Friday, October 10, 2025

ಸತ್ಯ | ನ್ಯಾಯ |ಧರ್ಮ

ಡೊನಾಲ್ಡ್ ಟ್ರಂಪ್‌ಗೆ ಬಾರಿ ನಿರಾಸೆ; ಮಾರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ

ಸಿಕ್ಕ ಸಿಕ್ಕಲ್ಲಿ ತನಗೆ ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರ ಸಿಗಲೇಬೇಕು, ನಾನು 7 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆಗೆ ನೋಬೆಲ್ ಶಾಂತಿ ಪ್ರಶಸ್ತಿ ಕೈತಪ್ಪಿದೆ. ಏತನ್ಮಧ್ಯೆ ಮಾರಿಯಾ ಕೊರಿನಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ ಲಭ್ಯವಾಗಿದೆ.

ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಣೆಯ ವಿಶೇಷ ಸೇವೆಗಾಗಿ ಮಾರಿಯಾ ಕೊರಿನಾ ಮಚಾಡೋ’ಗೆ 2025 ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಲಭ್ಯವಾಗಿದೆ. ವೆನೆಜುವೆಲಾದ ಪ್ರಜಾಪ್ರಭುತ್ವ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದ ಮಾರಿಯಾ ಕೊರಿನಾ ಮಚಾಡೋ, ಮುಕ್ತ ಚುನಾವಣೆಗಳು ಮತ್ತು ಪ್ರಾತಿನಿಧಿಕ ಸರ್ಕಾರವನ್ನು ಖಚಿತಪಡಿಸಿಕೊಳ್ಳಲು ಅವರ ಅವಿಶ್ರಾಂತ ಪ್ರಯತ್ನಗಳಿಗಾಗಿ ಗುರುತಿಸಲ್ಪಟ್ಟಿದ್ದಾರೆ. 1967 ರಲ್ಲಿ ಕ್ಯಾರಕಾಸ್‌ನಲ್ಲಿ ಜನಿಸಿದ ಮಚಾದೊ, 2002 ರಲ್ಲಿ ಸುಮೇಟ್(ರಾಜಕೀಯ ಹಕ್ಕುಗಳನ್ನು ಉತ್ತೇಜಿಸುವ ಮತ್ತು ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಸ್ವಯಂಸೇವಕ ಗುಂಪು) ಅನ್ನು ಸ್ಥಾಪಿಸುವ ಮೊದಲು ಕೈಗಾರಿಕಾ ಎಂಜಿನಿಯರ್ ಆಗಿ ತರಬೇತಿ ಪಡೆದರು.

ಇತ್ತ ಜಗತ್ತಿನ ಹಲವು ದೇಶಗಳನ್ನು ಬೆದರಿಸುತ್ತಾ, ಸುಂಕ ಏರಿಸಿ ಜಾಗತಿಕವಾಗಿ ಆರ್ಥಿಕ ಅಸಮತೋಲನಕ್ಕೆ ಕಾರಣವಾಗಿ, ಮತ್ತೊಂದೆಡೆ ಯುದ್ಧ ನಿಲ್ಲಿಸಿದ ಬಿಟ್ಟಿ ಕ್ರೆಡಿಟ್ ಪಡೆಯುತ್ತಾ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕೆಂಬ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಸು ಭಗ್ನವಾದಂತಾಗಿದೆ. ಜಗತ್ತಿನ ಏಳು ಯುದ್ಧಗಳನ್ನು ತಾನು ಕೊನೆಗೊಳಿಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದರು.

ನೊಬೆಲ್‌ ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್‌ ಅಕಾಡೆಮಿಯು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪುರಸ್ಕರಿಸುವಾಗ ಪ್ರಮುಖವಾಗಿ ವ್ಯಕ್ತಿ ಅಥವಾ ಸಂಸ್ಥೆಗಳ ಪ್ರಯತ್ನದಿಂದ ಶಾಂತಿಯು ಎಷ್ಟು ದೀರ್ಘಾವಧಿವರೆಗೆ ನೆಲೆಸಿದೆ ಮತ್ತು ಅಂತಾರಾಷ್ಟ್ರೀಯ ಭ್ರಾತೃತ್ವಕ್ಕೆ ಇದರ ಕೊಡುಗೆ ಏನು ಎನ್ನುವ ಅಂಶವನ್ನೇ ಮುಖ್ಯವಾಗಿ ಪರಿಶೀಲಿಸುತ್ತದೆ.

ಈ ಹಿಂದೆ ಅಮೇರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾಗೆ ನೋಬೆಲ್ ಪ್ರಶಸ್ತಿ ಲಭಿಸಿದ್ದಕ್ಕೆ ರಾಯಲ್ ಸ್ವೀಡಿಶ್‌ ಅಕಾಡೆಮಿಯು ತೀವ್ರ ಟೀಕೆಗೆ ಗುರಿಯಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page