ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಲೆವೆಲ್

PPeepal Media Desk

Peepal Media Desk ಅಂಕಣ

• 1 ನಿಮಿಷದ ಓದು

ಲೆವೆಲ್

– ರಘೋತ್ತಮ ಹೊಬ

“ನಾವು ಆ ಜಾತಿ ಸರ್, ಅವರು ಎಸ್ಸಿ ಸರ್ ನಮ್ ಲೆವಲ್ ಎಲ್ಲಿ ಅವರ ಲೆವೆಲ್ ಎಲ್ಲಿ? ಅವರು ನಮ್ ಹತ್ತಿರಕ್ಕೆ ಬರೋಕಾಗುತ್ತ ಸರ್?” ಮಹಿಳೆಯೊಬ್ಬಳು ಹೇಳುತ್ತ ಹೋದರು… ಅಂದಹಾಗೆ ತಪ್ಪಿಯೂ ಅವಳ ಮುಂದೆ ನಾನು, ನಾನು ಕೂಡ ಎಸ್ಸಿ ಎಂದು ಹೇಳಲಿಲ್ಲ. ಬದಲಿಗೆ ಲೆವಲ್ ಎಂದರೇನು ಎಂಬ ವಿಚಾರ ನನ್ನ ಮುಂದೆ ಬಂತು.

ಹೌದು, ಲೆವೆಲ್ ಎಂದರೇನು? ಲೆವೆಲ್ ಎಂದರೆ ಹಣಕಾಸು, ಅಂತಸ್ತು, ಮಾತಿನ ಶೈಲಿ, ಶುಚಿತ್ವ, ಓದು ಬರಹ… ಇಷ್ಟೇ. ಜಾತಿ? ಅದನ್ನು ಬದಲಿಸಲು ಸಾಧ್ಯವಿಲ್ಲ. ಬದಲಿಸಿಕೊಳ್ಳಲು ಯಾರು ಇಷ್ಟ ಪಡುವುದು ಇಲ್ಲ. ಆದರೆ ಆ ಜಾತಿಯ ಲೆವೆಲ್ ಅನ್ನು ನಾವು ಚೇಂಜ್ ಮಾಡಬಹುದು. ಈ ನಿಟ್ಟಿನಲ್ಲಿ ಮೊದಲನೆಯದಾಗಿ, ಓದು ಬರಹದ ಮೂಲಕ ಅದರಲ್ಲಿ ಹೊಸ ಹಂತ ತಲುಪುವುದರ ಮೂಲಕ ದಲಿತರು ಆ ಮಹಿಳೆ ಹೇಳಿದ ಲೆವೆಲ್ ತಲುಪಬಹುದು ಅಥವಾ ಕ್ರಾಸ್ ಮಾಡಿ ಮುಂದೆ ಹೋಗಬಹುದು. ಇನ್ನು ಎರಡನೆಯದು, ಹಣಕಾಸು; ಸ್ವಲ್ಪ ಪ್ರಯತ್ನ ಪಟ್ಟರೆ , ಬಿಸಿನೆಸ್, ಸ್ವಯಂ ಉದ್ಯೋಗ ಮತ್ತು ಸ್ಮಾರ್ಟ್ ಉದ್ಯೋಗ (ನೇರ ಮಾರುಕಟ್ಟೆ) ಮೂಲಕ ಹಣ ಧಾರಾಳವಾಗಿ ಗಳಿಸಬಹುದು. ಲೆವೆಲ್ ತಲುಪಬಹುದು. ಉಳಿದದ್ದು ಸ್ವಚ್ಚತೆ ಮಾತುಕತೆ ಶೈಲಿ; ನನ್ನ ಪ್ರಕಾರ ಬೌದ್ಧ ಧರ್ಮ ಅನುಸರಿಸಿದರೆ ಅದು ಕೂಡ ಬದಲಾಗುತ್ತದೆ ಲೆವೆಲ್ ಚೇಂಜ್ ಆಗುತ್ತದೆ. ಹಳ್ಳಿಗಳಲ್ಲಿ ಇದನ್ನೆಲ್ಲ ಮಾಡಲು ಸಾಧ್ಯ ಆಗದಿದ್ದರೆ ಬಾಬಾಸಾಹೇಬ್ ಅಂಬೇಡ್ಕರರು ಹೇಳಿರುವಂತೆ ದಲಿತರು ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಬರುವುದು ಸೂಕ್ತ.
ಯಾಕೆಂದರೆ ನನ್ನ ಜೊತೆ ಮಾತಾಡಿದ ಆ ಮಹಿಳೆ ಹಳ್ಳಿಯವಳು. ಅಲ್ಲಿಯ ದಬ್ಬಾಳಿಕೆ ದೌರ್ಜನ್ಯ ಮನಸ್ಥಿತಿಯವಳು. ಅಂತಹವರನ್ನು ಬದಲಾಯಿಸುವುದು ಕಷ್ಟ. ಹೊಂದಿಕೊಂಡು ಹೋಗುವುದು ಕಷ್ಟ.

ಆದ್ದರಿಂದ ದಲಿತ ಸಮುದಾಯದ ಶಿಕ್ಷಣದ ಲೆವೆಲ್, ಹಣಕಾಸು ಸಂಪಾದನೆಯ ಲೆವೆಲ್ , ಧರಿಸುವ ಡ್ರೆಸ್ ಮಾತುಕತೆಯ ಶೈಲಿಯ ಲೆವೆಲ್ ಇವುಗಳನ್ನು ಬದಲಿಸಿಕೊಂಡರೆ, ಬದಲಿಸಿಕೊಂಡು ಸಾರ್ವಜನಿಕವಾಗಿ ತೋರಿಸಿಕೊಂಡರೆ ಖಂಡಿತ ಇನ್ನೊಮ್ಮೆ ಆ ಮಹಿಳೆ ಅಥವ ಅಂತಹ ಮನಸ್ಥಿತಿಯುಳ್ಳ ಮಹಿಳೆಯರು, ನಮ್ಮ ಮುಂದೆ “ಲೆವೆಲ್” ಎಂಬ ಪದ ಬಳಸಲು ಖಂಡಿತ ಯೋಚನೆ ಮಾಡುತ್ತಾರೆ.

ರಘೋತ್ತಮ ಹೋಬ

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು