ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌ ಅಂಕಣ

• 1 ನಿಮಿಷದ ಓದು

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.ಪದ್ಮಪಾಣಿ ಲಲಿತಕಲಾ ಅಕಾಡೆಮಿಯು ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಗೋವಿಂದಸ್ವಾಮಿ ಗುಂಡಾಪುರ ಅವರ ಗುಡಿಸಲಜ್ಯೋತಿ- ಪದಪಯಣ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಕುವೆಂಪು, ಅಂಬೇಡ್ಕರ್‌ ಅವರಂಥವರನ್ನು ಒಂದು ಜಾತಿಗೆ ಸೀಮಿತ ಮಾಡುತ್ತಿದ್ದೇವೆ.’ ನಾವು ಬಸವ ಜಯಂತಿ ಆಚರಿಸುತ್ತೇವೆ. ಆದರೆ ಇತರರು ಅಂಬೇಡ್ಕರ್‌ ಜಯಂತಿ ಆಚರಿಸುತ್ತಾರಾ?’ ಎಂದು ಕೇಳುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬುದ್ಧ-ಬಸವ- ಅಂಬೇಡ್ಕರ್‌ ಸೇರಿಸಿ ಜಯಂತಿ ಮಾಡಿ ಎಂದು ನೇರವಾಗಿ ಹೇಳಿದ್ದೇನೆ. ಈ ರೀತಿಯಾದಾಗ ಮಾತ್ರ ಸಾಂಸ್ಕೃತಿಕ ನಾಯಕರು ಎಲ್ಲರನ್ನು ಒಳಗೊಳ್ಳುತ್ತಾರೆ. ಅವರ ಶಕ್ತಿಯೂ ವೃದ್ಧಿಸುತ್ತದೆ ಎಂದರು.ಸಿದ್ದಲಿಂಗಯ್ಯ ಅವರ ಕವನಗಳನ್ನು ಈಗಿನ ಗೋವಿಂದಸ್ವಾಮಿ ಗುಂಡಾಪುರ ಅವರ ಕವನಗಳನ್ನು ಗಮನಿಸಿದಾಗ ದಲಿತರ ಕಾವ್ಯದ ನಡೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹನಸೋಗೆ ಸೋಮಶೇಖರ್‌, ಸೋಸಲೆ ಗಂಗಾಧರ್‌ ಅವರು ತಮ್ಮ ಭಿನ್ನನಡೆಯಿಂದ ದಲಿತ ಸಾಹಿತ್ಯಕ್ಕೆ ಹೊಸ ದಿಕ್ಕು ತೋರಿದ್ದಾರೆ ಎನ್ನಬಹುದು. ನಾಲ್ಕು ಗೋಡೆಗಳ ನಡುವೆ ಹೇಳುವ ಕವಿತೆಗಳಿಗಿಂತ ಸಮಾಜಕ್ಕೆ ಪಾಠ ಹೇಳುವ ಕವಿತೆಗಳು ಹೊರಬರಲು ಬಿವಿಎಸ್‌ ಪ್ರಭಾವ ಕಾರಣ ಎನ್ನಬಹುದು ಎಂದರು.

ಗುಡಿಸಲಜ್ಯೋತಿ ಕೃತಿ ಬಿಡುಗಡೆ ಮುನ್ನವೇ ಇಲ್ಲಿನ ಕವಿತೆಗಳು ಆಸ್ಫೋಟವಾಗಿವೆ. ಗುಡಿಸಲ ಜ್ಯೋತಿ ಕವನವಂತೂ ಮನೆ ಮಾತಾಗಿದೆ. ಮೊದಲು ಗೋವಿಂದಸ್ವಾಮಿ ಅವರ ಕವನ ಸಂಕಲನ ನೋಡಿದಾಗ ಕೆಸರುಗದ್ದೆಯಲ್ಲಿ ಓಡಿದ ಅನುಭವವಾಗಿತ್ತು. ಆದರೆ ಗುಡಿಸಲ ಜ್ಯೋತಿಯಲ್ಲಿ ಸೇರ್ಪಡೆಯಾಗಿರುವ ಹೆಚ್ಚುವರಿ ಕವನಗಳನ್ನು ನೋಡಿದಾಗ ನಾನೇ ಕೆಸರಿನ ನಂತರ ಹುಲ್ಲಿನ ನಡುವೆ ಸಿಕ್ಕಿಕೊಂಡಂತೆ ಆಗಿದೆ. ಇಲ್ಲಿನ ಕವಿತೆಗಳು ಹೆಚ್ಚು ಗಂಭೀರ ಹಾಗೂ ಸಶಕ್ತವಾಗಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ದೇಶದ ಪರಂಪರೆಯನ್ನು ಒಳಗೊಳ್ಳುವ, ಸಮಕಾಲೀನ ಹಾಗೂ ಹಿಂದಿನ ತಲೆಮಾರಿನ ಇರುವಿಕೆ ಕಂಡು ಬರುತ್ತದೆ. ಹೀಗಾಗಿ ಇವು ಜನಪ್ರಿಯ ಹಾಗೂ ಗಂಭೀರ ಕವಿತೆಗಳ ನಡುವೆ ಬರುತ್ತವೆ. ಇದರಿಂದ ಕಾವ್ಯಕ್ಕೂ ಶಕ್ತಿ, ಕವಿಗೂ ಮೆರಗು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌, ಶಾಹು ಮಹಾರಾಜ್‌, ನಾರಾಯಣ ಗುರು, ಟಿಪ್ಪು ಸುಲ್ತಾನ್‌, ಕಾನ್ಸಿರಾಂ, ಸಾವಿತ್ರಿ ಬಾಫುಲೆ, ಪೆರಿಯಾರ್‌, ಡಾ.ಬಿ.ಆರ್. ಅಂಬೇಡ್ಕರ್‌, ಬುದ್ಧ, ಬಸವಣ್ಣ, ಮಹದೇಶ್ವರ ಮೊದಲಾದ ದಾರ್ಶನಿಕರ ಬಗ್ಗೆ ಇಲ್ಲಿ ಕವನಗಳಿವೆ. ಪ್ರಸ್ತುತ ಸಮಾಜಕ್ಕೆ ಈ ಎಲ್ಲಾ ಮಹನೀಯರ ಆದರ್ಶಗಳು ಬೇಕಾಗಿವೆ ಎಂದರು.

ಧ್ವನಿಸುರಳಿಯನ್ನು ಪ್ರಗತಿಪರ ಚಿಂತಕ ಬಸವರಾಜ ದೇವನೂರು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಮಹದೇವ ಶಂಕನಪುರ ಮುಖ್ಯ ಅತಿಥಿಯಾಗಿದ್ದರು. ಗೋವಿಂದಸ್ವಾಮಿ ಗುಂಡಾಪುರ ಇದ್ದರು. ಎಂ. ಸಿದ್ದರಾಜು ಸ್ವಾಗತಿಸಿದರು. ಪದ್ಮಪಾಣಿ ಲಲಿತಕಲಾ ಅಕಾಡೆಮಿಯ ಸದಸ್ಯರು ಗೀತಗಾಯನ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ಗಾಯನ ಕ್ಷೇತ್ರದ ಸಾಧಕರಾದ ಜಯಶಂಕರ್‌ ಮೇಸ್ತ್ರಿ, ನಾರಾಯಣಸ್ವಾಮಿ, ರಮೇಶ್‌, ಸಿದ್ದೇಶ್‌, ನವೀನ್‌, ಕೆ.ಎಸ್‌. ಭವತಾರಿಣಿ, ನಾಗೇಶ್‌ ಲಕ್ಷ್ಮೀರಾಮ್, ಅಮ್ಮ ರಾಮಚಂದ್ರ, ಶೇಷಣ್ಣ, ಗಾನಸುಮಾ ಪಟ್ಟಸೋಮನಹಳ್ಳಿ, ಮರಿಸ್ವಾಮಿ ಅವರಿಗೆ ಪದಪಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಷಯಗಳು: #karnataka #news #peepalmedia
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು