ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸಾಟಿಯಿಲ್ಲದ ಪ್ರೀತಿ – 4: ಆಚರಣೆಗಳೆಂಬ ಅಚ್ಚರಿಗಳು

PPeepal Media Desk

Peepal Media Desk ಅಂಕಣ

• 1 ನಿಮಿಷದ ಓದು

ಸಾಟಿಯಿಲ್ಲದ ಪ್ರೀತಿ – 4: ಆಚರಣೆಗಳೆಂಬ ಅಚ್ಚರಿಗಳು

ಸುಮಾರು ೨೦೦೦ ದ ಇಸವಿ ಕಾಂಕ್ರೀಟ್ ಸಿಟಿಯಿಂದ ತೆಂಗಿನನಾಡಿಗೆ ನಾವು ಶಿಫ್ಟ್ ಆಗಿದ್ದೆವು. ಜಾತ್ಯಾತೀತ ವಿವಾಹವಾದ ಕಾರಣ ಅಜ್ಜಿ ಊರು ಒಂದೇ ಆಗಿದ್ದರೂ ನನ್ನವರೆಂದು ಇದ್ದವರು ಒಬ್ಬರೇ ಅಜ್ಜಿ. ತಾತ ಮಾತ್ರ ಪಟದೊಳಗಿನ ನೆನಪು. ಡಿಸೆಂಬರ್ ತಿಂಗಳು ಬಂತೆಂದರೆ ಎಲ್ಲರೂ ಹೊಸ ವರ್ಷದಾಚರಣೆಯಲ್ಲಿ ನಿರತರಾಗಿದ್ದಾರೆ ನಮ್ಮ ಮನೆಯಲ್ಲಿ ನನ್ನ ಹುಟ್ಟಿದ ದಿನದ ಕೇಕಿನ ಒಂದು ಪುಟ್ಟ ನೆಪದೊಂದಿಗೆ ಗೆಳೆಯರೆಲ್ಲರೂ ಸೇರುತ್ತಾ ಹಾಡುತ್ತಾ , ಹರಟೆ ಹೊಡೆಯುತ್ತಾ, ಹೆಜ್ಜೆ ಹಾಕುತ್ತಾ , ನಗು ಬೀರುತ್ತಾ ಕೆಲವೊಮ್ಮೆ ಕಣ್ಣೀರಿಡುತ್ತಾ ಹಳೆಯ ಕೊಳೆಯನ್ನು ತೊಳೆಯುತ್ತಾ, ಮತ್ತೊಂದು ಮಾಸಕ್ಕೆ ಮುಖ ಒಡ್ಡುತ್ತಿದ್ದೆವು.


ಆಗೆಲ್ಲಾ ಈಗಿನಷ್ಟು ಅಪ್ಡೇಟ್‌ ಆಗಿರೋ ವೆರೈಟಿ ಕೇಕ್ ಇರುತ್ತಿರಲಿಲ್ಲ. ಇದ್ದದ್ದು ಬರೀ ಚಾಕೊಲೇಟ್, ವೆನ್ನಿಲ್ಲಾ, ಪಿಸ್ತ, ಸ್ಟ್ರಾಬೆರಿ ರುಚಿಯದ್ದು. ವರ್ಷದ ಕೊನೆಯಲ್ಲಿ ಮಾತ್ರ ಬೇಕಿಂಗ್ ಪಾಯಿಂಟ್ ಮುಂದೆ ನನ್ನಪ್ಪ, ಮಾಮಂದಿರು ವೆನ್ನಿಲ್ಲಾ ಕೇಕ್ ಮೇಲೆ ನನ್ನ ಹೆಸರು ಬರೆಸಲು ಹೋದಾಗಲೆಲ್ಲಾ ನನ್ನ ಹೆಸರನ್ನು ಗಾಜಿನೊಳಗಿನ ಮೀನಿನನ್ನು ಹೇಗೆ ಬಲೆ ಹಾಕಿ ಹೊರ ತೆಗೆಯುತ್ತಾರೋ ಹಾಗೆಯೇ ಬಹಳ ಎಚ್ಚರ ವಹಿಸಿ ಬರೆಸುತ್ತಿದ್ದರು. ಹುಟ್ಟಿದ ದಿನದಂದು ಹೊಸ ಬಟ್ಟೆಗಾಗಿಯೇ ಕಾದು ಕೂರುತ್ತಿದ್ದ ನನಗೆ ಅತ್ತೆಯಂದಿರೂ ಮತ್ತೊಂದು ಜೊತೆ ಬಟ್ಟೆಯನ್ನು ಹಿಡಿದು ತಂದಾಗ ಮನೆಯಲ್ಲಿ ಕೊಡಿಸುತ್ತಿದ್ದ ಬಟ್ಟೆಗಿಂತ ಅವುಗಳೇ ಹೆಚ್ಚು ಅನಿಸುತ್ತಿದ್ದವು.


ಇನ್ನೂ ಅಪ್ಪ ನನಗೆ ಎಂದಿಗೂ ಉದ್ದ ಕೂದಲು ಬೆಳೆಸಲು ಬಿಡುತ್ತಿರಲಿಲ್ಲ. ತಮಾಷೆಗಾಗಿ ಒಮ್ಮೆ ಕೂದಲು ಹೆಚ್ಚಿದ್ದರೆ ಬುದ್ದಿ ಚುರುಕಾಗಿರುವುದಿಲ್ಲ ಎಂದಿದ್ದರು. ಇದೇ ಮಾತಿನಿಂದ ನಾನು ನನ್ನ ಹೇರ್ ಸ್ಟೈಲನ್ನು ಎಲ್ಲಾ ಕಡೆ ಸಮರ್ಥನೆ ಮಾಡುತ್ತಲೇ ಫ್ಯಾನ್ಸಿ ಸ್ಟೋರಿನಲ್ಲಿನ ಬಣ್ಣದ ಹೇರ್ ಬ್ಯಾಂಡ್, ಕಿವಿ ಓಲೆ, ಬಳೆ, ಕೊರಳಿನ ಸರ, ಉಗುರು ಬಣ್ಣ , ಹಣೆ ಬೊಟ್ಟುಗಳನ್ನು ಬಿಡದೇ ಕೊಡಿಸಿಕೊಳ್ಳುತ್ತಿದ್ದೆ‌. ಪ್ರತಿ ಬಾರಿ ಅಂಗಡಿಗಳಿಗೆ ಹೋದಾಗ ಅಲ್ಲಿನ ಅಣ್ಣ ಅಕ್ಕಂದಿರು ಕಾಲಿನಿಂದ ತಲೆಯವರೆಗೂ ನನ್ನ ನೋಡುತ್ತಾ ಪಕ್ಕದಲ್ಲೇ ಇರುತ್ತದ್ದ ನನ್ನಪ್ಪನ ಸರ್ ಯಾರಿಗೇ ಇದೆಲ್ಲಾ ಅಂದಿದ್ದು ಉಂಟು.


ಅಪ್ಪನಿಗೆ ನನ್ನನ್ನು ಬೌದ್ಧಿಕವಾಗಿ – ಶಾರೀರಿಕವಾಗಿ ಗಟ್ಟಿಯಾಗಿಸುವ ಹಠವಿತ್ತು. ಅದಕ್ಕಾಗಿ ತಿಪಟೂರಿನ ಕ್ರೀಡಾಂಗಣದಲ್ಲಿ ಇದ್ದ ಸ್ಪೋರ್ಟ್ಸ್ ಕ್ಲಬ್ ಗೂ ಸೇರಿಸಲು ಮುಂದಾಗಿದ್ದರು. ನನಗಾಗ ಬಾಲ್ ಹಿಡಿಯುವುದಾಗಲಿ – ತುಸು ಹೊತ್ತು ಓಡಲೂ ಇಷ್ಟವಿರಲಿಲ್ಲ. ಇದನ್ನು ಗಮನಿಸಿದ ಅಪ್ಪ ನನ್ನನ್ನು ಟ್ಯಾಗೋರ್ ಸ್ಕೂಲ್ ಬಳಿ ಇದ್ದ ಒಂದು ಸಂಗೀತ ಶಾಲೆಗೆ ಸೇರಿಸಿದ್ದರು, ಇಷ್ಟು ಮಾತ್ರವಲ್ಲದೆ ನಟರಾಜ ನೃತ್ಯ ಶಾಲೆಗೂ ಶಾಸ್ತ್ರೀಯ ನೃತ್ಯ ಕಲಿಯಲೆಂದು ಕಳಿಸಿದ್ದಾಗ ಆದ ಸಮಸ್ಯೆ ಅಂದ್ರೆ ಪಾಠ ಹೇಳಿಕೊಡುವವರು ನನ್ನ ಅತ್ತೆಯಂದಿರೆ ಆಗಿರುತ್ತಿದ್ದರು. ಇತ್ತ ಮೇಷ್ಟ್ರು ಅನ್ನೋ ಭಕ್ತಿ ಇರುತ್ತಿರಲಿಲ್ಲ, ಮತ್ತೊಂದು ಕಡೆ ನಮ್ಮವರೇ ಅನ್ನೋ ಭಯ ಕೂಡ.

ಪೋಷಕರಾದವರು ಮಾಡೋ ಮೊದಲ ತಪ್ಪು ಹೆಣ್ಣು ಮಗಳಾದರೆ ಅಡುಗೆ ಆಟಿಕೆ – ಗಂಡು ಮಗು ಆದ್ರೆ ರಿಮೋಟ್‌ ಆಟಿಕೆ ಕೊಡಿಸಿ ಏನೂ ಅರಿಯದ ವಯಸ್ಸಿನಲ್ಲಿಯೇ ಜೆಂಡರ್ ಸ್ಪೆಸಿಫಿಕೇಷನ್ ಮಾಡುವುದನ್ನು ಅರಿವಿಲ್ಲದೇ ರೂಢಿ ಮಾಡುವುದು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು