Monday, June 17, 2024

ಸತ್ಯ | ನ್ಯಾಯ |ಧರ್ಮ

ಇಲ್ಲದ ಮಳೆಗೆ ಬಸ್ಸಿನೊಳಗೆ ಕೊಡೆ ಹಿಡಿದ ಡ್ರೈವರ್‌, ವಿಡಿಯೋ ಮಾಡಿದ ಕಂಡಕ್ಟರ್:‌ ಇಬ್ಬರನ್ನೂ ಮನೆಗೆ ಕಳುಹಿಸಿದ ಸಾರಿಗೆ ಇಲಾಖೆ

ಕಳೆದೆರಡು ದಿನಗಳಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈವಿಡಿಯೋದಲ್ಲಿ ಬಸ್ ಚಾಲಕ ಕೊಡೆ ಹಿಡಿದುಕೊಂಡು ಒಂದೇ ಕೈಯಲ್ಲಿ ಬಸ್ ಓಡಿಸುತ್ತಿದ್ದಾರೆ.

ಇದನ್ನು ಅಲ್ಲಿದ್ದ ಕಂಡಕ್ಟರ್ ವಿಡಿಯೋ ರೆಕಾರ್ಡ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಇದೀಗ ಇಬ್ಬರನ್ನೂ ಅಮಾನತು ಮಾಡಲಾಗಿದೆ. ಈ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮನರಂಜನೆಗಾಗಿ ಈ ವಿಡಿಯೋ ತೆಗೆದಿದ್ದಾರೆ ಎನ್ನಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (nwkrtc) ಪ್ರಕಾರ, ಈ ಘಟನೆ ಗುರುವಾರ ನಡೆದಿದೆ. ಈ ವೇಳೆ ಬಸ್ ಚಾಲಕ ಹನುಮಂತಪ್ಪ ಕಿಲ್ಲೇದಾರ ಹಾಗೂ ಕಂಡಕ್ಟರ್ ಅನಿತಾ ಕರ್ತವ್ಯದಲ್ಲಿದ್ದರು. ಚಾಲಕ ಬೆಟಗೇರಿ-ಧಾರವಾಡ ಮಾರ್ಗವಾಗಿ ಬಸ್ ಚಲಾಯಿಸುತ್ತಿದ್ದ. ಸಂಜೆ ಬಸ್ಸಿನಲ್ಲಿ ಪ್ರಯಾಣಿಕರಿರಲಿಲ್ಲ. ಆಗ ಚಾಲಕ ತನ್ನ ವಿನೋದಕ್ಕಾಗಿ ಕೊಡೆ ಹಿಡಿದು ಅದೇ ಇನ್ನೊಂದು ಕೈಯಿಂದ ಬಸ್ ಓಡಿಸಿದ್ದಾನೆ. ಅದೇ ಸಮಯಕ್ಕೆ ಬಸ್ಸಿನಲ್ಲಿದ್ದ ಕಂಡಕ್ಟರ್ ಎಚ್.ಅನಿತಾ ಇಡೀ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ವಿಡಿಯೋ ವೈರಲ್ ಆದ ನಂತರ ಜನರು ರಾಜ್ಯ ಸರ್ಕಾರದ ವಿರುದ್ಧ ಕಾಮೆಂಟ್ ಮಾಡಲು ಪ್ರಾರಂಭಿಸಿದರು. ನಂತರ NWCRTC ತಂಡವು ಬಸ್ಸನ್ನು ಪರಿಶೀಲಿಸಿತು. ಇಲಾಖೆಯ ತಾಂತ್ರಿಕ ಇಂಜಿನಿಯರ್ ಬಸ್ ಪರಿಶೀಲನೆ ನಡೆಸಿ ಮೇಲ್ಛಾವಣಿಯಲ್ಲಿ ಸೋರಿಕೆಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಮೋಜಿಗಾಗಿಯೇ ವಿಡಿಯೋ ತೆಗೆದಿರುವುದಾಗಿ ಚಾಲಕ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ, ಬಸ್‌ನಲ್ಲಿ ಯಾವುದೇ ತೊಂದರೆಯಿರದ ಕಾರಣ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಪೇಸ್ಬುಕ್‌ ಪೇಜ್‌ ಫಾಲೋ ಮಾಡಿ

https://www.facebook.com/PeepalMediaKannada

Related Articles

ಇತ್ತೀಚಿನ ಸುದ್ದಿಗಳು