Tuesday, July 15, 2025

ಸತ್ಯ | ನ್ಯಾಯ |ಧರ್ಮ

ಓಲಾ – ಉಬರ್‌ ಆಟೋ ಸೇವೆಗಳಿಗೆ ಸಿಹಿ ಸುದ್ದಿ ನೀಡಿದ ಹೈಕೋರ್ಟ್

ಬೆಂಗಳೂರು :‌ ಓಲಾ – ಉಬರ್‌ ಕ್ಯಾಬ್ ಅಗ್ರಿಗೇಟರ್‌ಗಳು ನಿರ್ವಹಿಸುವ ಆಟೋ ಸೇವೆಗಳಿಗೆ ಮೂಲದರ 30 ರೂಪಾಯಿ ಜೊತೆಗೆ  ಶೇ .10 ರಷ್ಟು ಹೆಚ್ಚುವರಿ ಹಣ ಮತ್ತು ಜಿಎಸ್ ಟಿ ತೆರಿಗೆ ಸೇರಿಸಿ ದರ  ನಿಗದಿ ಪಡಿಸಲು ಹೈಕೋರ್ಟ್‌ ಅವಕಾಶ ನೀಡಿದೆ. ನ್ಯಾ.ಎಂ.ಜಿ.ಎಸ್‌ ಕಮಲ್‌ ಅವರು ಈ  ಸಂಬಂಧ ಆದೇಶ ಹೊರಡಿಸಿ ಸರ್ಕಾರಕ್ಕೆ 15 ದಿನಗಳಲ್ಲಿ ಹೊಸ ದರ ನಿಗದಿ ಪಡಿಸಬೇಕೆಂದು ತಿಳಿಸಿದೆ. ಮುಂದಿನ ವಿಚಾರಣೆ ನವೆಂಬರ್‌ 7ಕ್ಕೆ ನಡೆಯಲಿದೆ.

ಆ್ಯಪ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಮಧ್ಯಂತರ ಪರಿಹಾರ ನೀಡಿದೆ.  ಆಟೋ ಸೇವೆಗಳಿಗೆ ಸೇವಾ ದರವನ್ನು ನಿಗದಿ ಪಡಿಸುವವರೆಗೆ  ಓಲಾ ಉಬರ್‌ ಗಳ ವಿರುದ್ಧ ಯಾವುದೇ ರೀತಿಯ ಬಲವಂತ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ಮಧ್ಯಂತರ ಆದೇಶದಲ್ಲಿ ತಿಳಿಸಿದೆ.  

ಸರ್ಕಾರಿ ನಿಯಮಗಳ ಪ್ರಕಾರ 30 ರೂ ಮೂಲ ದರದೊಂದಿಗೆ ಆಟೋ ಸೇವೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದು, ಅದರ ಜೊತೆಗೆ ಶೇ 10 ರಷ್ಟು ಹೆಚ್ಚುವರಿ ಹಣ ಮತ್ತು ಜಿಎಸ್‌ಟಿ ವಿಧಿಸಸುವಂತೆ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು ಕ್ಯಾಬ್ ಅಗ್ರಿಗೇಟರ್‌ಗಳಿಗೆ ಅನುಮತಿ ನೀಡಿದ್ದಾರೆ.

ಈ ವಿಚಾರದಲ್ಲಿ, ಹೈಕೋರ್ಟ್ ಎಲ್ಲಾ ಪಾಲುದಾರರನ್ನು ಗಣನೆಗೆ ತೆಗೆದುಕೊಂಡು, ಕ್ಯಾಬ್ ಅಗ್ರಿಗೇಟರ್‌ಗಳು ನಿರ್ವಹಿಸುವ ಆಟೋ ಸೇವೆಗಳಿಗೆ ಸೇವಾ ದರವನ್ನು ನಿಗದಿ ಪಡಿಸುವುದಕ್ಕೆ ಸರ್ಕಾರಕ್ಕೆ 15 ದಿನಗಳ ಸಮಯವನ್ನು ನೀಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಲಾಗಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಉಬರ್, ʼನ್ಯಾಯಾಲಯದ ಈ  ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಓಲಾ ಮತ್ತು ಉಬರ್ ಅಪ್ಲಿಕೇಶನ್‌ ಬಳಸಿ  ಆಟೋ ಚಾಲಕರು ಸೇವೆ ಸಲ್ಲಿಸುವ ಹಕ್ಕನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.  ಬುಕಿಂಗ್‌ ದರವನ್ನು ಉಬರ್‌ ವಿಧಿಸಬಹುದೆಂದು ಸಹ ಅದು ತಿಳಿಸಿದೆ. ಉಬರ್‌ ಆಟೋಗಳಲ್ಲಿ  ಚೌಕಾಶಿ ಮಾಡುವ ಸಮಸ್ಯೆಯಿಲ್ಲ, ಪ್ರಯಾಣಿಕರಿಗೆ ಸುರಕ್ಷಿತ ಇರುತ್ತದೆ. ಹೀಗಾಗಿ ಜನರು ಇದರ ಸೇವೆಗಳನ್ನು ಹೆಚ್ಚೆಚ್ಚು ಬಯಸುತ್ತಿದ್ದಾರೆʼ ಎಂದು ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page