ನವದೆಹಲಿ, ಆಗಸ್ಟ್ 22: ಒಂದು ಸುದ್ದಿ ವರದಿಯ ಕುರಿತು ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ, ‘ದಿ ವೈರ್’ ಸುದ್ದಿ ಪೋರ್ಟಲ್‌ನ ಹಿರಿಯ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮತ್ತು ಸಲಹಾ ಸಂಪಾದಕರು ಸೇರಿದಂತೆ ಇತರ ಪತ್ರಕರ್ತರ ಮೇಲೆ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಸ್ಸಾಂ ಪೊಲೀಸರಿಗೆ ನಿರ್ದೇಶಿಸಿದೆ.
ಹಿರಿಯ ವಕೀಲೆ ನಿತ್ಯಾ ರಾಮಕೃಷ್ಣನ್ ಅವರು ಪತ್ರಕರ್ತರ ಪರವಾಗಿ, ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೋಯಮಾಲ್ಯಾ ಬಾಗ್ಚಿ ಅವರಿದ್ದ ಪೀಠದ ಗಮನಕ್ಕೆ ಈ ವಿಷಯವನ್ನು ತಂದರು.
ಅಸ್ಸಾಂ ಪೊಲೀಸರು ಈ ಹಿಂದೆ ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶಗಳನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಪತ್ರಕರ್ತರ ಬಂಧನದ ಬಗ್ಗೆ ಅನುಮಾನಗಳಿವೆ ಎಂದು ಅವರು ತಿಳಿಸಿದರು.