Friday, June 14, 2024

ಸತ್ಯ | ನ್ಯಾಯ |ಧರ್ಮ

ಜಗದ ಕವಿ ಯುಗದ ಕವಿ ಕ್ರಾಂತಿ ಕವಿ ಕುವೆಂಪು

ಕುವೆಂಪು ಕರ್ನಾಟಕದ ಎರಡನೇ ರಾಷ್ಟ್ರಕವಿ, ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹೆಮ್ಮೆಯ ಕವಿ, ಕರ್ನಾಟಕ ರತ್ನ, ಪದ್ಮಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿ ಹಲವಾರು ಪ್ರಶಸ್ತಿ ಗೌರವಗಳ ಪುರಸ್ಕೃತ ಸಾಹಿತಿ. ಕಥೆ, ಕವನ ,ಕಾದಂಬರಿ, ಆತ್ಮಕತೆ,ನಾಟಕ,ಮಹಾಗ್ರಂಥ ಹೀಗೆ ಎಲ್ಲಾ ಪ್ರಕಾರದ ಸಾಹಿತ್ಯ ರಚಿಸಿ ಜ್ಞಾನ ಅನ್ನುವುದು ಒಂದೇ ವರ್ಗ ಅಥವಾ ಒಂದೇ ಜಾತಿಗೆ ಸೀಮಿತವಲ್ಲ ಎಂದು ತೋರಿಸಿಕೊಟ್ಟವರು ಕುವೆಂಪು ಅದಲ್ಲದೇ ನಮ್ಮ ನಾಡು ಗೀತೆ ಮತ್ತು ರೈತ ಗೀತೆ ರಚಿಸಿದ್ದು ಕೂಡ ಕುವೆಂಪು ಅವರೇ. ಡಿಸೆಂಬರ್ 29 ಅವರ ಜನ್ಮದಿನ ಅವರ ಜನ್ಮದಿನವನ್ನು ಕರ್ನಾಟಕ ಸರ್ಕಾರ ವಿಶ್ವಮಾನವ ದಿನಾಚರಣೆಯಾಗಿ ಆಚರಿಸುತ್ತದೆ.

ಇಂದಿಗೆ ಕುವೆಂಪು ವಿಚಾರಗಳು

ಕುವೆಂಪು ಜಾತೀಯತೆ ಬಗ್ಗೆ:

ಕುವೆಂಪುರವರು ಮನುಧರ್ಮ ಶಾಸ್ತ್ರ, ವರ್ಣಾಶ್ರಮದ ಮತ್ತು ಅದರಿಂದ ಹುಟ್ಟಿದ ಚಾತುರ್ವರ್ಣ, ಅಸ್ಪೃಶ್ಯತೆಯ ಯಾವುದು ಈ ಕಾಲದಲ್ಲಿ ಉಳಿಯಬಾರದು ಎಂಬುದು ಅವರ ಸ್ಪಷ್ಟ ಸಂದೇಶ. ಅಸ್ಪೃಶ್ಯತೆಯನ್ನು ಯಾವುದೇ ಗ್ರಂಥ ಹೇಳಿದ್ದರು ಅದನ್ನು ತಿರಸ್ಕರಿಸಿ ಎಂದು ಕುವೆಂಪು ಹೇಳುತ್ತಾರೆ.

ಕುವೆಂಪು ಮತಾಂಧತೆಯ ಬಗ್ಗೆ: ಯಾವುದೇ ಮನುಷ್ಯನು ಮತದ ಅಜ್ಞಾನಕ್ಕೆ ಸಿಲುಕದೆ ಲೋಕದ ಹಿತಕೆ

ದುಡಿಯಬೇಕು ಆಧ್ಯಾತ್ಮವನ್ನು ಮಾತ್ರ ಅನುಸರಿಸಬೇಕು ಎಲ್ಲಾ ಮತಗಳ ಸಹಾವಾಸ ಬಿಟ್ಟು ಮನುಜ ಮತವೇ ನಮ್ಮ ಮತ ಆಗಬೇಕು ಎಂದಿದ್ದಾರೆ…

ಕುವೆಂಪು ಮೌಢ್ಯ ಅಂಧಶ್ರದ್ದೆಯ ಕುರಿತು:

ವ್ಯಕ್ತಿ ಮತ್ತು ವಿಗ್ರಹಾರಾಧನೆಯ ಕಟು ಟೀಕಾಕಾರರಾಗಿದ್ದ ಕುವೆಂಪು ವಿಗ್ರಹರಾಧನೆಗಿಂತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಆಗಬೇಕು ಮತ್ತು ಗುಡಿ ಚರ್ಚು ಮಸೀದಿಗಳಿಗಿಂತ ಬಡತನ ನಿರ್ಮೂಲನೆಯೇ ನಮ್ಮ ಪರಮ ಗುರಿಯಾಗಬೇಕು ಎಂದು ಪ್ರತಿಪಾದಿಸಿದ್ದಾರೇ ಮತ್ತು ನೂರು ದೇವರನ್ನು ದಾಸರನ್ನು ಪೂಜಿಸುವ ಬದಲು ನಮ್ಮ ದೇಶವನ್ನು ಪೂಜಿಸೋಣ ಮತ್ತು ಮೌಢ್ಯದಿಂದ ದೂರಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳೋಣ ಎಂದಿದ್ದಾರೆ.

ಕುವೆಂಪು ವೈಚಾರಿಕತೆ:

ಯಾವ ಧರ್ಮಗ್ರಂಥವೂ ಏಕೈಕ ಪರಮಪೂಜ್ಯವಲ್ಲ ಮನುಷ್ಯನು ಅವನಿಗೆ ಬೇಕಾದ ಎಲ್ಲಾ ಗ್ರಂಥಗಳನ್ನು ತತ್ವಗಳನ್ನು ಓದಬಹುದು ವಿಮರ್ಶೆ ಕೂಡ ಮಾಡಬಹುದು. ಕುವೆಂಪು ಅವರು ಶಿವನನ್ನು ಜಲಾಗಾರನಾಗಿ, ಶೂದ್ರ ವರ್ಣದ ಶಂಭೂಕನನ್ನು ಮಹಾತಪಸ್ವಿಯಾಗಿ ಚಿತ್ರಿಸಿದ್ದಾರೆ. ಯಾವುದೇ ಗ್ರಂಥ ಏನು ಹೇಳಿದ್ದರೇನು ನಮಗೆ ನಮ್ಮ ಮನಸ್ಸು ನಮ್ಮ ಯೋಚನೆಗಳೇ ನಮಗೆ ದಾರಿದೀಪವಾಗಬೇಕು ಎಲ್ಲರೂ ನಿರಂಕುಶಮತಿಗಳಾಗಬೇಕು ಅಂದರೇ ಸ್ವಂತವಾಗಿ ಯೋಚಿಸುವ ಶಕ್ತಿ ಪಡೆದುಕೊಳ್ಳಬೇಕು ಎಂದು ಕುವೆಂಪು ಕರೆನೀಡಿದ್ದಾರೆ.

ಕುವೆಂಪು ಭಾಷಾ ಪ್ರೇಮ ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ನಾಡು ನುಡಿಗೆ ಮಹತ್ವದ ಸ್ಥಾನ ಕೊಟ್ಟಿದ್ದಾರೆ ಕನ್ನಡದ ಮೇಲೆ ಯಾವ ಭಾಷೆಯ ಭಾಷಿಕರ ದಬ್ಬಾಳಿಕೆ ಮತ್ತು ಹೇರಿಕೆ ಸರಿಯಲ್ಲ, ಅವರು ಎಷ್ಟೇ ದೊಡ್ಡ ನಾಯಕರಾಗಿದ್ದರೂ ಕನ್ನಡಿಗರಿಗೆ ಕನ್ನಡವೇ ದೊಡ್ಡದು ಎಂದಿದ್ದಾರೆ ಕುವೆಂಪು. ಇನ್ನೋಂದು ಕಡೆಗೆ ಜ್ಞಾನ ಬೇರೆ ಭಾಷೆಗಳಲ್ಲಿಯು ಲಭ್ಯವಿದೆ ಎಂದಿದ್ದಾರೆ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದು ಸೌಹಾರ್ದತೆಯನ್ನು ಸಾರಿದ್ದಾರೆ.

ಕುವೆಂಪು ಅವರ ಮಂತ್ರ ಮಾಂಗಲ್ಯ ಯಾವುದೇ ಶಾಸ್ತ್ರ, ಮಂತ್ರ, ಪುರೋಹಿತ ಮತ್ತು ಆಡಂಬರ ಇಲ್ಲದೇಯೂ ಎರಡೂ ಮನಸುಗಳು ಒಂದಾಗಬಹುದಾದ ವಿವಾಹ ಪದ್ದತಿ. ಇದರಂತೆಯೇ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ವಿವಾಹವಾಗಿದ್ದು. ಇಂದಿಗೂ ಯುವ ಪೀಳಿಗೆ ಆ ಪರಂಪರೆಯನ್ನು ಮುಂದುವರೆಸುತ್ತಿದೆ.

ಕುವೆಂಪು ಅವರ ಮಹಾಮಂತ್ರ ವಿಶ್ವಮಾನವ ಸಂದೇಶ

ಇಂದು ವಿಶ್ವದಲ್ಲಿ ದೇಶ ದೇಶಗಳ ನಡುವೆ ಯುದ್ದ ಧರ್ಮ ಧರ್ಮಗಳ ನಡುವೆ ಜಗಳ,ಕೋಮುವಾದ ಜಾತಿವಾದ, ಶೋಷಣೆ ಮುಂತಾದ ತಾರತಮ್ಯಗಳು ತಾಂಡವವಾಡುತ್ತಿವೇ ಇವೆಲ್ಲಕ್ಕೂ ಉತ್ತರ ಎಲ್ಲರನ್ನು ಪ್ರೀತಿಸಿ ಗೌರವಿಸುವ ಆಶಯವುಳ್ಳ ವಿಶ್ವಮಾನವ ತತ್ವ

ಮನುಜ ಮತ ವಿಶ್ವಪಥ

ಸರ್ವೋದಯ

ಸಮನ್ವಯ ಪೂರ್ಣದೃಷ್ಟಿ ಇದು ಮನುಕುಲದ ಮಹಾಮಂತ್ರವಾಗಬೇಕು.. ಪ್ರತಿ ಶಾಲಾ ಕಾಲೇಜಿನಲ್ಲಿ ಇದು ದಿನನಿತ್ಯದ ಪ್ರಾರ್ಥನೆ ಆಗಬೇಕು ಆಗ ಮಾತ್ರ ಮುಂದಿನ ಪೀಳಿಗೆ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಮತ್ತು ಸೌಹಾರ್ದತೆಯಿಂದ ಬದುಕಲು ಸಾಧ್ಯ… ಕುವೆಂಪುರವರು ಎಲ್ಲಾ ಬಗೆಯ ಹಳೆ ಶಾಸ್ತ್ರದ ಸಾಮಾಜಿಕ ಅನಿಷ್ಟದ ವಿರುದ್ದ ತಮ್ಮ ಸಾಹಿತ್ಯದಲ್ಲಿ ಸಮಾನತೆ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಭಾತೃತ್ವವೆಂಬ ಕ್ರಾಂತಿಕಾರಿ ವಿಚಾರಗಳನ್ನು ಭಿತ್ತಿದ್ದಾರೇ ಅದನ್ನು ಪಾಲಿಸಿ ಉಳಿಸಿ ಸೌಹಾರ್ದತೆ ಇಂದ ಬದುಕಿ ವಿಶ್ವಮಾನವರಾಗೋಣ.

ವಿನಯ್ ಎಸ್ ಕಾಂತ, ಸಂತೇಶಿವರ

Related Articles

ಇತ್ತೀಚಿನ ಸುದ್ದಿಗಳು