Home ದೆಹಲಿ ಅಶ್ಲೀಲ ವಿಡಿಯೋಗಳಿಗಾಗಿ ಭಾರತೀಯರಿಂದ ಭಾರಿ ಖರ್ಚು: 2025ರಲ್ಲಿ ಓನ್ಲಿಫ್ಯಾನ್ಸ್‌ಗೆ ವಿಡಿಯೋಗಳಿಗೆ ಸಂದಾಯವಾಯ್ತು ₹1,080 ಕೋಟಿ!

ಅಶ್ಲೀಲ ವಿಡಿಯೋಗಳಿಗಾಗಿ ಭಾರತೀಯರಿಂದ ಭಾರಿ ಖರ್ಚು: 2025ರಲ್ಲಿ ಓನ್ಲಿಫ್ಯಾನ್ಸ್‌ಗೆ ವಿಡಿಯೋಗಳಿಗೆ ಸಂದಾಯವಾಯ್ತು ₹1,080 ಕೋಟಿ!

0

ದೆಹಲಿ: ಭಾರತದಲ್ಲಿ ಅಡಲ್ಟ್ ವಿಡಿಯೋಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಿರುವುದರ ಜೊತೆಗೆ, ಅದಕ್ಕಾಗಿ ಹಣ ವ್ಯಯಿಸುವವರ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. 2025ನೇ ಸಾಲಿನಲ್ಲಿ ಭಾರತೀಯರು ಅಡಲ್ಟ್ ವಿಡಿಯೋ ಪ್ಲಾಟ್‌ಫಾರ್ಮ್ ಆದ ‘ಓನ್ಲಿಫ್ಯಾನ್ಸ್’ನಲ್ಲಿ ಸುಮಾರು 1,080 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಸಂಸ್ಥೆಯು ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ಓನ್ಲಿಫ್ಯಾನ್ಸ್ ಒಂದು ಸಬ್‌ಸ್ಕ್ರಿಪ್ಶನ್ ಆಧಾರಿತ ವೇದಿಕೆಯಾಗಿದ್ದು, ಇಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ವಿಶೇಷ ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬಳಕೆದಾರರು ತಮ್ಮ ನೆಚ್ಚಿನ ಕ್ರಿಯೇಟರ್‌ಗಳ ಎಕ್ಸ್‌ಕ್ಲೂಸಿವ್ ವಿಡಿಯೋಗಳನ್ನು ಅಥವಾ ನಗ್ನ ಚಿತ್ರಗಳನ್ನು ವೀಕ್ಷಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಈ ಪ್ಲಾಟ್‌ಫಾರ್ಮ್‌ನಲ್ಲಿ ಫಿಟ್‌ನೆಸ್, ಸಂಗೀತ ಮತ್ತು ಅಡುಗೆಗೆ ಸಂಬಂಧಿಸಿದ ವಿಷಯಗಳೂ ಲಭ್ಯವಿದ್ದರೂ, ಇದು ಪ್ರಮುಖವಾಗಿ ಅಡಲ್ಟ್ ಕಂಟೆಂಟ್‌ಗಾಗಿಯೇ ಜಾಗತಿಕವಾಗಿ ಹೆಚ್ಚು ಜನಪ್ರಿಯವಾಗಿದೆ. ಭಾರತದಿಂದ ಹರಿದುಬಂದಿರುವ ಈ ಬೃಹತ್ ಮೊತ್ತವು ಡಿಜಿಟಲ್ ಪಾವತಿ ಮತ್ತು ಅಡಲ್ಟ್ ಕಂಟೆಂಟ್ ಮಾರುಕಟ್ಟೆಯ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿದೆ.

You cannot copy content of this page

Exit mobile version