ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮಳೆಗಾಲದ ಹಬ್ಬ ʼಕಾರಬ್ಬʼ

PPeepal Media

Peepal Media ಅಂಕಣ

• 1 ನಿಮಿಷದ ಓದು

ಮಳೆಗಾಲದ ಹಬ್ಬ ʼಕಾರಬ್ಬʼ

ಮುಂಗಾರಿನಲ್ಲಿ ಯಾವ ಬೆಳೆ ತಮ್ಮ ಕೈ ಹಿಡಿಯುತ್ತದೆ ಎಂಬುದನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅರಿತು ಬಿತ್ತನೆ ಕಾರ್ಯ ಮುಂದಾಗುವ ವಿಶೇಷ ಹಾಗೂ ವಿಭಿನ್ನ ಆಚರಣೆಯೇ ಈ ಕಾರಬ್ಬ. ತನ್ನ ತವರಿನಲ್ಲಿ ಕಂಡ ಕಾರಬ್ಬದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ ಉಮಾದೇವಿ ಕೆ ಎಸ್‌, ತುಮಕೂರು

ಬಸವಜಯಂತಿಯ ನಂತರ ಮುಂಗಾರು ಆರಂಭದ ಮೊದಲ ಹಬ್ಬ ಕಾರಬ್ಬ. ಕೃಷಿಗೆ ಸಂಬಂಧಿಸಿದ ಎತ್ತು, ನೇಗಿಲು, ನೊಗಗಳನ್ನು ಪೂಜಿಸುವ ಹಬ್ಬ ಇದು. ಉತ್ತರಕರ್ನಾಟಕದ ಕಡೆ ವಿಶೇಷವಾಗಿ ಆಚರಿಸುವ ಇದನ್ನು ‘ಕಾರಹುಣ್ಣಿಮೆ’ಯ ನಂತರ ಅಮಾವಾಸ್ಯೆಯ ಒಳಗೆ ಭಾನುವಾರ ಅಥವಾ ಬುಧವಾರಗಳಲ್ಲಿ  ‘ಕಾರಬ್ಬ’ ಎನ್ನುವ ಹೆಸರಿನಲ್ಲಿ ನಮ್ಮ ಕಡೆ  ಆಚರಿಸುತ್ತಾರೆ.

ತವರಿನಲ್ಲಿ ನಾ ಕಂಡ ಕಾರಬ್ಬ

ಹಬ್ಬದ ದಿನ ಬೆಳಿಗ್ಗೆ ದನಕರುಗಳ ಮೈತೊಳೆದು ಕೊಂಬಿಗೆ ಬಣ್ಣ ಹಚ್ಚುತ್ತಿದ್ದರು. ಇನ್ನು ಕೆಲವರು ತಮಗೆ ಇಷ್ಟವಾಗುವ ರೀತಿಯಲ್ಲಿ ಅವುಗಳನ್ನು ಅಲಂಕರಿಸುತ್ತಿದ್ದರು. ಅಂದು ರಾತ್ರಿ ಕರುಗಲ್ ಗೌಡರ ಮನೆಯಲ್ಲಿ ಒಬ್ಬರು ಕಂಬಳಿ ಹೊದ್ದು, ಕೈಯಲ್ಲಿ ಕೋಲು ಮತ್ತು  ಮುಂಗಾರು, ಹಿಂಗಾರು ಬೆಳೆಗಳ ಕಾಳುಗಳನ್ನು ಹಾಕಿದ ಹೊಸ ಮೊಗೆಯನ್ನು ತೆಗೆದುಕೊಂಡು ಹೋಗಿ ಅದಕ್ಕೆ ನೀರು  ಹಾಕಿ ಕರುಗಲ್ಲಿನ ಮೇಲಿಟ್ಟು ಪೂಜೆ ಮಾಡಬೇಕು. ಅಷ್ಟೊತ್ತಿಗೆ ಊರಿನವರು ಕರುಗಲ್ಲಿಗೆ ಸುಣ್ಣ, ಕೆಮ್ಮಣ್ಣು ಬಳಿದು  ‘ಕರೇಸೊಪ್ಪು’ ಕಟ್ಟಿ ಸಿಂಗರಿಸಿರುತ್ತಾರೆ. ಹಂಬಳ್ಳಿ, ಮಾವು, ಬೇವಿನ ಸೊಪ್ಪಿನ ತೋರಣಕ್ಕೆ ‘ಕರೇ ಸೊಪ್ಪು’ ಎಂದು ಹೆಸರು.

ಪೂಜೆ, ಖಿಚಡಿಯ (ಹುಗ್ಗಿ) ನೈವೇದ್ಯದ ನಂತರ ಕೋಲಿನಿಂದ ಮೊಗೆಯ ತಳಕ್ಕೆ ಕುಕ್ಕಬೇಕು. ಆಗ ಕುಡಿಕೆಯ ತೂತಿನಿಂದ ನೀರಿನೊಂದಿಗೆ ಹರಿದು ಬರುವ ಕಾಳುಗಳಲ್ಲಿ ಯಾವುದು ಮುಂದೆ ಇರುತ್ತೋ ಆ ಬೆಳೆ ಆ ವರ್ಷ ಚೆನ್ನಾಗಿ ಆಗುತ್ತೆ ಎಂಬ ನಂಬಿಕೆ.

ಕರಗ ಕುಕ್ಕಿದ ಮೇಲೆ ಜನರೆಲ್ಲಾ ಸೇರಿ ಕರೆ ಹರಿಯುತ್ತಾರೆ. ಕರೆಸೊಪ್ಪನ್ನು  ಕುಡುಗೋಲು ಮುಂತಾದವುಗಳಿಂದ ಕಟ್ ಮಾಡುವಂತಿಲ್ಲ. ಪರಸ್ಪರ ಎಳೆದಾಡುತ್ತಲೇ ಹರಿದು ಕೀಳಬೇಕು. ಕಿತ್ತುಕೊಂಡ ಕರೆಸೊಪ್ಪನ್ನು ತಮ್ಮ ತಮ್ಮ ಮನೆಯ ಕೊಟ್ಟಿಗೆ ಮತ್ತು ಕಡೆಯುವ ಕಂಬಕ್ಕೆ ಕಟ್ಟಿ “ಕರೇವು ಚೆನ್ನಾಗಿ ಆಗಲಿ” ಪ್ರಾರ್ಥಿಸುತ್ತಾರೆ.

ಕುವೆಂಪು ರವರ ‘ವರ್ಷಭೈರವ’ ಪದ್ಯ ಓದುವವರೆಗೂ ನನಗೆ ಕಾರು, ಕಾರಬ್ಬ ಅಂದರೇನು ಎಂದು ಗೊತ್ತೇ ಇರಲಿಲ್ಲ. ಮನೆಯಲ್ಲಿ ಕೂಡಾ ಯಾರನ್ನೂ ಕೇಳದೆ..ಏನಿರಬಹುದು…ಅಂತ ಒಬ್ಬಳೇ ಯೋಚಿಸುತ್ತಿದ್ದೆ. 

ಮಾರ್ನಾಮಿ ಹಬ್ಬದ  ಆಯುಧ ಪೂಜೆಯಲ್ಲಿ ಬಸ್ಸು, ಲಾರಿ  ಪೂಜೆ ಮಾಡುವಂತೆ ಈ ಹಬ್ಬದಲ್ಲಿ ಕಾರುಗಳಿಗೆ ಪೂಜೆ ಮಾಡುತ್ತಾರಾ? ಎಂದು ಯೋಚಿಸಿದ್ದೂ ಉಂಟು. ಕಾರ್ಗಾಲ ಎನ್ನುವ ಪದ ಕೇಳಿದ ಮೇಲೆಯೇ ಗೊತ್ತಾದದ್ದು “ಕಾರಬ್ಬ ಅಂದರೆ ಮಳೆಗಾಲದ ಹಬ್ಬ ” ಎಂದು. 

ಬಹಳ ಸಲ ಹಬ್ಬದ ದಿನ ಸೋನೆ ಮಳೆ ಕೂಡಾ ಸುರಿಯುತ್ತಲೇ ಇರುತ್ತಿತ್ತು. ಅಪ್ಪ ಇರುವವರೆಗೂ ಪ್ರತೀ ವರ್ಷವೂ ಅವರೇ ಕರಗ ಕುಕ್ಕುತ್ತಿದ್ದರು. ಈಗ ಅಪ್ಪನೂ ಇಲ್ಲ. ಇಂತಹಾ ಅನಿಶ್ಚಿತ ಮಳೆಗಾಲದಲ್ಲಿ “ಯಾವ ಧಾನ್ಯ ಮುಂದೆ ಬರುತ್ತೆ?” ಎಂದು ನೋಡುವ ಕುತೂಹಲವೂ ಇಲ್ಲ.

ಉಮಾದೇವಿ ಕೆ ಎಸ್‌

ತುಮಕೂರು

ಇದನ್ನೂ ಓದಿ-ಅಪ್ಪನ ಅದ್ರೆ ಮಳೆ

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು