Wednesday, November 6, 2024

ಸತ್ಯ | ನ್ಯಾಯ |ಧರ್ಮ

ನ.8 ರಿಂದ 18 ರ ವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ನಿಕೋಲಸ್ ರೋರಿಕ್ ಕಲಾಕೃತಿಗಳ ಪ್ರದರ್ಶನ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನವೆಂಬರ್‌ 8 ರಿಂದ 18 ರ ವರೆಗೆ ವಿಶ್ವಪ್ರಸಿದ್ದ ಕಲಾವಿದ, ಬರಹಗಾರ ಮತ್ತು ತತ್ವಜ್ಞಾನಿ ಪ್ರೊ. ನಿಕೋಲಸ್ ರೋರಿಕ್ ರವರ 150ನೇ ಜನ್ಮಶತಮಾನೋತ್ಸವದ ಕಲಾಕೃತಿ ಪ್ರದರ್ಶನ ನಡೆಯಲಿದೆ.

ರಷ್ಯಾದ ಕಲಾವಿದ ಪ್ರೊ.ನಿಕೋಲಸ್ ರೋರಿಕ್ ಅವರು ಭಾರತದ ಹಿಂದೂ ಧರ್ಮ, ಯೋಗ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. 1920 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇವರು ಹಿಮಾಲಯದ ಮೇಲೆ ಅನೇಕ ಕಲಾಕೃತಿಗಳನ್ನು ರಚಿಸಿದ್ದರು.

ಚಿತ್ರಕಲಾ ಪರಿಷತ್‌ನಲ್ಲಿ ಇವರ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ. ನವೆಂಬರ್‌ 8 ರಂದು ಬೆಳಗ್ಗೆ 11:30 ಕ್ಕೆ ನಡೆಯಲಿರುವ ಪ್ರದರ್ಶನದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಚೆನ್ನೈನ ರಷ್ಯನ್ ಫೆಡರೇಶನ್‌ನ ಜನರಲ್ ವ್ಯಾಲೆರಿ ಕಾಝೀವ್ ಕಾನ್ಸುಲ್, ಭೋರೂಕ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್‌ ಟ್ರಸ್ಟ್‌ನ ಉಪಾಧ್ಯಕ್ಷರಾದ ಎನ್. ಅಗರವಾಲ್ ಅವರು ಉಪಸ್ತಿತರಿರಲಿದ್ದಾರೆ. ಕಾರ್ಯಕ್ರಮದ ಕುರಿತು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸ್ಥಳ: ಗ್ಯಾಲರಿ 1 ಮತ್ತು 2, ಕರ್ನಾಟಕ ಚಿತ್ರಕಲಾ ಪರಿಷತ್ತು

Related Articles

ಇತ್ತೀಚಿನ ಸುದ್ದಿಗಳು

You cannot copy content of this page