Tuesday, July 29, 2025

ಸತ್ಯ | ನ್ಯಾಯ |ಧರ್ಮ

ಒಂದೇ ಚುಚ್ಚುಮದ್ದಿನಿಂದ 39 ಮಕ್ಕಳಿಗೆ ಕೋವಿಡ್‌ ಲಸಿಕೆ..!

ಸಾಗರ್‌ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ  ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ಕೋವಿಡ್​-19 ಲಸಿಕೆಯನ್ನು ನೀಡಿದ್ದು. ಚುಚ್ಚುಮದ್ದು ನೀಡುವ ವ್ಯಕ್ತಿ ಎಲ್ಲಾ ಮಕ್ಕಳಿಗೂ ಒಂದೇ ಸಿರಂಜ್‌ ಉಪಯೋಗಿಸಿರುವ ಘಟನೆ ಬೆಳಕಿಗೆ ಬಂದಿದೆ.  

 ಬೃಹತ್‌ ಲಸಿಕೆ ಅಭಿಯಾನದ ಭಾಗವಾಗಿ ನಗರದ ಜೈನ್‌ ಹೈಯರ್ ಸೆಕಂಡರಿ ಶಾಲೆಯಲ್ಲಿ ಲಸಿಕೆ ನೀಡಲಾಗುತ್ತಿದ್ದ ಸಂದರ್ಭದಲ್ಲಿ, ಜಿತೇಂದ್ರ ಅಹಿರ್ವಾರ್‌ ಎಂಬ ವ್ಯಕ್ತಿ ಮಕ್ಕಳಿಗೆ ಒಂದೇ ಚುಚ್ಚು ಮದ್ದಿನಲ್ಲಿ ಲಸಿಕೆ ಹಾಕುತ್ತಿದ್ದುದನ್ನು ಗಮನಿಸಿದ ಪೋಷಕರು, ಆತನ ಮೇಲೆ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಂತರ ಲಸಿಕೆ ನೀಡುತ್ತಿದ್ದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು. ಲಸಿಕೆ ನೀಡುವ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಈ ಪ್ರಕರಣ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರವಾಗಿ ಕ್ಷಿತಿಜ್ ಸಿಂಘಾಲ್, ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ.ಕೆ. ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿ ಯಲ್ಲಿ ಜಿತೇಂದ್ರ ಅಹಿರ್ವಾರ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. .

 ವಿಭಾಗೀಯ ಆಯುಕ್ತರು ಇಲಾಖಾ ತನಿಖೆ ಮತ್ತು ಜಿಲ್ಲಾ ಲಸಿಕೆ ಅಧಿಕಾರಿ ಡಾ.ರಾಕೇಶ್ ರೋಷನ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು. ಸಿಎಂಎಚ್‌ಒ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದಾರೆ.

ಲಸಿಕೆ ಪಡೆದ ಲ್ಲಾ ಮಕ್ಕಳುಗಳು 15 ವರ್ಷ ಮೇಲ್ಪಟ್ಟವರಾಗಿದ್ದು, 9ರಿಂದ 12ನೇ ತರಗತಿ ಒಳಗಿನವರಾಗಿದ್ದರೆ. ಎಲ್ಲ ಮಕ್ಕಳ ತಪಾಸಣೆ ನಂತರ 19 ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಉಳಿದ ಮಕ್ಕಳ ವರದಿಗಳು ಬರಬೇಕಿದೆ ಎಂದು ಸಾಗರ್​ ವಿಭಾಗೀಯ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page