Saturday, June 15, 2024

ಸತ್ಯ | ನ್ಯಾಯ |ಧರ್ಮ

ಹಿಂದೂ ಎಂಬ ಧರ್ಮವೇ ಇರಲಿಲ್ಲ : ಕಮಲ್‌ ಹಾಸನ್‌

ಹಿಂದೂ ಎಂಬ ಧರ್ಮವೇ ಇರಲಿಲ್ಲ. ಬ್ರಿಟಿಷರು ತಮ್ಮ ಅನುಕೂಲಕ್ಕಾಗಿ ಹಿಂದೂ ಎಂಬ ಪದವನ್ನು ಸೃಷ್ಟಿಸಿಕೊಂಡಿದ್ದರು ಎಂದು ಖ್ಯಾತ ನಟ ಕಮಲ್‌ ಹಾಸನ್‌ ಹೇಳಿದ್ದಾರೆ.

ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ ಎಂದು ಖ್ಯಾತ ತಮಿಳು ಸಿನಿಮಾ ನಿರ್ದೇಶಕ ವೆಟ್ರಿಮಾರನ್‌ ಹೇಳಿಕೆ ಸಮರ್ಥಿಸಿಕೊಂಡ ಕಮಲ್ ಹಾಸನ್‌, ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ. ವೈನವಂ, ಶಿವಂ ಮತ್ತು ಸಮನಂ ಮಾತ್ರ ಇತ್ತು. ಹಿಂದೂ ಎಂಬ ಪದವನ್ನು ಬ್ರಿಟಿಷರು ತಮ್ಮ ಲಾಭಕ್ಕಾಗಿ ಸೃಷ್ಟಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ್ದ ವೆಟ್ರಿಮಾರನ್‌, ನಮ್ಮ ಹೆಗ್ಗುರುತುಗಳನ್ನು ಒಂದಾದ ಮೇಲೊಂದರಂತೆ ನಮ್ಮಿಂದ ಕಿತ್ತುಕೊಳ್ಳಲಾಗುತ್ತಿದೆ. ಮೊದಲು ತಿರುವಳ್ಳುವರ್‌ ಅವರನ್ನು ಕೇಸರೀಕರಣಗೊಳಿಸಿದರು. ರಾಜ ರಾಜ ಚೋಳನನ್ನು ಹಿಂದೂ ಎಂದು ಕರೆಯುತ್ತಿದ್ದಾರೆ. ಆದರೆ ತಂಜಾವೂರಿನ ಜಗತ್ಪ್ರಸಿದ್ಧ ಬೃಹದೀಶ್ವರ ದೇವಸ್ಥಾನವನ್ನು ನಿರ್ಮಿಸಿದ ರಾಜ ರಾಜ ಚೋಳ ಹಿಂದೂ ಅಲ್ಲ ಎಂದು ಹೇಳಿದ್ದಾರೆ.

ವೆಟ್ರಿಮಾರನ್‌ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ‘ರಾಜ ರಾಜ ಚೋಳ ಹಿಂದೂ ರಾಜ. ಆತ ತನ್ನನ್ನು ಶಿವಪಾದ ಶೇಖರ ಎಂದು ಕರೆದುಕೊಂಡಿದ್ದ. ಆತ ಹಿಂದೂ ಅಲ್ಲವೇ? ಅವನು ನಿರ್ಮಿಸಿದ ಒಂದು ಚರ್ಚ್‌ ಅಥವಾ ಮಸೀದಿ ತೋರಿಸಿ ನೋಡೋಣ? ಎಂದು ಸವಾಲು ಹಾಕಿ ಈ ಹೇಳಿಕೆಯನ್ನು ವಿವಾದಕ್ಕೆ ದೂಡಿದೆ.

Related Articles

ಇತ್ತೀಚಿನ ಸುದ್ದಿಗಳು