Monday, July 14, 2025

ಸತ್ಯ | ನ್ಯಾಯ |ಧರ್ಮ

ಊಟಿಯಲ್ಲಿ ಕಾಣಿಸಿಕೊಂಡ ಹುಲಿ: ಬೆಚ್ಚಿಬಿದ್ದ ನೆಟ್ಟಿಗರು

ಚಾಮರಾಜನಗರ: ಅರಣ್ಯಾಧಿಕಾರಿಯೊಬ್ಬರು ಸೆರೆ ಹಿಡಿದ ವಿಡೀಯೊ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಅರಣ್ಯ ನಾಶದ ಚರ್ಚೆಗೆ ನಾಂದಿ ಹಾಡಿದೆ. ಬಹಳಷ್ಟು ಜನರು ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಹುಲಿ ಮತ್ತು ಅದರ ಆವಾಸಸ್ಥಾನಗಳ ಕುರಿತು ಚರ್ಚೆ ಮಾಡಲಾರಂಭಿಸಿದ್ದಾರೆ.

ಐಆರ್‌ಎಸ್‌ ಅಧಿಕಾರಿಯಾದ ಅನಂತ್‌ ರೂಪನಗುಡಿಯವರು ಟ್ವಿಟರ್‌ ಮೂಲಕ ಹಂಚಿಕೊಂಡಿರುವ ವಿಡಿಯೋ ಮತ್ತು ಫೋಟೊಗಳಲ್ಲಿ ಹುಲಿಯ ವಿವಿಧ ಭಾವ ಭಂಗಿಗಳು ಮತ್ತು ಅದು ಆಗಷ್ಟೇ ಹಿಡಿದ ಬೇಟೆಯನ್ನು ಎಳೆದೊಯ್ಯುತ್ತಿರುವುದನ್ನು ಕಾಣಬಹುದಾಗಿದೆ. ಈ ಬೇಟೆಗೆ ಬಂದಿರುವ ಹುಲಿಯ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್‌ ಆಗುತ್ತಿದ್ದು, ಜನರು ಕಾಮೆಂಟ್‌ಗಳ ಮುಖಾಂತರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಕಾಮೆಂಟ್‌ ಮಾಡಿರುವ ಶ್ರೀಮೋಯಿ ಚೌಧರಿಯರು, ʼಸಫಾರಿಗಳ ಸಮಯದಲ್ಲಿಯೂ  ಹುಲಿಯನ್ನು ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಅದಕ್ಕಾಗಿಯೇ ಊಟಿಯ ಇಂದು ನಗರದ ಮೀಸಲು ಅರಣ್ಯದ ಅಂಚಿನಲ್ಲಿ ಹುಲಿ ಕಾಣಿಸಿಕೊಂಡಾಗ ಜನರು ಆಘಾತಕ್ಕೊಳಗಾಗಿದ್ದಾರೆ. ಭವ್ಯವಾದ ಹುಲಿಯ ವೀಡಿಯೊಗಳು ಮತ್ತು ಚಿತ್ರಗಳು ಈಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿವೆʼ ಎಂದು ಹೇಳಿದ್ದಾರೆ.

ಹುಲಿಯು ಮಾನವ ವಾಸಸ್ಥಾನಕ್ಕೆ ಇಷ್ಟು ಹತ್ತಿರದಲ್ಲಿ ಇರುವುದನ್ನು ನೋಡಿ ಜನರು ಆಘಾತಕ್ಕೊಳಗಾಗಿದ್ದಾರೆ. ನೈಸರ್ಗಿಕ ಆವಾಸಸ್ಥಾನದ ನಾಶವು ಹೇಗೆ ಹುಲಿಗಳನ್ನು ಕಾಡಿನ ಹೊರಗೆ ಬರುವಂತೆ ಮಾಡಿದೆ ಎಂಬುದರ ಬಗ್ಗೆ ಅನೇಕರು ಬರೆದಿದ್ದಾರೆ.

“ಮನುಷ್ಯರು ಇರುವಾಗ ಆ ಹುಲಿಗಳು ಎಚ್ಚರದಿಂದ ಇರಬೇಕು. ನಮ್ಮ ಮನರಂಜನೆಗಾಗಿ ನಾವು ಅವುಗಳ ವಾಸದ ಸ್ಥಳವನ್ನು ಅತಿಕ್ರಮಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. “ಹುಲಿ ತುಂಬಾ ಸುಂದರವಾಗಿ ಕಾಣುತ್ತಿದೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಇದು ಮಾನವರು ಅರಣ್ಯವನ್ನು ಮಿತಿಯಿಲ್ಲದೆ ಆಕ್ರಮಿಸಿರುವುದರ ಸ್ಪಷ್ಟ ಸೂಚನೆಯಾಗಿದೆ. ಹುಲಿಗಳು ಜಾನುವಾರುಗಳ ಮೇಲೆ ದಾಳಿಗಿಳಿಯುವುದು ಅವು ಮುಂದೆ ಮನುಷ್ಯರನ್ನು ತಿನ್ನಲು ತೊಡಗುವುದರ ಮುನ್ಸೂಚನೆಯಾಗಿದೆ. ಇಂತಹ ಬೆಳವಣಿಗೆ ನನ್ನನ್ನು ನೋವಿಗೆ ದೂಡುತ್ತಿದೆ.” ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page