Thursday, June 27, 2024

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊಟ್ಟಿರುವ ಸವಲತ್ತು ಬೇರೆ ಯಾವ ಪಕ್ಷಗಳು ಕೊಟ್ಟಿಲ್ಲ:  ಯಡಿಯೂರಪ್ಪ

ದೊಡ್ಡಬಳ್ಳಾಪುರ: ಭಾರತೀಯ ಜನತಾ ಪಕ್ಷವು ಮೂರು ವರ್ಷ ಅಧಿಕಾರವನ್ನು ಪೂರೈಸಿರುವ ಪ್ರಯುಕ್ತ ‘ಜನಸ್ಪಂದನ’ ಸಮಾವೇಶವನ್ನು ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಈ ಕ್ರಾರ್ಯಕ್ರಮವು ಹಲವಾರು ಹಿರಿಯರ ಪರಿಶ್ರಮದಿಂದ ನಡೆಯುತ್ತಿದೆ, ಡಾ.ಸುಧಾಕರ್‌ ಅವರ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿ ನಾಯಕರು ಗೆದ್ದಿರುವಂತೆ, ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯವನ್ನು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಕೊಟ್ಟಿರುವ ಸವಲತ್ತುಗಳನ್ನು ಬೇರೆ ಯಾವ ಪಕ್ಷಗಳು ಕೊಟ್ಟಿಲ್ಲ, ಇತ್ತೀಚಿಗೆ ರಾಹುಲ್‌ ಗಾಂಧಿ ಅವರು ಬಡತನದ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಆವರ ಮನೆಯಲ್ಲಿ ಮೂರು ಜನ ಪ್ರಧಾನ ಮಂತ್ರಿಮಂತ್ರಿಗಳಾಗಿದ್ದರು ಆದರೂ ಬಡತನ ಕಡಿಮೆಯಾಗಿದೆಯ ಎಂದು ಪ್ರಶ್ನಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿಯು ದೇಶದಲ್ಲಿ ಉತ್ತಮ ಅಧಿಕಾರವನ್ನು ನಡೆಸುತ್ತಿದ್ದು, ಬಡವರ ಪರವಾಗಿ, ಮಹಿಳೆಯರ ಪರವಾಗಿ, ರೈತರ ಪರವಾಗಿ, ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು