ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಕರಾವಳಿಯ ನೈಜ ಘಟನೆಯನ್ನು ಬಿಚ್ಚಿಟ್ಟ ಚಿತ್ರ 19.20.21

PPeepal Media

Peepal Media ಅಂಕಣ

• 2 ನಿಮಿಷದ ಓದು

<strong>ಕರಾವಳಿಯ ನೈಜ ಘಟನೆಯನ್ನು ಬಿಚ್ಚಿಟ್ಟ ಚಿತ್ರ 19.20.21</strong>

ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳಿದ್ದರೂ ಸಹ ಇಂದಿಗೂ ಸ್ತ್ರೀಯರು, ದಲಿತರು, ಶೋಷಿತ ವರ್ಗದವರು ದಿನ ದಿನಕ್ಕೂ ಮೇಲ್ವರ್ಗದವರ, ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗುವ ಪರಿಸ್ಥಿತಿ ಇದೆ. ಆಡಳಿತ ನಡೆಸುವವರು ಸಮಾನತೆಯತ್ತ ಕೆಲಸಮಾಡದೆ ತಮ್ಮ ಏಳಿಗೆಯನ್ನು ಮಾತ್ರ ಬಯಸುತ್ತಿರುವುದು ವಿಪರ್ಯಾಸ. ಇದೆಲ್ಲಾ ಎಂದು ಕೊನೆಗೊಳ್ಳುತ್ತದೋ?. 19.20.21 ಸಿನೆಮಾವು ಪತ್ರಿಕೋದ್ಯಮ ವಿದ್ಯಾರ್ಥಿ ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್ ಇವರನ್ನು  ಹೀಗೆ ಚಿಂತಿಸುವಂತೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಭಾರಿ ಬೆಳವಣಿಗೆ ಆಗುತ್ತಿರುವುದು ಸಂತಸದ ಸಂಗತಿ. ಸಿನೆಮಾ ಎಂದರೆ ಮನರಂಜನೆಯ ಉದ್ಯಮ ಎಂದು ಭಾವಿಸಿದ್ದ ನನಗೆ, ಇತ್ತೀಚೆಗೆ ಬಂದ 19.20.21 ಚಿತ್ರವು ನನ್ನಲ್ಲಿದ್ದ ಸಿನಿಮಾ ಮೇಲಿನ ಅಭಿಪ್ರಾಯವನ್ನು ಬದಲಾಯಿಸಿತು. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ನೈಜ ಘಟನೆ ಆಧಾರಿತ ಸಿನಿಮಾಗಳು ಬಂದಿವೆಯಾದರೂ, ಈ ಸಿನಿಮಾ ನೋಡಿದಾಗ ಸ್ವಲ್ಪ ಹೊತ್ತು ಭಾವುಕನಾದೆ ಜತೆಗೆ ಖುಷಿಯೂ ಆಯಿತು. 

 19.20.21 ಮಂಸೋರೆ ನಿರ್ದೇಶನದ ನೈಜ ಘಟನೆ ಆಧಾರಿತ ಸಿನಿಮಾ. ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಎಂಬಲ್ಲಿ ಮಾರ್ಚ್ 2012ರಲ್ಲಿ ಮಲೆಕುಡಿಯ ಸಮುದಾಯದ ವಿಠ್ಠಲ್ ಮಲೆಕುಡಿಯ ಮತ್ತು ಅವರ ತಂದೆ ಹಾಗೂ ಸಮುದಾಯದವರಿಗೆ ನಡೆದ ಅನ್ಯಾಯವೇ ಈ ಸಿನಿಮಾ. 

 ನಾನು ಮೂಲತಃ ದಕ್ಷಿಣ ಕನ್ನಡ(ತುಲುನಾಡ್) ಜಿಲ್ಲೆಗೆ ಸೇರಿದವನಾಗಿದ್ದರೂ ಈ ಘಟನೆಯ ಕುರಿತು ಒಂದಿಷ್ಟೂ ಮಾಹಿತಿ ನನಗೆ ಇರಲಿಲ್ಲ. ಹಾಗಾಗಿ ಈ ಅನ್ಯಾಯವನ್ನು, ಅಲ್ಲಿ ನಡೆದ ಹೋರಾಟವನ್ನು ಎಲ್ಲರೆದುರು ತಂದ ಮಂಸೋರೆಗೆ ಧನ್ಯವಾದಗಳು.

19.20.21 ಇದು ಮೂರು ಮೂಲಭೂತ ಹಕ್ಕುಗಳ ಕುರಿತು ಮಾಹಿತಿ ನೀಡುತ್ತದೆ. ಜತೆಗೆ ಇಲ್ಲಿ ಈ ಹಕ್ಕುಗಳನ್ನು ಯಾವ ರೀತಿ ಆಗಿನ ಸರ್ಕಾರ, ವ್ಯವಸ್ಥೆ ಕಿತ್ತುಕೊಂಡಿದೆ ಎಂದು ನೋಡಬಹುದು. ಚಿತ್ರದ ಪ್ರತಿಕ್ಷಣವು ಬೇಸರ ಮೂಡಿಸುತ್ತದೆ. ವ್ಯವಸ್ಥೆಯ ಮೇಲೆ ಆಕ್ರೋಶ ಹುಟ್ಟಿಸುತ್ತದೆ. ವಿಠ್ಠಲ್ ರವರ ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದ್ದು, ಜೈಲಿನಲ್ಲಿ ಒಂದು ಹೊತ್ತು ನಿದ್ದೆ ಮಾಡಲೂ ಬಿಡದೇ ಟಾರ್ಚರ್ ನೀಡಿರುವುದನ್ನು ನೋಡುತ್ತಿದ್ದಾಗ ಆ ಪೋಲಿಸರಿಗೆ, ನಕ್ಸಲ್ ನಿಗ್ರಹ ದಳದವರಿಗೂ ಅದೇ ರೀತಿ ಟಾರ್ಚರ್ ನೀಡಿ ಶಿಕ್ಷಿಸ ಬೇಕೆಂದೆನಿಸಿತು. ಆದರೆ ಏನು ಮಾಡಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂದು ಅರಿತವ ನಾನು. 

 ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ, ಶಿಕ್ಷಣ, ಉದ್ಯೋಗ ಪಡೆಯಲು ಅನುಭವಿಸಿದ ಕಷ್ಟ ನೋಡಿ ಬೇಸರವಾದರೂ ಮುಂದಕ್ಕೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಉದ್ಯೋಗ ಸಿಕ್ಕಿದ್ದು ಖುಷಿಯನ್ನೂ ತಂದಿದೆ. ನೈಜ ಘಟನೆಯ ನಾಯಕರಾದ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ದಿನೇಶ್ ಹೆಗ್ಡೆ ಉಳೆಪಾಡಿ ಎಲ್ಲರಿಗೂ ನನ್ನ ನಮನಗಳು.

ಪತ್ರಕರ್ತ ನವೀನ್ ಸೂರಿಂಜೆಯವರ ‘ಕುತ್ಲೂರು ಕಥನ’ ಪುಸ್ತಕದಲ್ಲಿ ಈ ಘಟನೆಯ ಕುರಿತು ಇದೆ. 19.20.21 ಸಿನಿಮಾ ನೋಡಿದವರೂ, ನೋಡದೆ ಇದ್ದವರೂ, ಎಲ್ಲರೂ ಈ ಪುಸ್ತಕವನ್ನೂ ಓದಿ.

ಪ್ರಸ್ತುತ ಭಾರತದಲ್ಲಿಂದು ತಪ್ಪು ಮಾಡದಿದ್ದರೂ ಅದೆಷ್ಟೋ ಮಂದಿ ವ್ಯವಸ್ಥೆಯ ಮೋಸದ ಜಾಲಕ್ಕೆ ಸಿಕ್ಕಿ ತಮ್ಮ ಶಿಕ್ಷಣ, ಜೀವನ ಕಳೆದುಕೊಂಡವರನ್ನು ನಾವು ದಿನೇ ದಿನೇ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನೋಡುತ್ತಿರುತ್ತೇವೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಾಗಿ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳಿದ್ದರೂ ಸಹ ಇಂದಿಗೂ ಸ್ತ್ರೀಯರು, ದಲಿತರು, ಶೋಷಿತ ವರ್ಗದವರು ದಿನ ದಿನಕ್ಕೂ ಮೇಲ್ವರ್ಗ, ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗುವ ಪರಿಸ್ಥಿತಿ ಇದೆ. ಆಡಳಿತ ನಡೆಸುವವರು ಸಮಾನತೆ ಬಯಸದೆ ತಮ್ಮ ಏಳಿಗೆಯನ್ನು ಮಾತ್ರ ಬಯಸುತ್ತಿರುವುದು ವಿಪರ್ಯಾಸ. ಇದೆಲ್ಲಾ ಎಂದು ಕೊನೆಗೊಳ್ಳುತ್ತದೋ? 

ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್

ಪತ್ರಿಕೋದ್ಯಮ ವಿದ್ಯಾರ್ಥಿ

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು