Saturday, March 15, 2025

ಸತ್ಯ | ನ್ಯಾಯ |ಧರ್ಮ

ಗೋಡ್ಸೆಯನ್ನು ಹೊಗಳಿದ ಎನ್ಐಟಿ ಪ್ರಾಧ್ಯಾಪಕಿ ಡೀನ್ ಆಗಿ ನೇಮಕ; ವಿವಾದ

ಮಹಾತ್ಮ ಗಾಂಧಿಯವರ ಮೇಲಿನ ನಾಥುರಾಮ್ ಗೋಡ್ಸೆಯ ದಾಳಿಯನ್ನು ಹೊಗಳಿದ ಎನ್‌ಐಟಿ-ಕ್ಯಾಲಿಕಟ್ ಪ್ರಾಧ್ಯಾಪಕರೊಬ್ಬರ ಬಡ್ತಿ ಕೇರಳದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಅವರನ್ನು ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಯಿತು. ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ)ಯ ನಿರ್ದೇಶಕರು ಹೊರಡಿಸಿದ ಆದೇಶದಲ್ಲಿ, ಮಾರ್ಚ್ 7 ರಿಂದ ಜಾರಿಗೆ ಬರುವಂತೆ ಡಾ. ಶೈಜಾ ಎ ಅವರನ್ನು ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಡೀನ್ ಆಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಲಪಂಥೀಯ ವಕೀಲರೊಬ್ಬರು ಹಂಚಿಕೊಂಡ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಶೈಜಾ ಅವರು ಗೋಡ್ಸೆಯನ್ನು ಹೊಗಳಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಕಮ್ಯುನಿಸ್ಟ್ ಬಣಗಳು, ವಿದ್ಯಾರ್ಥಿ ಸಂಘಗಳಾದ ಡಿವೈಎಫ್‌ಐ, ಎಸ್‌ಎಫ್‌ಐ ಮತ್ತು ಯುವ ಕಾಂಗ್ರೆಸ್‌ನಂತಹ ಸಂಘಟನೆಗಳು ಆಕೆಯ ವಿರುದ್ಧ ದೂರು ನೀಡಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಶೈಜಾರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಕೆಲವು ರಾಜಕೀಯ ಪಕ್ಷಗಳು ಈಗ ಶೈಜಾ ಅವರನ್ನು ಡೀನ್ ಆಗಿ ನೇಮಿಸುವುದನ್ನು ತೀವ್ರವಾಗಿ ವಿರೋಧಿಸುತ್ತಿವೆ. ಸಿಪಿಎಂ ಅಂಗಸಂಸ್ಥೆ ಘಟಕಗಳು ಪ್ರತಿಭಟನೆಗೆ ಕರೆ ನೀಡಿವೆ. ಶೈಜಾ ಎರಡು ವರ್ಷಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಡೀನ್ ಆಗಿ ಉಳಿಯುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page