ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ದೌರ್ಜನ್ಯಗಳ ನಡುವಿನ ಬದುಕು

PPeepal Media Desk

Peepal Media Desk ಅಂಕಣ

• 2 ನಿಮಿಷದ ಓದು

ದೌರ್ಜನ್ಯಗಳ ನಡುವಿನ ಬದುಕು

“..ತಮ್ಮ ಹತ್ತಿರದವರಿಂದ, ಕುಟುಂಬಸ್ಥರಿಂದ ಅಥವಾ ಸಂಗಾತಿಯಿಂದಲೇ ಹಿಂಸೆಗೆ ಒಳಗಾಗುವುದು ಮಹಿಳೆಯರಿಗಿರುವ ಅಸಹಾಯಕತೆಗಳು, ಅನಿವಾರ್ಯತೆಯ ಪ್ರತಿಫಲ ಕೂಡ. ಆರ್ಥಿಕ ಸಬಲತೆಯಿಲ್ಲದ ಕಡೆ, ಸಾಮಾಜಿಕವಾಗಿ ತನಗೊಂದು ಸ್ಥಾನವಿಲ್ಲದಾಗ ಹೆಣ್ಣು ಅನಿವಾರ್ಯವಾಗಿ ಮನೆಯವರ ಮೇಲೆ ಅವಲಂಬಿತಳಾಗುವುದು ದೌರ್ಜನ್ಯ ಸಹಿಸಿಕೊಳ್ಳುವುದು ಸಾಮಾನ್ಯವಾಗಿದೆ..” ಸಮುದ್ಯತಾ ಕಂಜರ್ಪಣೆ ಅವರ ಬರಹದಲ್ಲಿ

ಇತ್ತೀಚಿಗಷ್ಟೇ ಯು ಎನ್‌, ಒಂದು ವರದಿ ಪ್ರಕಟಿಸಿದೆ.
ಪ್ರತಿದಿನ ಸರಾಸರಿ 140 ಮಹಿಳೆಯರು ತಮ್ಮ ಹತ್ತಿರದವರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಯುಎನ್‌ ತನ್ನ ವರದಿಯಲ್ಲಿ ಹೇಳಿದೆ. ವಿಶ್ವದಾದ್ಯಂತ ಪ್ರತಿ ಮೂವರಲ್ಲಿ ಒಬ್ಬ ಮಹಿಳೆ ತನ್ನ ಸಂಗಾತಿಯಿಂದಲೇ ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುತ್ತಾಳೆ ಎಂಬುದು ವರದಿಯಲ್ಲಿ ದಾಖಲಾಗಿರುವುದು ಮಹಿಳೆಯರ ಹೀನಾಯ ಪರಿಸ್ಥಿತಿಗೆ ದುರಂತ ಸಾಕ್ಷಿ.

ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯ್ದೆಯಿರುವ 165 ದೇಶಗಳಲ್ಲಿ ಕೇವಲ 104 ದೇಶಗಳಲ್ಲಿ ಮಾತ್ರ ಕೌಟುಂಬಿಕ ದೌರ್ಜನ್ಯವನ್ನು ವಿರೋಧಿಸುವ ಮತ್ತು ಅದರ ಕುರಿತ ಸಮಗ್ರ ಕಾನೂನು ಇರುವುದು. ಸಮಗ್ರ ಕಾಯ್ದೆ – ಕಾನೂನುಗಳಿರುವ ದೇಶಗಳಲ್ಲಿ ದೌರ್ಜನ್ಯ ಶೇ. 9.5 ಇದ್ದರೆ, ಕೌಟುಂಬಿಕ ದೌರ್ಜನ್ಯ ವಿರೋಧಿ ಕಾನೂನುಗಳು ಇಲ್ಲದಿರುವ ದೇಶಗಳಲ್ಲಿ ದೌರ್ಜನ್ಯದ ಪ್ರಮಾಣ ಶೇ 16.1 ರಷ್ಟಿದೆ.

ಭಾರತ ದೇಶದಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧದ ಕಾಯ್ದೆಯಿದ್ದರೂ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 18ರಿಂದ 49 ವಯಸ್ಸಿನ ಸುಮಾರು 30% ಮಹಿಳೆಯರು ತಮ್ಮ ಸಂಗಾತಿಯಿಂದ ದೈಹಿಕ, ಮಾನಸಿಕ ಅಥವಾ ಮಾನಸಿಕ ಹಿಂಸೆಯನ್ನು ಅನುಭವಿಸಿದ್ದಾರೆ ಎನ್ನುತ್ತದೆ. ಇಂದಿಗೂ ಕಾನೂನಿನ ಕುರಿತಾದ ಭಯ, ಹೆಣ್ಣು ಮಕ್ಕಳು ಪೋಲೀಸ್‌ ಠಾಣೆಯ ಮೆಟ್ಟಿಲು ಹತ್ತಬಾರದು ಎನ್ನುವ ಅಲಿಖಿತ ಕಟ್ಟಳೆಗಳು, ಹೆಣ್ಣು ಏನೇ ಆದರೂ ಹೊಂದಿಕೊಂಡು ಹೋಗಬೇಕು ಎನ್ನುವ ಪುರುಷ ಪ್ರಧಾನ ಸಮಾಜದ ಹೇರಿಕೆಗಳು, ಮತ್ತು ಕಾನೂನು ವ್ಯವಸ್ಥೆ ಸಹ ಮಹಿಳೆಯರು ಕಾನೂನು ನೆರವು ಪಡೆಯದೇ ಇರುವುದಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಪ್ರಕಾರ ತಮ್ಮ ಸಂಗಾತಿಯಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ವರದಿಯ ಅನುಸಾರ ಕರ್ನಾಟಕದಲ್ಲಿ ಶೇ.48 ಮಹಿಳೆಯರು ತಮ್ಮ ಗಂಡಂದಿರಿಂದ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಪ್ರಮಾಣದಲ್ಲಿ ಕೇವಲ ಶೇ 1 ಮಹಿಳೆಯರು ಮಾತ್ರ ಕಾನೂನಿನ ನೆರವು ಪಡೆಯಲು ಮುಂದಾಗಿದ್ದಾರೆ. ಕರ್ನಾಟಕ, ಬಿಹಾರ, ತೆಲಂಗಾಣ. ಮಣಿಪುರ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಅಸ್ಸಾಂ, ಜಾರ್ಖಂಟ್‌ ಮತ್ತು ಒಡಿಶಾ ಈ ಪಟ್ಟಿಯ ಮೊದಲ ಹತ್ತು ರಾಜ್ಯಗಳಾಗಿವೆ.

ಶೇ 25 ಮಹಿಳೆಯರಿಗೆ ತಮ್ಮ ಸಂಗಾತಿ ನೀಡಿದ ಕಿರುಕುಳದಿಂದ ಮೂಗೇಟುಗಳು ಮತ್ತು ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಶೇ 7ರಷ್ಟು ಮಹಿಳೆಯರಿಗೆ ಮೂಳೆಗಳ ಮೇಲಿನ ಏಟು, ಕಣ್ಣಿಗೆ ಏಟಾಗಿರುವುದು, ಉಳುಕಿರುವುದು ಮತ್ತು ಸುಟ್ಟಿರುವ ಗಾಯಗಳಾಗಿವೆ. ಶೇ 6ರಷ್ಟು ಮಹಿಳೆಯರು ಸುಟ್ಟ ಗಾಯಗಳು, ಮೂಳೆ ಮುರಿತ, ಹಲ್ಲು ಮುರಿತ ಮುಂತಾದ ಸಮಸ್ಯೆಗಳನ್ನು ಅನುಭವಿಸಿದ್ದಾರೆ.

ಮರ್ಯಾದೆಗೇಡು ಹತ್ಯೆ ಕೂಡ ಇದರ ಒಂದು ಭಾಗವೇ. ಪ್ರೀತಿಸಿ ಮದುವೆಯಾಗುವ ಕಾರಣದಿಂದ, ಅಥವಾ ಬೇರೆ ಜಾತಿಯವರನ್ನು ಪ್ರೀತಿಸಿದರು ಎನ್ನುವ ಕಾರಣದಿಂದ ಹತ್ಯೆಗೊಳಗಾಗುವ ಹೆಣ್ಣುಮಕ್ಕಳ ಸಂಖ್ಯೆಯೂ ಭಾರತದಲ್ಲಿ ಹೆಚ್ಚಿದೆ. ಈ ಹತ್ಯೆಗಳು ಕುಟುಂಬದ ಅತೀ ಹತ್ತಿರದವರಾದ ತಂದೆ, ಅಣ್ಣ, ಮಾವ, ಚಿಕ್ಕಪ್ಪ ಮುಂತಾದ ಸಂಬಂಧಿಗಳಿಂದಲೇ ನಡೆಯುತ್ತವೆ. ಇದಕ್ಕಿರುವ ಇನ್ನೊಂದು ಆಯಾಮ ಮಕ್ಕಳ ಮೇಲಿನ ದೌರ್ಜನ್ಯ ಕೂಡ. ಮಕ್ಕಳಾಗಿರಲಿ, ಹದಿಹರೆಯದವರಾಗಿರಲಿ ಸಮೀಪದ ಬಂಧುಗಳಿಂದಲೋ, ಪರಿಚಯಸ್ಥರಿಂದಲೋ ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ. ಕುಟುಂಬದ ಮರ್ಯಾದೆ ಎನ್ನುವ ಹೆಸರಲ್ಲಿ ಇಂತಹವುಗಳು ಗುಟ್ಟಾಗಿಯೇ ಉಳಿದುಬಿಡುತ್ತವೆ.

ತಮ್ಮ ಹತ್ತಿರದವರಿಂದ, ಕುಟುಂಬಸ್ಥರಿಂದ ಅಥವಾ ಸಂಗಾತಿಯಿಂದಲೇ ಹಿಂಸೆಗೆ ಒಳಗಾಗುವುದು ಮಹಿಳೆಯರಿಗಿರುವ ಅಸಹಾಯಕತೆಗಳು, ಅನಿವಾರ್ಯತೆಯ ಪ್ರತಿಫಲ ಕೂಡ. ಆರ್ಥಿಕ ಸಬಲತೆಯಿಲ್ಲದ ಕಡೆ, ಸಾಮಾಜಿಕವಾಗಿ ತನಗೊಂದು ಸ್ಥಾನವಿಲ್ಲದಾಗ ಹೆಣ್ಣು ಅನಿವಾರ್ಯವಾಗಿ ಮನೆಯವರ ಮೇಲೆ ಅವಲಂಬಿತಳಾಗುವುದು ಮತ್ತು ಆ ಅನಿವಾರ್ಯತೆಗಾಗಿ ಅಸಹಾಯಕವಾಗಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಹಲವಾರು ಬಾರಿ ಪ್ರತಿಭಟಿಸಿದರೆ ಇನ್ನಷ್ಟು ಸಮಸ್ಯೆಗಳಾಗಬಹುದು ಎನ್ನುವ ಭಯ ಕಾಡಿದರೆ, ತವರು ಮನೆಯ, ಪೋಷಕರ ಬೆಂಬಲವಿಲ್ಲದೇ ಇರುವುದು ಇನ್ನೊಂದು ಸಮಸ್ಯೆ. ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಮಕ್ಕಳನ್ನು ಗಂಡನ ಜೊತೆಯಲ್ಲಿ ಬಿಟ್ಟು ಹೊರಬರುವ ಹೆಣ್ಣು ಮಕ್ಕಳು ಅಪರೂಪ. ಆರ್ಥಿಕ ಸ್ವಾವಲಂಬನೆ ಇಲ್ಲದಿದ್ದಾಗ ಬೇರೆಯವರಿಗೆ ಹೊರೆಯಾಗಿ ಬದುಕಲು ಸಾಧ್ಯವಾಗುವುದಿಲ್ಲ, ಮಕ್ಕಳನ್ನು ಸಾಕಿ, ಅವರ ಜವಾಬ್ದಾರಿ ತೆಗೆದುಕೊಳ್ಳುವುದು ಒತ್ತಡವಾಗುತ್ತದೆ. ಪೋಷಕರ ಬೆಂಬಲವಿಲ್ಲದಾಗ ಒಂಟಿಯಾಗಿ ಬದುಕು ಕಟ್ಟಿಕೊಳ್ಳುವುದು ಸವಾಲಾಗುತ್ತದೆ. ಹೇಗೋ ತನ್ನ ಬದುಕು ಇಷ್ಟೇ, ಮಕ್ಕಳ ಭವಿಷ್ಯ ಹಸನಾದರೆ ಸಾಕು ಅಂತಲೋ, ದೌರ್ಜನ್ಯವನ್ನು ವಿರೋದಿಸಿ ನಡೆದು ಹೊರಪ್ರಪಂಚಕ್ಕೆ ಕಾಲಿಡುವುದು ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಎನ್ನುವುದು ಇನ್ನೊಂದು ಅಸಹಾಯಕತೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕುಟುಂಬದ ನೆರವು ಅತ್ಯಗತ್ಯ. ನಿನ್ನ ಮೇಲೆ ದೌರ್ಜನ್ಯವಾಗುತ್ತಿದ್ದಲ್ಲಿ ನೀನು ಅದನ್ನು ಪ್ರತಿಭಟಿಸಬೇಕು, ನಿನ್ನ ಬೆಂಬಲಕ್ಕೆ ನಾವಿದ್ದೇವೆ ಎನ್ನುವ ಸಮರ್ಥ ನೆರವು ಅಗತ್ಯವಿದೆ. ಅದರ ಜೊತೆ ಜೊತೆಗೆ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿರಬೇಕು. ತನ್ನ ನಿರ್ಧಾರವನ್ನು ತಾನು ತೆಗೆದುಕೊಳ್ಳುವ ಮಟ್ಟಿಗೆ ಸಬಲಳಾದಾಗ ತನ್ನ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ಧೈರ್ಯ ಬರುತ್ತದೆ. ಎಲ್ಲಕ್ಕಿಂತ ಹೆಚ್ಚು, ತನ್ನ ಮೇಲೆ ನಡೆಯುತ್ತಿರುವುದು ದೌರ್ಜನ್ಯವಾ, ಯಾವುದು ದೌರ್ಜನ್ಯ ಎನ್ನುವ ಅರಿವೂ ಇರಬೇಕು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು