Saturday, March 1, 2025

ಸತ್ಯ | ನ್ಯಾಯ |ಧರ್ಮ

1ನೇ ತರಗತಿ ದಾಖಲಾತಿಗೆ ವರ್ಷದ ಮಿತಿಯಲ್ಲಿ ಸಡಿಲಿಕೆ ಇಲ್ಲ: ಸಚಿವ ಮಧು ಬಂಗಾರಪ್ಪ

1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಮಗುವಿಗೆ 6 ವರ್ಷವಾಗಿರಬೇಕು ಎಂಬ ನಿಯಮದಲ್ಲಿ ಯಾವುದೇ ಸಡಿಲಿಕೆ ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 1ನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರುವುದು ಕಡ್ಡಾಯ ಎಂದು ಹೇಳಿದ್ದಾರೆ.

ಈ ನಿಯಮದಲ್ಲಿ ಸಡಿಲಿಕೆ ಮಾಡಲು ಸಾಧ್ಯವಿಲ್ಲ. ಅನೇಕರು ಈ ಬಗ್ಗೆ ಕೋರ್ಟ್ ಗೆ ಹೋಗಿದ್ದಾರೆ. ಕೋರ್ಟ್ ಕೂಡ ಅವರ ಅರ್ಜಿ ವಜಾಗೊಳಿಸಿದೆ. ಕೋರ್ಟಿನ ತೀರ್ಪು ಹೇಗಿರುತ್ತದೆಯೋ ಅದಕ್ಕೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

6 ವರ್ಷ ತುಂಬಲು ಒಂದು ತಿಂಗಳು, ಎರಡು ತಿಂಗಳು ಕಡಿಮೆಯಿರುವ ಒಂದು ಮಗುವಿಗೆ ಅವಕಾಶ ಕೊಟ್ಟರೆ ಮತ್ತೊಬ್ಬರು ಕೇಳುತ್ತಾರೆ. 1ನೇ ತರಗತಿ ದಾಖಲಾತಿ ಮಾಡಿಕೊಳ್ಳಲು 6 ವರ್ಷವಾಗಿರಬೇಕು ಎನ್ನುವುದು ಕಡ್ಡಾಯ. ನಿಯಮವನ್ನು ನಾವು ಪಾಲಿಸಲೇಬೇಕು.

ವಿಚಾರ ಸದ್ಯ ಕೋರ್ಟಿನಲ್ಲಿದೆ. ಕೋರ್ಟಿನ ಆದೇಶ ಬಂದ ನಂತರವಷ್ಟೇ ಅದನ್ನು ಆಧಾರವಾಗಿರಿಸಿಕೊಂಡು ಈ ಕುರಿತು ಸ್ಪಷ್ಟವಾದ ನಿರ್ಧಾರ ತಿಳಿಸಲು ಸಾಧ್ಯ ಎಂದು ಸಚಿವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page