Friday, July 19, 2024

ಸತ್ಯ | ನ್ಯಾಯ |ಧರ್ಮ

“ರಾಜ್ಯಪಾಲರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡುವಂತಿಲ್ಲ” : ಮಮತಾ ಬ್ಯಾನರ್ಜಿಗೆ ನ್ಯಾಯಾಲಯ ಆದೇಶ

ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ತಪ್ಪು ಹೇಳಿಕೆ ನೀಡದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ನಿರ್ಬಂಧ ವಿಧಿಸಿದೆ.

ಅವಹೇಳನಕಾರಿ ಹೇಳಿಕೆಗಳಿಗಾಗಿ ಮುಖ್ಯಮಂತ್ರಿ ಮತ್ತು ಪಶ್ಚಿಮ ಬಂಗಾಳದ ಇಬ್ಬರು ಶಾಸಕರು ಮತ್ತು ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ರಾಜ್ಯಪಾಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆ ಮೂಲಕ ರಾಜ್ಯಪಾಲರು ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಪಾಲರ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ವಿಚಾರವಾಗಿ “ಮಹಿಳೆಯರು ಇನ್ನು ಮುಂದೆ ರಾಜಭವನ ಪ್ರವೇಶಿಸಲು ಸುರಕ್ಷಿತವಾಗಿಲ್ಲ” ಎಂದು ಮಮತಾ ಈ ಹಿಂದೆ ಹೇಳಿದ್ದರು.

ಸಿವಿ ಆನಂದ ಬೋಸ್ ಸಾಂವಿಧಾನಿಕ ಅಧಿಕಾರಿಯಾಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಮಮತಾ ಬ್ಯಾನರ್ಜಿ ಮತ್ತು ಇತರ ಟಿಎಂಸಿ ನಾಯಕರು ಅವರ ವಿರುದ್ಧ ಮಾಡುತ್ತಿರುವ ವೈಯಕ್ತಿಕ ದಾಳಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮಂಗಳವಾರ ಹೇಳಿದೆ.

ಸೂಕ್ತ ಪ್ರಕರಣಗಳಲ್ಲಿ ಫಿರ್ಯಾದಿಯ ಪ್ರತಿಷ್ಠೆಗೆ ಹಾನಿಯನ್ನುಂಟುಮಾಡುವ ಸಲುವಾಗಿ ಅಜಾಗರೂಕ ರೀತಿಯಲ್ಲಿ ಹೇಳಿಕೆಗಳನ್ನು ನೀಡಲಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೆ, ಈ ಹಂತದಲ್ಲಿ, ಮಧ್ಯಂತರ ಆದೇಶವನ್ನು ನೀಡಲಾಗುವುದಿಲ್ಲ, ಇದು ಫಿರ್ಯಾದಿಯ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಲು ಮತ್ತು ಫಿರ್ಯಾದಿಯ ಪ್ರತಿಷ್ಠೆಗೆ ಕಳಂಕ ತರಲು ಪ್ರತಿವಾದಿಗಳಿಗೆ ಮುಕ್ತ ಹಸ್ತವನ್ನು ನೀಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ನ್ಯಾಯಾಲಯವು ಮಮತಾ ಬ್ಯಾನರ್ಜಿ ಮತ್ತು ಇತರರು ಬೋಸ್ ವಿರುದ್ಧ ಯಾವುದೇ ಮಾನಹಾನಿಕರ ಅಥವಾ ತಪ್ಪಾದ ಹೇಳಿಕೆಯನ್ನು “ಪ್ರಕಟಣೆಯ ಮೂಲಕವಾಗಲಿ ಮತ್ತು ಸಾಮಾಜಿಕ ವೇದಿಕೆಗಳಲ್ಲಿ 14 ಆಗಸ್ಟ್ 2024 ರವರೆಗೆ” ನಿರ್ಬಂಧಿಸಿದೆ.

ಈ ನಡುವೆ ರಾಜಭವನದ ಕುರಿತು ನೀಡಿರುವ ಹೇಳಿಕೆಯಲ್ಲಿ ಮಾನಹಾನಿಕರವಾದ ಯಾವುದೇ ಅಂಶವಿಲ್ಲ ಎಂದು ಮಮತಾ ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು