Thursday, June 13, 2024

ಸತ್ಯ | ನ್ಯಾಯ |ಧರ್ಮ

‘ಆಪರೇಷನ್ ಯು’ ಶುರುವಾಯ್ತು, ರಾಘಣ್ಣನ ಸಿನಿಮಾಗೆ ಪತ್ನಿ ಕ್ಲ್ಯಾಪ್

ಕನ್ನಡ ದೇಶದೋಳ್, ಕಲಿವೀರ ಸಿನಿಮಾಗಳ ಸಾರಥಿ ಅವಿರಾಮ್ ಹೊಸ ಸಿನಿಮಾ ಸೆಟ್ಟೇರಿದೆ. ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅಪರೇಷನ್ ಯು ಚಿತ್ರದಲ್ಲಿ ಉತ್ತಮ್ ಪಾಲಿ, ಯಶ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಸೋನಲ್ ಮೊಂಥೆರೋ-ಲಾಸ್ಯ ನಾಗರಾಜ್ ನಾಯಕಿಯರಾಗಿ ಬಣ್ಣ ಹಚ್ಚಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇವತ್ತು ಚಿತ್ರದ ಮುಹೂರ್ತ ನೆರವೇರಿದ್ದು, ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ಪತಿಗೆ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಅವಿರಾಮ್ ಮಾತನಾಡಿ, ಅಪರೇಷನ್ ಯು ಟೈಟಲ್ ತುಂಬಾ ವಿಶೇಷವಾಗಿದೆ. ಸೈಕಾಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು. ಸಾಮಾನ್ಯ ಮನುಷ್ಯನನ್ನು ತಟ್ಟುವ, ಬಡಿದೆಬ್ಬಿಸುವ, ಎಚ್ಚರಿಕೆ ನೀಡುವ ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಮಂಜುನಾಥ್ ಅವರಂತಹ ಫ್ಯಾಷನೇಟೇಡ್ ನಿರ್ಮಾಪಕರು ಈ ಚಿತ್ರ ನಿರ್ಮಾಣ ಮಾಡುತ್ತಿರುವುದು ಹೆಗ್ಗಳಿಕೆ. ಕಲಿವೀರ ಬಳಿಕ ಇದು ಒಳ್ಳೆ ಪ್ರಾಜೆಕ್ಟ್. ಇದು ಬೇರೆ ತರ ರೀತಿ ಸಿನಿಮಾ. ಚಿತ್ರದಲ್ಲಿ ರಾಘಣ್ಣ ಪಾತ್ರ ವಿಶೇಷವಾಗಿರುತ್ತದೆ. ಅವರ ಫಸ್ಟ್ ಲುಕ್ ಪ್ರೆಸೆಂಟ್ ಮಾಡಿದಾಗ ಅವರ ಪಾತ್ರದ ಬಗ್ಗೆ  ರಿವೀಲ್ ಮಾಡುತ್ತೇವೆ. ಸಮಾಜಕ್ಕೆ ಬೇಕಾದ ಮೋಟಿವೇಷನ್ ರೀಚ್ ಮಾಡುವ ಪಾತ್ರ ಇದಾಗಿದ್ದು, ರಾಘಣ್ಣ ನಮ್ಮ ಸಿನಿಮಾದಲ್ಲಿ ಆಕ್ಟ್ ಮಾಡುತ್ತಿರುವುದು ನಮಗೆ ಹೆಮ್ಮೆ ಎಂದರು.

ನಿರ್ಮಾಪಕರಾದ ಮಂಜುನಾಥ್, ನಾನು ನನ್ನ ಮಗಳಿಗೋಸ್ಕರ ಮಾಡುತ್ತಿರುವ ಸಿನಿಮಾವಿದು. ಶ್ರೀಲಂಕಾ ಹೋದಾಗ ಕೇಳಿದ ಸ್ಟೋರಿ ನಾನು. ಈ ಸ್ಟೋರಿ ಮಾಡಬೇಕು ಅಂತಾ ನನ್ನ ತಲೆಯಲ್ಲಿ ಬಂದಿದ್ದು. ಆ ಬಳಿಕ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದೇವೆ. ನಿರ್ದೇಶಕರು ಈ ಸಿನಿಮಾಗೆ ತುಂಬಾ ಚೆನ್ನಾಗಿ ಜೀವ ತುಂಬಿದ್ದಾರೆ. ಸಿನಿಮಾದ ಕಥೆಗೆ ಬೇಕಾದ ಎಲ್ಲಾ ನಟರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಸಿನಿಮಾನೇ ಹೀರೋ ಆಗಿದೆ ಎಂದು ತಿಳಿಸಿದರು.

ವಿದ್ಮಯಿ ಪ್ರೊಡಕ್ಷನ್ ನಡಿ ಉದ್ಯಮಿ ಮಂಜುನಾಥ್ ಎಂಬುವವರು ಚಿತ್ರ ನಿರ್ಮಾಣ ಮಾಡುತ್ತಿದ್ದು, ಆರ್ಮುಗ ರವಿಶಂಕರ್, ಧರ್ಮ, ಅವಿನಾಶ್, ಮಾಳವಿಕ ಅವಿನಾಶ್,  ಸ್ಪರ್ಶ ರೇಖಾ, ಗೋವಿಂದೇ ಗೌಡ ಸೇರಿದಂತೆ ಹಲವು ನಟಿಸುತ್ತಿದ್ದು, ರಾಘವೇಂದ್ರ ವಿ ಸಂಗೀತ, ಹಾಲೇಶ್ ಎಸ್ ಸಂಕಲನ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಆಪರೇಷನ್ ಯು ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ಅಕ್ಟೋಬರ್ ಮೊದಲ ವಾರದಿಂದ ಶುರುವಾಗಲಿದೆ.

Related Articles

ಇತ್ತೀಚಿನ ಸುದ್ದಿಗಳು