ರಾಮಮಂದಿರ ಲೂಟಿ ; ಈ ದೇಶದ ದೇವಸ್ಥಾನಗಳ ಕೊಳ್ಳೆ ಹೊಡೆದವರಲ್ಲಿ ಒಬ್ಬರು ಮೊಹಮ್ಮದ್ ಘಜ್ನಿ, ಮತ್ತೊಬ್ಬರು RSS ನವರು : ಬಿಕೆ ಹರಿಪ್ರಸಾದ್

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ, ಬಂಗಾರ ಮತ್ತು ಬೆಳ್ಳಿ ಲೂಟಿಯಾಗಿರುವ ಬಗ್ಗೆ ಗಂಭೀರ ಆರೋಪ ಮಾಡಿದರು. ಭಾರತದ ಇತಿಹಾಸದಲ್ಲಿ ದೇವಸ್ಥಾನಗಳನ್ನು ಲೂಟಿ ಮಾಡಿದವರು ಇಬ್ಬರೇ. ಒಬ್ಬ 12ನೇ ಶತಮಾನದ ಮೊಹಮ್ಮದ್ ಘಜ್ನಿ, ಮತ್ತೊಬ್ಬರು 21ನೇ ಶತಮಾನದ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಎಂದು ಟೀಕಿಸಿದರು.

ರಾಮಮಂದಿರ ಟ್ರಸ್ಟ್ ರಚನೆ, ಶಿಲಾನ್ಯಾಸ ಹಾಗೂ ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇತೃತ್ವ ವಹಿಸಿದ್ದರಿಂದ, ಈ ಪ್ರಕರಣದ ನೈತಿಕ ಹೊಣೆಗಾರಿಕೆಯನ್ನು ಅವರು ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸುಮಾರು ₹200 ಕೋಟಿ ದೇಣಿಗೆ ಹಣ ಲೂಟಿಯಾಗಿರುವುದು ಹಾಗೂ ಅಮೂಲ್ಯ ರಾಮಾಯಣ ಪುಸ್ತಕ ಕಳುವಾಗಿರುವ ಆರೋಪಗಳ ಕುರಿತು ಕೇಂದ್ರ ತನಿಖಾ ದಳ (CBI) ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು.

ಇದೇ ವೇಳೆ ಆರ್‌ಎಸ್‌ಎಸ್ ಬೆಳಗಾವಿಯಲ್ಲಿ ನಡೆಸುತ್ತಿರುವ ಸಭೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, “ಆರ್‌ಎಸ್‌ಎಸ್ ಬೆಳಗಾವಿಯಲ್ಲಿ ಏಕೆ ಸಭೆ ನಡೆಸುತ್ತಿದೆ ಎಂಬುದು ಗೊತ್ತಿಲ್ಲ. ಪ್ರತಿ ಬಾರಿ ಆರ್‌ಎಸ್‌ಎಸ್ ಸಭೆಯ ಬಳಿಕ ಏನಾದರೂ ಅನಾಹುತ ನಡೆದಿದೆ. ಈ ಹಿಂದೆ ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರಂತಹವರ ಹತ್ಯೆಗಳು ನಡೆದಿದ್ದವು. ಈ ಸಭೆಯ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು