Friday, June 14, 2024

ಸತ್ಯ | ನ್ಯಾಯ |ಧರ್ಮ

ನವೆಂಬರ್‌ 11 ರಂದು ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ರಾಜ್ಯ ತಂಡದ ಆಯ್ಕೆ

ದಾವಣಗೆರೆ : ರಾಷ್ಟೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಕರ್ನಾಟಕ ರಾಜ್ಯ ಟೀಮ್‌ ಆಯ್ಕೆಯಾಗಿದ್ದು, ನವೆಂಬರ್‌ 11ರಂದು ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್‌ ತಂಡದ ಆಯ್ಕೆ ನಡೆಯಲಿದೆ. ಸಂಜೆ ಸಮಾರಂಭದಲ್ಲಿ ಕ್ರೀಡಾಪಟುಗಳಾದ ಕೆ.ಎಸ್‌ ಸಾಯಿನಾಥ್‌, ಫಕ್ರುದ್ದೀನ್‌ರವರಿಗೆ ʼಡಾ.ಪುನೀತ್‌ ರಾಜ್ ಕುಮಾರ್‌ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಂದ್ರ ಪ್ರದೇಶದ ವಿಶಾಕಪಟ್ಟಣಂನಲ್ಲಿ ಜನವರಿ 4 ರಿಂದ 8ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಈ ಸಲುವಾಗಿ ನವೆಂಬರ್‌ 11ರಂದು ಕರ್ನಾಟಕ ರಾಜ್ಯ ಪವರ್‌ ಲಿಫ್ಟಿಂಗ್‌ ಅಸೋಸಿಯೇಷನ್‌ ವತಿಯಿಂದ  ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್‌ ತಂಡದ ಆಯ್ಕೆ ಪ್ರಕ್ರಿಯೆಗೆ ಸ್ಪರ್ಧೆಗಳನ್ನು ಹಮ್ಮಿಗೊಳ್ಳಲಾಗಿದೆ.

ದಾವಣಗರೆ ನಗರದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ನಾನಾ ಜಿಲ್ಲೆಯ ಪುರುಷ ಹಾಗೂ ಮಹಿಳೆಯರು ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯು ಕಿರಿಯ, ಹಿರಿಯ ಮತ್ತು ವಯಸ್ಕರ ಎಂಬ 3 ವಯೋಮಾನಗಳಲ್ಲಿ ನಡೆಯಲಿದ್ದು, ದೇಹದ ತೂಕದ ಆಧಾರದ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಅಧ್ಯಕ್ಷರು ಶಾಸಕರ ಆದ ಎಸ್‌.ವಿ.ರಾಮಚಂದ್ರರು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಪವರ್‌ ಲಿಫ್ಟಿಂಗ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಅನೇಕ ಕ್ರೀಡಾಪಟುಗಳಿಗೆ ಮಾರ್ಗದರ್ಶಿಯಾದ ಅಂತರಾಷ್ಟ್ರೀಯ ಕ್ರೀಡಾ ಪಟುವಾದ ಕೆ.ಎಸ್‌.ಸಾಯಿನಾಥ್‌ ಮತ್ತು ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಫಕ್ರುದ್ದೀನ್‌ ಇಬ್ಬರಿಗೂ ʼಡಾ.ಪುನೀತ್‌ ರಾಜ್ ಕುಮಾರ್‌ ಕ್ರೀಡಾ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಗುವುದು. ಹಾಗೆಯೇ ಸ್ಪರ್ಧೆಯ ವಿಜೇತರಿಗೆ ಪದಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪವರ್‌ ಲಿಫ್ಟಿಂಗ್‌ ಅಸೋಸಿಯೇಷನ್‌ ಕಾರ್ಯದರ್ಶಿ ಲಕ್ಶ್ಮೀದೇವಿ ದಯಾನಂದ್‌ ಮಾಹಿತಿ ನೀಡದ್ದಾರೆ.

Related Articles

ಇತ್ತೀಚಿನ ಸುದ್ದಿಗಳು