Saturday, June 15, 2024

ಸತ್ಯ | ನ್ಯಾಯ |ಧರ್ಮ

‘ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವವರು ರೈತರಲ್ಲ, ಖಲಿಸ್ತಾನಿಗಳು’: ಸಂಸದ ಅನಂತಕುಮಾರ್ ಹೆಗಡೆ

ಬೆಂಗಳೂರು: ಹೊಸದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವವರು ರೈತರಲ್ಲ, ಖಲಿಸ್ತಾನಿಗಳು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಶನಿವಾರ ಹೇಳಿದ್ದಾರೆ.

“ಅವರು ಹೈ ಎಂಡ್ ಕಾರುಗಳಲ್ಲಿ ಬರುತ್ತಾರೆ. ರೈತರ ಬಳಿ ಇಷ್ಟು ಹಣ ಇರುತ್ತದೆಯೇ? ಪ್ರತಿಭಟನೆ ನಡೆಸುವವರು ರೈತರಲ್ಲ. ಇದು ರೈತರ ಆಂದೋಲನವಲ್ಲ. ಇದು ರಾಷ್ಟ್ರ ದ್ರೋಹಿಗಳು ನಡೆಸುತ್ತಿರುವ ಪ್ರತಿಭಟನೆ. ಇದು ಖಲಿಸ್ತಾನಿಗಳ ಆಂದೋಲನವಾಗಿದ್ದು ಇದನ್ನು ರೈತರ ಪ್ರತಿಭಟನೆ ಎಂದು ಕರೆಯಲಾಗುತ್ತಿದೆ. ಇವರು ವಿದೇಶಗಳಿಂದ ಹಣ ಪಡೆದಿದ್ದಾರೆ’ ಎಂದು ಹೆಗ್ಗಡೆ ಹೇಳಿದರು.

ತಾರತಮ್ಯ ಮತ್ತು ಅನ್ಯಾಯವನ್ನು ಪ್ರತಿಪಾದಿಸುವ ಈ ರೈತರು ಪ್ರತಿಭಟನಾ ಕರೆ ನೀಡಿದಾಗಲೆಲ್ಲಾ ಹೈ ಎಂಡ್ ಕಾರುಗಳು ಮತ್ತು ಹೊಸ ಟ್ರ್ಯಾಕ್ಟರ್‌ಗಳಲ್ಲಿ ಬರುತ್ತಾರೆ ಎಂದು ಅವರು ಹೇಳಿದರು.

ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿದ ಹೆಗ್ಗಡೆ, ಅವರು ಕೇಳಿದಷ್ಟು ಹಣ ಮಂಜೂರು ಮಾಡುವುದಕ್ಕೆ ಅದು ಅವರ ಅಪ್ಪನ ಆಸ್ತಿಯಲ್ಲ ಎಂದರು.

ಉತ್ತಮ ಸಂಬಂಧವನ್ನು ಕಾಯ್ದುಕೊಂಡು ರಾಜ್ಯದಿಂದ ಪ್ರಸ್ತಾವನೆಗಳನ್ನು ಸಲ್ಲಿಸಿದರೆ ಮತ್ತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸಿದರೆ, ಹಣ ಹಂಚಿಕೆ ಸೇರಿದಂತೆ ಎಲ್ಲವೂ ಸುಗಮವಾಗುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆ ರೀತಿ ಆಗುವುದು ಬೇಡ,” ಎಂದರು.

ನನ್ನ ವೃತ್ತಿ ಜೀವನದಲ್ಲಿ ನಾನು ಅನೇಕ ಸರ್ಕಾರಗಳು ಮತ್ತು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ ಆದರೆ ಇದುವರೆಗೆ ಅಂತಹ ಸರ್ಕಾರವನ್ನು ಕಂಡಿಲ್ಲ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು