ಹೊಸದೆಹಲಿ: ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಸ್ಥಾನಗಳಿಗೆ 1,625 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇವರಲ್ಲಿ 134 (ಶೇ. 8) ಅಭ್ಯರ್ಥಿಗಳು ಮಾತ್ರ ಮಹಿಳೆಯರು. 2019ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು 9 ಪ್ರತಿಶತ (726) ಮಹಿಳೆಯರು. ಅವರಲ್ಲಿ 78 ಮಂದಿ ಮಾತ್ರ 17ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಮೊದಲ ಹಂತದಲ್ಲಿ, 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಒಂದು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
ಮತ್ತೊಂದೆಡೆ, ಮಣಿಪುರ, ನಾಗಾಲ್ಯಾಂಡ್, ಲಕ್ಷದ್ವೀಪ, ಛತ್ತೀಸ್‌ಗಢ, ತ್ರಿಪುರ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಣದಲ್ಲಿ ಒಬ್ಬ ಮಹಿಳಾ ಅಭ್ಯರ್ಥಿ ಕೂಡ ಇಲ್ಲ. ಅರುಣಾಚಲ ಪ್ರದೇಶ ಕೇವಲ ಒಬ್ಬ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಹಾರ 3, ಮಧ್ಯಪ್ರದೇಶ 7, ಮಹಾರಾಷ್ಟ್ರ 7, ಮೇಘಾಲಯ 2, ಪುದುಚೇರಿ 3, ರಾಜಸ್ಥಾನ 12, ಸಿಕ್ಕಿಂ 1, ಉತ್ತರ ಪ್ರದೇಶ 7, ಉತ್ತರಾಖಂಡ 4, ಪಶ್ಚಿಮ ಬಂಗಾಳ 4 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡು ಅತಿ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿ 950 ಅಭ್ಯರ್ಥಿಗಳಲ್ಲಿ 76 ಮಹಿಳೆಯರು ಎಂದು EC ಡೇಟಾ ಸ್ಪಷ್ಟಪಡಿಸಿದೆ.