Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅ.6 ರಂದು ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕಲಿರುವ ತಾಯಿ ಸೋನಿಯಾ ಗಾಂಧಿ

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಮಗನಿಗೆ ಸಾಥ್‌ ನೀಡಲು ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿಯವರು ಅಕ್ಟೋಬರ್‌ 4 ರಂದು ಕರ್ನಾಟಕಕ್ಕೆ ಬರಲಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ತಮ್ಮ ಮಗನ ಬೆಂಬಲವಾಗಿ ತಾಯಿ ಸೋನಿಯಾ ಗಾಂಧಿಯವರು ಅವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಅಕ್ಟೋಬರ್‌ 4 ರಂದು ಕಾಂಗ್ರೆಸ್‌ ಅಧಿನಾಯಕಿ ದೆಹಲಿಯಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅ.6 ರಂದು ಭಾರತ ಐಕ್ಯತಾ ಯಾತ್ರೆಯಲ್ಲಿ ಮಗ ರಾಹುಲ್‌ ಗಾಂಧಿಯ ಜೊತೆ ಹೆಜ್ಜೆ ಹಾಕಲಿದ್ದು ಯಾತ್ರೆಯ ಬಲವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ.

ಅಕ್ಟೋಬರ್‌ 4 ಮತ್ತು 5 ರಂದು ಕೊಡಗು ಜಿಲ್ಲೆಯ ಪ್ರತಿಷ್ಟಿತ ರೆಸಾರ್ಟ್‌ನಲ್ಲಿ ಉಳಿಯಲಿದ್ದು, ಕರ್ನಾಟಕದ ಪ್ರಸ್ತುತ ರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಕಸ್ತೂರ್ಬಾ ಮತ್ತು ಗಾಂಧೀಜಿಯವರ ದಾಂಪತ್ಯ ಜೀವನ ಮತ್ತು ಅವರಿಬ್ಬರ ಮಧ್ಯೆ ಇದ್ದಂತಹ ಪ್ರೀತಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಅವರಿಬ್ಬರ ಪ್ರೀತಿಯ ಬಂಧನ ಹೇಗಿತ್ತು? ಎಂಬುದನ್ನ ತಿಳಿಯಲು ಈ ವೀಡಿಯೋ ನೋಡಿ ನಿಮ್ಮ ಕಣ್ಣ ಮುಂದೆಯೇ ಅವರ ಪ್ರೀತಿ ಹಾದು ಹೋಗುವಂತೆ ಖ್ಯಾತ ವಾಗ್ಮಿ ‘ನಿಕೇತ್ ರಾಜ್’ ಮಾತನಾಡಿದ್ದಾರೆ

peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ
https://fb.watch/fVfwx17Wlr/

Related Articles

ಇತ್ತೀಚಿನ ಸುದ್ದಿಗಳು