Tuesday, July 29, 2025

ಸತ್ಯ | ನ್ಯಾಯ |ಧರ್ಮ

ಸೆ, 14 ರಂದು ನಟ ರಮೇಶ್‌ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್‌  ಪ್ರಧಾನ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ನಟ ರಮೇಶ್‌ ಅರವಿಂದ್‌, ಬೀದರ್‌ನ ಅಕ್ಕ ಅನ್ನಪೂರ್ಣ, ಸೇರಿದಂತೆ ಸಮಾಜ ಸೇವಕ ವಿ ರವಿಚಂದರ್‌  ಅವರಿಗೆ ಗೌರವ ಡಾಕ್ಟರೇಟ್‌  ಪ್ರಧಾನ ಮಾಡಲಾಗುವುದು ಎಂದು ಕುಲಪತಿ ಪ್ರೋ ಎಂ ರಾಮಚಂದ್ರ ಗೌಡ ತಿಳಿಸಿದರು.  

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೋ. ಎಂ. ರಾಮಚಂದ್ರ ಗೌಡ ಅವರು, ವಿ‍ಶ್ವವಿದ್ಯಾಲಯವು ಡಾಕ್ಟರೇಟ್‌ ಪ್ರಧಾನ ಮಾಡಲು ಅರ್ಜಿ ಕರೆದು ಅರ್ಹರನ್ನು ಹುಡುಕಿಸುವ ಕೆಲಸ ಮಾಡಿದೆ. ಈ ಹಿನ್ನಲೆ ಗೌರವ ಡಾಕ್ಟರೇಟ್‌ಗಾಗಿ ಜನಪ್ರತಿನಿಧಿಗಳು ಸೇರಿ ಹಲವು ಗಣ್ಯರು ಶಿಫರಸ್ಸು ಮಾಡಿದ್ದ ಅರ್ಜಿಗಳನ್ನು ಸಂಗ್ರಹಿಸಿ ಹಾಗೂ ಶಿಫರಸ್ಸು ಪರಿಶೀಲಿಸಿ ಸಮಿತಿಯ ಮುಂದೆ ಇಡಲಾಗಿದೆ. ಈ ಕಾರಣ ಸಿನಿಮಾ ರಂಗದಲ್ಲಿ ನಟ ರಮೇಶ್‌ ಅರವಿಂದ್‌, ಸಮಾಜ ಸೇವಾ ಕ್ಷೇತ್ರದಲ್ಲಿ ವಿ ರವಿಚಂದರ್‌, ಧಾರ್ಮಿಕ ಕ್ಷೇತ್ರದಲ್ಲಿ ಅಕ್ಕ ಅನ್ನಪೂರ್ಣ ಅವರಿಗೆ, ಸೆಪ್ಡಂಬರ್‌ 14 ರ ಮಧ್ಯಾಹ್ನ ದಂದು ಸುವರ್ಣಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page