Sunday, June 16, 2024

ಸತ್ಯ | ನ್ಯಾಯ |ಧರ್ಮ

ಲಂಚ ಪ್ರಕರಣ ; ಬಂಧಿಸಲು ಮುಂದಾದ ಅಧಿಕಾರಿಗಳ ಮೇಲೆ ವಾಹನ ಚಲಾಯಿಸಿದ ಭೂಪ

ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಯೊಬ್ಬ, ತಪ್ಪಿಸಿಕೊಳ್ಳಲು ಅಧಿಕಾರಿಗಳ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕಿನ ಆಹಾರ ನಿರೀಕ್ಷಕ ಮಹಾಂತೇಗೌಡ ಕಡಬಾಳು ಎಂಬುವವರನ್ನು ಶುಕ್ರವಾರ ರಾತ್ರಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಗಂಧರಾಮಯ್ಯ ಎಂಬುವವರ ಹತ್ತಿರ ಸುಮಾರು 1 ಲಕ್ಷಕ್ಕೆ ಅಧಿಕಾರಿ ಮಹಾಂತೇಗೌಡ ಕಡಬಾಳು ಬೇಡಿಕೆ ಇಟ್ಟಿದ್ದರು. ಅದರಲ್ಲಿ 12,000 ಮುಂಗಡ ಹಣ ಪಡೆದಿದ್ದಾರೆ. ಬಾಕಿ ಮೊತ್ತವನ್ನು ಶುಕ್ರವಾರ ಕೊಡುವುದಾಗಿ ಒಪ್ಪಿಸಿ, ಗಂಧರಾಮಯ್ಯನವರು ಲೋಕಾಯುಕ್ತ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣವೇ ಕಾರ್ಯೋನ್ಮುಕರಾದ ಲೋಕಾಯುಕ್ತ ಅಧಿಕಾರಿಗಳು, ನಿಗದಿತ ಸ್ಥಳದಲ್ಲಿ ಸುಮಾರು 43,000 ಹಣವನ್ನು ತಗೆದುಕೊಳ್ಳುವ ಸಮಯದಲ್ಲಿ ಬಂಧನಕ್ಕೆ ವ್ಯವಸ್ಥೆ ರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಹಣ ತಗೆದುಕೊಂಡ ಅಧಿಕಾರಿ ಮಹಾಂತೇಗೌಡ ಕಡಬಾಳು, ಲೋಕಾಯುಕ್ತರನ್ನು ಗಮನಿಸಿ ಪರಾರಿಯಾಗಿದ್ದಾರೆ. ಸುಮಾರು 12 ಕಿಲೋಮೀಟರ್ ಹಿಂಬಾಲಿಸಿ ಅಡ್ಡಗಟ್ಟಿದ ನಂತರ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ.

ಈ ಸಂದರ್ಭದಲ್ಲಿ ಮತ್ತೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಅಧಿಕಾರಿ, ಲೋಕಾಯುಕ್ತ ಅಧಿಕಾರಿಗಳ ಮೇಲೆ ವಾಹನ ಹತ್ತಿಸಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ. ಲಂಚದ ಸಮೇತ ಸಿಕ್ಕಿ ಬಿದ್ದ ಮಹಾಂತೇಗೌಡ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು