ಒಡಿಶಾ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಶನಿವಾರ ಒಂದೇ ಬಾರಿಗೆ 57,000 ಗುತ್ತಿಗೆ ನೌಕರರನ್ನು ಖಾಯಂ ಮಾಡಿ ಆದೇಶ ಹೊರಡಿಸಿದೆ.
ಗುತ್ತಿಗೆ ಆಧಾರದ ನೇಮಕಾತಿಯ ವ್ಯವಸ್ಥೆಯನ್ನು ಶಾಶ್ವತವಾಗಿ ರದ್ದುಗೊಳಿಸಲು ನಿರ್ಧರಿಸಿದ ಸರ್ಕಾರ ಗುತಿಗೆ ನೇಮಕಾತಿಯ ಯುಗವು ಇಲ್ಲಿಗೆ ಕೊನೆಗೊಂಡಿದೆ ಎಂದು ಹೇಳಿ, ಈ ನಿರ್ಧಾರವು 57,000 ಕುಟುಂಬಗಳಿಗೆ ದೀಪಾವಳಿಯ ಆರಂಭವನ್ನು ತಂದಿದೆ ಎಂದು ಹೇಳಿದರು.
ಒಡಿಶಾ ರಾಜ್ಯ ಸಚಿವ ಸಂಪುಟವು ನೇಮಕಾತಿಯ ಗುತ್ತಿಗೆ ಪದ್ಧತಿಯನ್ನು ಶಾಶ್ವತವಾಗಿ ರದ್ದುಗೊಳಿಸಲು ನಿರ್ಧರಿಸಿದೆ ಎಂದು ಘೋಷಿಸಿದೆ. ಇಂದಿಗೂ, ಅನೇಕ ರಾಜ್ಯಗಳಲ್ಲಿ ನಿಯಮಿತ ನೇಮಕಾತಿಗಳಿಲ್ಲ ಮತ್ತು ಕಾರ್ಮಿಕರು ಇನ್ನೂ ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ಮುಂದುವರೆಸುತ್ತಿದ್ದಾರೆ. ಆದರೆ ಒಡಿಶಾದಲ್ಲಿ ಗುತ್ತಿಗೆ ನೇಮಕಾತಿ ಯುಗ ಅಂತ್ಯಗೊಂಡಿದೆ ಎಂದು ಹೇಳಿದರು.
ಸರ್ಕಾರ ವರ್ಷಕ್ಕೆ ಸರಿಸುಮಾರು 1,300 ಕೋಟಿ ರೂಗಳನ್ನು ಖರ್ಚು ಮಾಡಲಿದೆ. ಈ ನಿರ್ಧಾರವು ಅವರ ಕುಟುಂಬ ಸದಸ್ಯರಿಗೆ ಆರಂಭಿಕ ದೀಪಾವಳಿಯನ್ನು ತಂದಿದೆ ಎಂದು ಪಟ್ನಾಯಕ್ ರಾಜ್ಯ ಕ್ಯಾಬಿನೆಟ್ ಸಭೆಯ ನಂತರ ವೀಡಿಯೊ ಸಂದೇಶದಲ್ಲಿ ಘೋಷಿಸಿದರು. ಈ ಕುರಿತು ಇಂದು ಅಧಿಕೃತ ಪ್ರಕಟಣೆ ಹೊರಬೀಳಲಿದೆ.