Saturday, October 4, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳ ಪ್ರಕರಣ : ಅಕ್ಟೋಬರ್ 9 ರಾಜ್ಯಾದ್ಯಂತ ನ್ಯಾಯಕ್ಕಾಗಿ ಜನಾಗ್ರಹ ದಿನ

- ಧರ್ಮಸ್ಥಳ ಸೌಜನ್ಯ ಅತ್ಯಾಚಾರ- ಕೊಲೆಗೆ 13 ವರ್ಷ
- ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಕಾರ್ಯಕ್ರಮ

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯ ಅತ್ಯಾಚಾರ, ಕೊಲೆಯಾಗಿ 13 ವರ್ಷಗಳಾದ ಹಿನ್ನಲೆಯಲ್ಲಿ ಅಕ್ಟೋಬರ್ 09 ರಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ರಾಜ್ಯಾದ್ಯಂತ ‘ನ್ಯಾಯಕ್ಕಾಗಿ ಜನಾಗ್ರಹ ದಿನ’ ಎಂದು ಕಾರ್ಯಕ್ರಮ ಆಯೋಜಿಸಿದೆ.

ಅಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಂದು ಎಲ್ಲಾ ಜಿಲ್ಲೆಗಳಲ್ಲಿ ಸೌಜನ್ಯ ಭಾವಚಿತ್ರಕ್ಕೆ ಗೌರವ ಸಲ್ಲಿಕೆ, ಸಭೆ, ಮನವಿ‌ ಸಲ್ಲಿಕೆ, ಹಾಡುಗಳ ಕಾರ್ಯಕ್ರಮಗಳು ನಡೆಯಲಿದೆ ಎಂದು ವೇದಿಕೆ ತಿಳಿಸಿದೆ.

ಹಲವಾರು ಜನಪರ ಸಂಘಟನೆಗಳ ಭಾಗಿದಾರಿಕೆಯಲ್ಲಿ ನಡೆಯುವ ‘ನ್ಯಾಯಕ್ಕಾಗಿ ಜನಾಗ್ರಹ ದಿನ’ ಕಾರ್ಯಕ್ರಮದಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿ, ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ.

ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯ ಹಕ್ಕೊತ್ತಾಯಗಳು :
1. ಸೌಜನ್ಯ ಅತ್ಯಾಚಾರಿ-ಹಂತಕರಾಗಿರುವ ನೈಜ ಪ್ರಭಾವಿ ಆರೋಪಿಗಳನ್ನು ಬಂಧಿಸಬೇಕು
2. ಸೌಜನ್ಯ ಸಹಿತ ವೇದವಲ್ಲಿ, ಪದ್ಮಲತಾ, ಯಮುನಾ, ಮಾವುತ ನಾರಾಯಣ ಕೊಲೆ ಪ್ರಕರಣಗಳ ಮರು ತನಿಖೆ ಆಗಬೇಕು, ನ್ಯಾಯ ದೊರಕಬೇಕು.
3. ಅಸಹಜ ಸಾವುಗಳ SIT ತನಿಖೆ ನ್ಯಾಯಯುತವಾಗಿ ನಡೆಯಬೇಕು.
4. ಧರ್ಮಸ್ಥಳ ಭೂಹಗರಣ, ಮೈಕ್ರೊ ಫೈನಾನ್ಸ್ ಅಕ್ರಮಗಳ ಸಮಗ್ರ ತನಿಖೆ ನಡೆಸಬೇಕು.
5. ಎಸ್ಐಟಿ ತನಿಖೆ ದಾರಿ ತಪ್ಪಬಾರದು. ಷಡ್ಯಂತ್ರ ನಿಲ್ಲಬೇಕು
6. ನೂರಾರು ಅಸಹಜ ಸಾವು-ಕೊಲೆ ಆದ ಪ್ರದೇಶದ ಮಾಲೀಕರನ್ನು ವಿಚಾರಣೆ ನಡೆಸಿ
7. ಆರೋಪಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಿ
8. ದೂರುದಾರರು, ಸಾಕ್ಷಿಗಳು, ಹೋರಾಟಗಾರರ ಮೇಲಿನ ಪೊಲೀಸ್ ದೌರ್ಜನ್ಯ ನಿಲ್ಲಲಿ
9. ಸೌಜನ್ಯ, ವೇದವಲ್ಲಿ, ಪದ್ಮಲತಾ, ಯಮುನಾ ನಾರಾಯಣ ಕೊಲೆ ಪ್ರಕರಣ ಮರುತನಿಖೆಯಾಗಲಿ.
10. ಸೌಜನ್ಯ ಅತ್ಯಾಚಾರದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳನ್ನು ವಿಚಾರಣೆ ನಡೆಸಿ
11. ಫೊರೆನ್ಸಿಕ್ ಸಾಕ್ಷ್ಯಗಳನ್ನು ರಕ್ಷಿಸದೇ ಪಿತೂರಿ ಮಾಡಿದ ವೈದ್ಯರು, ಪೊಲೀಸರನ್ನು ಜೈಲಿಗೆ ಹಾಕಿ
12. ಅತ್ಯಾಚಾರ-ಕೊಲೆಯ ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸದೇ ಪ್ರಭಾವಿಗಳನ್ನು ರಕ್ಷಿಸಿದ ಪೊಲೀಸರನ್ನು ಬಂಧಿಸಿ

ಸಧ್ಯ ಈ ಒಂದು ವೇದಿಕೆ ರಾಜ್ಯಾದ್ಯಂತ ಪ್ರತಿರೋಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ 20 ಜಿಲ್ಲೆಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗಿದೆ ಎಂದು ವೇದಿಕೆ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page