ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಸದಭಿರುಚಿಯಿಲ್ಲದ ಉಬ್ಬುಶಿಲ್ಪ!

PPeepal Media

Peepal Media ಅಂಕಣ

• 1 ನಿಮಿಷದ ಓದು

<strong>ಸದಭಿರುಚಿಯಿಲ್ಲದ ಉಬ್ಬುಶಿಲ್ಪ!</strong>

ಪರಶುರಾಮ ಥೀಂ ಪಾರ್ಕಿನಲ್ಲಿ ಸ್ಥಾಪನೆಯಾಗಿರುವ “ಪರಶುರಾಮನ ಕಾಲಬುಡದಲ್ಲಿ ನಿಂತಿರುವ ಭೂತಗಳು/ ದೈವಗಳು” ಉಬ್ಬು ಶಿಲ್ಪವನ್ನು ನೋಡಿ ಮನಸ್ಸಿಗೆ ತುಂಬಾ ಬೇಸರವಾಯಿತು.‌ ಈ ಭೂತಗಳು ಅಣಿ ಬಿಚ್ಚಿ ನಿಂತಿವೆ. ಅಣಿಯ ಅಕ್ಕ ಪಕ್ಕದಲ್ಲಿ ತಲೆಪಟ್ಟವನ್ನು ಧರಿಸಿದ ದೈವ ಮಾಧ್ಯಮದ ವ್ಯಕ್ತಿಗಳು ಕೈಮುಗಿದು ನಿಂತಿದ್ದಾರೆ. ಪರಶುರಾಮನನ್ನು ಸ್ವಾಗತಿಸಲು ನಿಂತಿವೆ ಎಂದಾದರೆ ಅಣಿ ಬಿಚ್ಚಿಡುವ ಅಗತ್ಯವಿಲ್ಲ. ಇಲ್ಲಿ ಶರಣಾಗತಿಯ ಭಾವವೇ ಎದ್ದು ಕಾಣುತ್ತದೆ. ಒಂದುವೇಳೆ ಪರಶುರಾಮ ತುಳುನಾಡನ್ನು ಸೃಷ್ಟಿಸಿ, ಸಮಗ್ರ ತುಳುನಾಡನ್ನು ಸಂರಕ್ಷಿಸಲು ಬಂದವನು ಎಂದಾದರೆ ಉಳಿದ ಧಾರ್ಮಿಕ ಪರಂಪರೆಗಳ ಅಧಿದೇವತೆಗಳು ಪರಶುರಾಮನ ಆಧಿಪತ್ಯವನ್ನು ಒಪ್ಪಿಕೊಳ್ಳಲು ಅಥವಾ ಸ್ವಾಗತಿಸಲು ಜೊತೆಗೆ ಇರಬೇಕಾಗಿತ್ತು.. ( ಹೀಗೆ ಮಾಡುವುದು ಕೂಡಾ ತಪ್ಪೇ ಆಗುತ್ತದೆ). ಕೇವಲ ತುಳುವರ ಆರಾಧ್ಯದೈವಗಳನ್ನು, ತುಳುನೆಲದ ಸತ್ಯಗಳನ್ನು ಮಾತ್ರ ಹೀಗೆ ಉಬ್ಬುಶಿಲ್ಪದಲ್ಲಿ ಕಾಣಿಸಿದ್ದರ ಹಿಂದೆ ಸದಭಿರುಚಿ ಇಲ್ಲ. ಅತಿಥಿ ಸತ್ಕಾರದ ಆಶಯ ಇದೆ ಎಂದಿಟ್ಟುಕೊಂಡರೂ ಉಬ್ಬು ಶಿಲ್ಪದಲ್ಲಿ ಇದನ್ನು ಸಮರ್ಥಿಸುವ ಪರಿಕರಗಳಿಲ್ಲ. ಅಣಿ ಬಿಚ್ಚಿ ಇಟ್ಟಿರುವುದರಿಂದ ಅವುಗಳ ದೈವತ್ವವನ್ನು ಪರಶುರಾಮನ ಮುಂದೆ ನಿರಾಕರಿಸಲಾಗಿದೆ. ಪರಶುರಾಮನ ಪ್ರಭುತ್ವವನ್ನು ಒಪ್ಪಿಕೊಳ್ಳುವ  ಭಾವವೇ ಎದ್ದು ಕಾಣುತ್ತದೆ. ಭೂತಾರಾಧನೆಯ ಮೇಲೆ ಹಲವು ವರ್ಷಗಳಿಂದ ಆಗುತ್ತಿರುವ ಅನ್ಯಧರ್ಮಗಳ ಪ್ರಭಾವ ಒಟ್ಟಾರೆಯಾಗಿ ಈ ಧಾರ್ಮಿಕ ರಂಗಭೂಮಿಯ ಅಂದ ಮತ್ತು ಅರ್ಥವನ್ನು ಕೆಡಿಸುತ್ತಿರುವ ಬಗ್ಗೆ ಎಲ್ಲಾ ಧರ್ಮಗಳ ಮತ್ತು ಜಾನಪದ ಪರಂಪರೆಯ ಪ್ರಜ್ಞಾವಂತ ವಿದ್ವಾಂಸರು ಕಳವಳ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಭೂತಗಳ ಗುಡಿ, ಆರಾಧನೆಯ ಸ್ವರೂಪಗಳಲ್ಲಿ ಭೂತಾರಾಧನೆಗೆ ಒಗ್ಗದ, ಒಪ್ಪದ ಅಂಶಗಳು ಸೇರುತ್ತಿರುವುದು ಸರಿಯಲ್ಲ ಎಂದು ನಾವು ಅನೇಕರು ಹೇಳುತ್ತಲೇ ಬಂದಿದ್ದೇವೆ. ಹೀಗೆ ಹೇಳುವುದು ಹೊಣೆಗಾರಿಕೆಯ ಕೆಲಸ ಎಂದಲ್ಲದೆ ಜಗಳಕ್ಕೆ, ಘರ್ಷಣೆಗೆ ಕಾರಣವಾಗಲಿ ಎಂದಲ್ಲ. ಸಮಾಜದ ಸಾಮರಸ್ಯವನ್ನು ಕೆಡಿಸುವ ಮತ್ತು ಒಂದು ನಿರ್ದಿಷ್ಟ ಧಾರ್ಮಿಕ ಪರಂಪರೆಯ ಜನರಿಗೆ ನೋವನ್ನು ತಂದು ಅವಮಾನಿಸುವ  ಯಾವುದೇ ಕಲಾಕೃತಿಗಳ ಸ್ಥಾಪನೆ ಸರಿಯಲ್ಲ ಎಂದೇ ನನ್ನ ಭಾವನೆ.

ಪ್ರೊ.ಕೆ. ಚಿನ್ನಪ್ಪ ಗೌಡ

ತುಳು ಜಾನಪದ ವಿದ್ವಾಂಸರು

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು