಗಳು ಕೂಡ ನಟಿ ರಮ್ಯಾ ಅವರ ಚಿತ್ರಗಳನ್ನು ಪೋಸ್ಟ್‌ ಮಾಡಿ ಕಾರ್ಡಿಯಾಕ್‌ ಅರೆಸ್ಟ್‌ನಿಂದ ನಿಧನರಾಗಿದ್ದಾರೆ ಎಂದು ಪೋಸ್ಟ್‌ ಮಾಡಿದ್ದವು.

ಆದರೆ ಅಸಲಿ ವಿಚಾರ ಏನೆಂದರೆ ತಮಿಳಿನಲ್ಲಿ ರಮ್ಯಾ ಹೆಸರಿನ ಬೇರೆ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮೋಹಕತಾರೆ ರಮ್ಯಾ ಅವರು ನಿಧನರಾಗಿದ್ದಾರೆ ಎನ್ನುವತ್ತ ಸುದ್ದಿ ಹರಿದಾಡಿದೆ.

ಈವರೆಗಿನ ಮಾಹಿತಿಯ ಪ್ರಕಾರ, ರಮ್ಯಾ ಅವರ ನಿಧನ ಸುದ್ದಿ ಫೇಕ್‌ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು