Monday, July 28, 2025

ಸತ್ಯ | ನ್ಯಾಯ |ಧರ್ಮ

ಭದ್ರತಾ ನಿಯಮ ಉಲ್ಲಂಘಿಸಿದ್ದು ಬಿಜೆಪಿ ಸಂಸದ, ಅಮಾನತು ಮಾಡಿದ್ದು ಮಾತ್ರ 14 ಮಂದಿ ವಿಪಕ್ಷ ಸಂಸದರನ್ನು

ಐವರು ಕಾಂಗ್ರೆಸ್ ಸಂಸದರು ಸೇರಿದಂತೆ ಒಟ್ಟು 14 ಮಂದಿ ವಿರೋಧ ಪಕ್ಷದ ಸಂಸದರನ್ನು ಈ ವರೆಗೆ ಲೋಕಸಭೆ ಸದನದಿಂದ ಅಮಾನತು ಮಾಡಲಾಗಿದೆ ಎಂಬ ವರದಿ ಲಭ್ಯವಾಗಿದೆ. ಭದ್ರತಾ ಲೋಪದ ಕಾರಣಕ್ಕೆ ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ ಮಾಡಿದ ಹಿನ್ನೆಲೆ ವಿರೋಧ ಪಕ್ಷದ ಸಂಸದರನ್ನು ಅಮಾನತಿನಲ್ಲಿ ಇಡಲಾಗಿದೆ.

ಅಮಾನತುಗೊಂಡ ಸಂಸದರಲ್ಲಿ ಬೆನ್ನಿ ಬೆಹನನ್, ವಿ.ಕೆ.ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿ.ಆರ್.ನಟರಾಜನ್, ಕನಿಮೋಳಿ ಕರುಣಾನಿಧಿ, ಕೆ.ಸುಬ್ರಮಣ್ಯಂ, ಎಸ್.ಆರ್.ಪಾರ್ಥಿಬನ್, ಎಸ್.ವೆಂಕಟೇಶನ್ ಮತ್ತು ಮಾಣಿಕಂ ಠಾಗೋರ್, ಕಾಂಗ್ರೆಸ್ ಸಂಸದರಾದ ಟಿ.ಎನ್.ಪ್ರತಾಪನ್, ಡೀನ್ ಕುರಿಯಕೋಸ್, ಎಸ್.ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಹಿಬಿ ಈಡನ್ ಸೇರಿದ್ದಾರೆ. ಇದುವರೆಗೆ 14 ಸಂಸದರು ಅಮಾನತಾಗಿದ್ದಾರೆ.

ಈ ನಡುವೆ ದುಷ್ಕರ್ಮಿಗಳಿಗೆ ಪಾಸ್ ವಿತರಣೆ ಸಂಬಂಧ ಸಂಸದ ಪ್ರತಾಪ್ ಸಿಂಹಗೆ ಇದುವರೆಗೂ ಒಂದು ನೋಟಿಸ್ ಕೂಡಾ ನೀಡದೇ ಇರುವ ಬಗ್ಗೆ ಸಂಸತ್ತಿನ ಎರಡೂ ಸದನಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ತನಿಖೆ ನಡೆಸಬೇಕು, ಇದಕ್ಕೆ ಕಾರಣರಾದವರನ್ನು ಅಮಾನತಿನಲ್ಲಿ ಇಡಬೇಕು, ಭದ್ರತಾ ಲೋಪದ ಹೊಣೆಯನ್ನು ಸರ್ಕಾರ ಹೊರಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಿದ ವಿಪಕ್ಷ ನಾಯಕರಿಗೆ ಮಾತ್ರ ಸದನ ಕಲಾಪದಿಂದ ದೂರ ಇಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page