Home ಬೆಂಗಳೂರು ಕಲ್ಲುಗಣಿ ಗುತ್ತಿಗೆ ರಾಜಧನ ಮತ್ತು ದಂಡ ವಸೂಲಿಗೆ ಓ.ಟಿ.ಎಸ್: ಸಂಪುಟ ಸಭೆಯಲ್ಲಿ ನಿರ್ಧಾರ

ಕಲ್ಲುಗಣಿ ಗುತ್ತಿಗೆ ರಾಜಧನ ಮತ್ತು ದಂಡ ವಸೂಲಿಗೆ ಓ.ಟಿ.ಎಸ್: ಸಂಪುಟ ಸಭೆಯಲ್ಲಿ ನಿರ್ಧಾರ

0

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಧಿಸಿರುವ ದಂಡವನ್ನು One Time Settlement (OTS) ಮೂಲಕ ಅನುಷ್ಠಾನಗೊಳಿಸುವ ಕುರಿತು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಶಿಫಾರಸ್ಸುಗಳಲ್ಲಿನ ಅಂಶ (ಬಿ) ರಲ್ಲಿನ ಮಾರ್ಚ್ 2024ರ ಅಂತ್ಯದೊಳಗೆ ಎಂಬುದನ್ನು ಹೊರತುಪಡಿಸಿ, ಶಿಫಾರಸ್ಸುಗಳನ್ನು ಪರಿಗಣಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಸಂಚಿತ ಆಡಿಟ್ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಉಪಖನಿಜ ತೆಗೆದು ರಾಜಧನ ಪಾವತಿಸದೇ ಸಾಗಾಣಿಕೆ ಮಾಡಿರುವ ಸಂಬಂಧ ಗಣಿ ಇಲಾಖೆ ವಿಧಿಸಿರುವ ದಂಡವನ್ನು One Time Settlement (OTS) ಮೂಲಕ ಸಂಗ್ರಹಿಸಲು ಪ್ರಸ್ತಾಪಿಸಲಾಗಿತ್ತು.

ಅಂಶ (ಎ) ಅನುಮೋದನೆಯಾದಲ್ಲಿ KSRSAC ರವರು ಸಲ್ಲಿಸಿರುವ / ಸಲ್ಲಿಸುವ DGPS ಸರ್ವೆ ಕಾರ್ಯದ ವರದಿ ಮೇಲೆ ಸದರಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994 ಕ್ಕೆ ಸೂಕ್ತ ತಿದ್ದುಪಡಿಗಳನ್ನು ಮತ್ತು ಮಾರ್ಗಸೂಚಿಗಳನ್ನು ಗಣಿ ಮತ್ತು ಭೂವಿಜ್ಞಾನ ಸಚಿವರ ಅನುಮೋದನೆಯೊಂದಿಗೆ ಅಳವಡಿಸಿಕೊಳ್ಳಲು; ಸಚಿವ ಸಂಪುಟ ಅನುಮೋದನೆ ನೀಡಿದೆ.

2018-19ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ 2438 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು ಡ್ರೋನ್ ಬಳಸಿ ಸರ್ವೇ ಮಾಡಲಾಗಿದ್ದು, ಈ ಸರ್ವೆ ಮೂಲಕ ಖನಿಜ ಪರವಾನಗಿ ಪಡೆಯದೇ ಸಾಗಾಣಿಕೆ ಮಾಡಿದ ಪ್ರಮಾಣ ಮತ್ತು ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿರುವ ಪ್ರಮಾಣವನ್ನು ಅಂದಾಜಿಸಿ ಪ್ರತಿ ಮೆಟ್ರಿಕ್ ಟನ್‍ಗೆ ರೂ.60.00 ರಾಜಧನದಂತೆ ರೂ.1221.00 ಕೋಟಿಗಳ 5 ಪಟ್ಟು ದಂಡವಿಧಿಸಿ, ರೂ. 6105.98 ಕೋಟಿಗಳ ದಂಡಗಳ ವಸೂಲಿ ಮಾಡಲು ನೋಟಿಸ್ ನೀಡಲಾಗಿದೆ. 2023-24ರಲ್ಲಿ ಮತ್ತೊಂದು ಸಲ ಗುತ್ತಿಗೆದಾರರುಗಳ ಸಮ್ಮುಖದಲ್ಲಿ ನ್ಯಾಯಾಲಯದ ಆದೇಶದಂತೆ ಸರ್ವೆ ಕೈಗೊಳ್ಳಲಾಗಿದೆ.

2018-19ನೇ ಸಾಲಿನ ಮತ್ತು 2023-24ನೇ ಸಾಲಿನ ಸರ್ವೆಯಲ್ಲಿ ಗುತ್ತಿಗೆ ಪ್ರದೇಶದ ಒತ್ತುವರಿ ಮಾಡಿ ತೆಗೆದಿರುವ ಪ್ರಮಾಣ ಹೆಚ್ಚಾಗಿದೆ. ಇನ್ನೂ 20 ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಬಾಕಿಯಿದೆ. 11 ಜಿಲ್ಲೆಗಳ ಡಿಜಿಪಿಎಸ್ Differential Global Positioning System) ಸರ್ವೆ ಕಾರ್ಯ ಬರಬೇಕಿದೆ. ಇದರಿಂದಾಗಿ ದಂಡ ವಸೂಲಿಯ ಪ್ರಮಾಣವು ಹೆಚ್ಚಾಗಬಹುದೆಂದು ನಿರೀಕ್ಷಿಸಿದೆ. ವೈಜ್ಞಾನಿಕ ಸಮಿಕ್ಷಾ ಪದ್ಧತಿಯನ್ನು ಅಳವಡಿಸಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಚಿವ ಸಂಪುಟ ಸಲಹೆ ನೀಡಿದೆ.

ರಾಜಧನ ಪರಿಷ್ಕರಣೆಯಿಂದ ರೂ.311.00 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷೆ.

ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2024”ಕ್ಕೆ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ರಾಜ್ಯ ಸರ್ಕಾರವು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಂದು ಬಾರಿ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಪರಿಷ್ಕರಣೆಯಿಂದ ಒಟ್ಟಾರೆಯಾಗಿ ರೂ.311.55 ಕೋಟಿಗಳ ಹೆಚ್ಚುವರಿ ಮೊತ್ತ ಸಂಗ್ರಹಣೆ ಅಂದಾಜಿಸಲಾಗಿದೆ. ಕಟ್ಟಡ ಕಲ್ಲು (Mining Stone – Miner minerals) ಉಪಖನಿಜದ ರಾಜಧನವನ್ನು ಪ್ರತಿ ಮೆಟ್ರಿಕ್ ಟನ್‍ಗೆ ರೂ.80.00 ರಂತೆ ನಿಗದಿಪಡಿಸಲಾಗಿದೆ.

You cannot copy content of this page

Exit mobile version