Thursday, June 20, 2024

ಸತ್ಯ | ನ್ಯಾಯ |ಧರ್ಮ

ಪಕ್ಷ ವಿರೋಧಿ ಚಟುವಟಿಕೆ: ಬಿ ಕೆ ಹರಿಪ್ರಸಾದ್‌ಗೆ ಹೈಕಮಾಂಡ್ ನೋಟೀಸ್‌ ಜಾರಿ

ದೆಹಲಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ‌, ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಅವರು ಇತ್ತೀಚಿನ ದಿನಗಳಲ್ಲಿ ಬಹಿರಂಗ ವೇದಿಕೆಗಳಲ್ಲಿ ತನ್ನದೇ ಪಕ್ಷದ ನಾಯಕರ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೇ ಅಗಿದೆ.

ಹೊಸ ಸರ್ಕಾರದಲ್ಲಿ ತನ್ನನ್ನು ಮಂತ್ರಿ ಮಾಡದ ಸಿಟ್ಟನ್ನು ಅವರು ವಿವಿಧ ವೇದಿಕೆಗಳಲ್ಲಿ ಹೊರ ಹಾಕುತ್ತಿದ್ದು, ಮೊನ್ನೆಯೂ ಬಲಪಂಥೀಯ ನಾಯಕನಾಗಿ ಗುರುತಿಸಿಕೊಂಡಿದ್ದ ಪ್ರಣವಾನಂದ ಸ್ವಾಮಿ ಎನ್ನುವ ವ್ಯಕ್ತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಕಿಡಿಕಾರಿದ್ದರು.

ಈ ಹಿನ್ನೆಲೆಯಲ್ಲಿ AICC ಹರಿಪ್ರಸಾದ್‌ ಅವರಿಗೆ ನೋಟೀಸ್‌ ಜಾರಿ ಮಾಡಿದ್ದು, 10 ದಿನಗಳ ಒಳಗೆ ಉತ್ತರ ನೀಡುವಂತೆ ಕೇಳಿದೆ. ಸಮಾನ ಮನಸ್ಕರ ಸಭೆ ಏರ್ಪಡಿಸಿದ್ದಕ್ಕೆ ಕಾರಣ ನೀಡುವಂತೆ ನೋಟೀಸಿನಲ್ಲಿ ಕೇಳಲಾಗಿದೆ ಎನ್ನಲಾಗಿದೆ.

ಬಾಕಿ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು