Monday, July 28, 2025

ಸತ್ಯ | ನ್ಯಾಯ |ಧರ್ಮ

ಮುಂದಿನ ಚುನಾವಣೆ ಗೋಡ್ಸೆ ಮತ್ತು ಗಾಂಧಿ ಸಿದ್ಧಾಂತದ ನಡುವಿನ ಹೋರಾಟ: ರಾಹುಲ್‌ ಗಾಂಧಿ

ಮಧ್ಯಪ್ರದೇಶ: ಮುಂದಿನ ಮಧ್ಯಪ್ರದೇಶದಲ್ಲಿ ಚುನಾವಣೆಯು ಗಾಂಧಿ ಹಾಗೂ ಗೋಡ್ಸೆ ಸಿದ್ಧಾಂತಗಳ ನಡುವೆ ನಡೆಯುವ ಹೋರಾಟವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿಳಿಸಿದರು.

ರ‍್ಯಾಲಿ ವೇಳೆ ಮಾತನಾಡಿದ ಅವರು, ಬಿಜೆಪಿಯನ್ನು ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಗೆ ಹೋಲಿಸಿದರು.

ಮಧ್ಯಪ್ರದೇಶದ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ಒಂದು ಕಡೆ ಮಹಾತ್ಮ ಗಾಂಧಿ ಸಿದ್ಧಾಂತ ಅನುಸರಿಸುವ ಕಾಂಗ್ರೆಸ್ ಪಕ್ಷ (Congress), ಇನ್ನೊಂದು ಕಡೆ ಗೋಡ್ಸೆ ಸಿದ್ಧಾಂತ ಅನುಸರಿಸುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ (BJP) ಇದೆ. ಇವುಗಳ ಮಧ್ಯೆ ನಡೆಯುವ ಹೋರಾಟ ಈ ಚುನಾವಣೆ ಎಂದು ಅವರು ಹೇಳಿದರು.

ಬಿಜೆಪಿಯವರು ಎಲ್ಲಿಗೆ ಹೋದರೂ ದ್ವೇಷವನ್ನು ಹರಡುತ್ತಾರೆ. ಈಗ ಮಧ್ಯಪ್ರದೇಶದ ರೈತರು ಮತ್ತು ಯುವಕರು ಅವರನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ. ಬಿಜೆಪಿ ಜನರಿಗೆ ಏನನ್ನು ಕೊಟ್ಟಿತ್ತೋ ಅದನ್ನು ಈಗ ಮರಳಿ ಪಡೆಯುತ್ತಿದೆ ಎಂದು ಅವರು ಕುಟುಕಿದರು.

ಭಾರತ್ ಜೋಡೋ ಯಾತ್ರೆಯಲ್ಲಿ ಮಧ್ಯಪ್ರದೇಶದಲ್ಲಿ ಹಲವಾರು ರೈತರನ್ನು ಭೇಟಿಯಾಗಿದ್ದೆ. ಈ ವೇಳೆ ಅವರು ನನ್ನೊಡನೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮಾಡಿರುವ ಭ್ರಷ್ಟಾಚಾರ ದೇಶದಲ್ಲೇ ಎಲ್ಲಿಯೂ ನಡೆದಿಲ್ಲ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಭರವಸೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page