ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದಿಟ್ಟಿ

PPeepal Media

Peepal Media • ಅಂಕಣ

• 1 ನಿಮಿಷದ ಓದು

<strong>ದಿಟ್ಟಿ</strong>

ಹೆಣ್ಣು ಚೆಲುವಾಗಿ, ಹರವಾಗಿ ಮೈ ಹರಡಿಕೊಂಡು ನಳ ನಳಿಸಬಯಸುವ ಅಶೋಕ ವೃಕ್ಷವಿದ್ದಂತೆ. ಆಕಾಶದೆತ್ತರ  ತಲೆ ಎತ್ತಿ ನಿಲ್ಲುವ ಬಯಕೆ , ಕನಸು ಆಕೆಯದು. ಆದರೆ ಇದನ್ನು ಸಮಾಜ ಇಷ್ಟಪಡುವುದಿಲ್ಲ. ಹೆಣ್ಣೆಂಬ ಅಶೋಕ ವೃಕ್ಷದ ಗೆಲ್ಲುಗಳನ್ನು ಸವರಿ, ತನಗೆ ಬೇಕಾದಂತಹ ವಿಕಾರ ರೂಪ ನೀಡಲು ಅದು ಸದಾ ಯತ್ನಿಸುತ್ತಲೇ ಇರುತ್ತದೆ ಎನ್ನುವುದನ್ನು ಈ ಕವಿತೆಯಲ್ಲಿ ಮನೋಜ್ಞವಾಗಿ  ಕಟ್ಟಿಕೊಟ್ಟಿದ್ದಾರೆ ಸಬೀಹಾ

ನೋಡಲ್ಲಿ ಚೆಲುವಾಗಿ ಹರವಾಗಿ ಮೈಯ

ಹರಡಿಕೊಂಡು ನಳನಳಿಸುತಿದೆ ಅಶೋಕ!

ಏರಿದ್ದು ಸಾಕೆಂದು

ಕತ್ತರಿಸಿ ಹೀಗಿಂದು

ರೂಪಿಸಿದೆ ನೋಡೀ ಲೋಕ!

ಎಂಥ ಅರಸಿಕಳು ನೀ

ಚೆಲುವಿಗೆ ಸೊಗಸಿಗೆ ಹೀಗೆ

ಇಡಬಹುದೇ ಕೊಡಲಿ?

ಚೆಲುವಿನ ಮಾತಲ್ಲ ತೆಗಿ

ಯಾರು ತುಂಬಿದರು ಅದ

ಎಲ್ಲಿದೆಯದು, ನಿನ್ನದೇ

ಸುತ್ತ ನೋಡಿ ಕಲಿತದ್ದೇ ಮತ್ತಾರೋ ತುಂಬಿದ್ದೇ?

ಕಚಕಚನೆ ಕತ್ತರಿಸಿ

ಕೊಟ್ಟು ತನ್ನ ಕಲ್ಪನೆಯ

ವಿಕಾರವ ಆಕಾರವೆಂದರೆ

ಅಕ್ಕು ಅಕ್ಕು ಎನಬಹುದೇ

ಯಾರಿಗಾಗಿಯೋ ಯಾಕೆ ಅಶೋಕ ಬಾಗಬೇಕು ತಲೆ ನೀಡಬೇಕು?

ತಂದೆಯಲ್ಲ ಎಲ್ಲಿಂದಲೋ ವಾದ

ನೆಮ್ಮದಿಯ ಕೆಡಿಸೋ ಸಂವಾದ

ಯಾಕೆ ಈ ಪರಿಯ ಗಲಿಬಿಲಿ

ಹೊರಳಿ ನೋಡೊಮ್ಮೆ

ಕೈ ತೋರಿದರೆ ಸಾಕು ಇರಬೇಕು

ಮನೆ ಒಳಗೋ ಹೊರಗೋ

ಬೀದಿಗೋ ಗಾದಿಗೋ ಒಪ್ಪಿದರೆ

ಅನುಕ್ರಮಣ ಒಪ್ಪದಿರೆ ಅತಿಕ್ರಮಣ

ಸನ್ನೆಗಳ ಮೀರದಿರೆ ಒಂದು

ಮೀರಿದರೆ ಮತ್ತೊಂದು

ಗಡಿ ತೋರುವರು ಗುಳಿ ತೋಡುವರು

ಬಿದ್ದರೆ ನಗುವರು ಎದ್ದರೆ ಸಿಡಿವರು

ತಲೆಬಾಗಿ ನಡುಬಾಗಿ ಬಾಗುವುದೇ

ಹಿತವೆಂದು ಇಲ್ಲದಿರೆ ಹತವಾದೇವೆಂದು

ತೊಟ್ಟು ಮೆರೆದುದ ಮರೆವುದೇ

ವಾದಕ್ಕೆ ವಾದವಲ್ಲಕ್ಕ

ತೋರಿ ಅಶೋಕದೊಳಗಿನ ಶೋಕವ

ಸುತ್ತಿನ ಖುಷಿಯ ಹೊತ್ತೊಯ್ದು

ಕುಕ್ಕರಿಸಿ ನೆಲಕೆ ನಮ್ಮ

ಹೀಗೆ ನಿಲಿಸಬಹುದೇ ಅಕ್ಕ

ಡಾ. ಸಬಿಹಾ ಭೂಮೀಗೌಡ

ಸ್ಪಷ್ಟ ಚಿಂತನೆ ಹಾಗೂ ಸ್ತ್ರೀವಾದಿ ನೋಟದಿಂದ   ಕತೆ, ಕಾವ್ಯ, ಅಂಕಣ ಬರಹ, ವಿಮರ್ಶೆ, ಸಂಶೋಧನಾ ಲೇಖನ..  ಹೀಗೆ ಸೃಜನ ಶೀಲ ಮತ್ತು ಸೃಜನೇತರ ಪ್ರಕಾರಗಳೆರಡರ ಬರವಣಿಗೆಗಳಲ್ಲಿ ತೊಡಗಿಕೊಂಡವರು. ಸಮಾಜಮುಖಿ ಹೋರಾಟಗಳಲ್ಲೂ ಗುರುತಿಸಿಕೊಂಡವರು.

PPeepal Media

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು