Saturday, September 27, 2025

ಸತ್ಯ | ನ್ಯಾಯ |ಧರ್ಮ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾದಾರರಿಗೆ ಮೊದಲ ಕಂತಿನ ಗೌರವ ಧನ ಬಿಡುಗಡೆಗೆ ಆದೇಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ ಮೊದಲನೇ ಕಂತಿನ ಗೌರವಧನವಾಗಿ ತಲಾ ರೂ.5000/- ಗಳಂತೆ ವಿತರಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.

ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ.60,36,40,000/- (ಅರವತ್ತು ಕೋಟಿ ಮೂವತ್ತಾರು ಲಕ್ಷದ ನಲವತ್ತು ಸಾವಿರ ರೂಪಾಯಿ) ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ 1,20,728 ಸಮೀಕ್ಷಾದಾರರಿಗೆ (GBA ಹೊರತುಪಡಿಸಿ) ಅನುಬಂಧದಲ್ಲಿ ವಿವರಿಸಿರುವಂತೆ ಮೊದಲನೇ ಕಂತಿನಲ್ಲಿ ಗೌರವಧನ ತಲಾ ರೂ.5000/- ಗಳಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಟ್ಟು ರೂ. 60,36,40,000/-(ರೂಪಾಯಿ ಅರವತ್ತು ಕೋಟಿ ಮೂವತ್ತಾರು ಲಕ್ಷದ ನಲವತ್ತು ಸಾವಿರಗಳು ಮಾತ್ರ) ಗಳನ್ನು ಸಮೀಕ್ಷಾ ಉದ್ದೇಶಕ್ಕಾಗಿ ನಿಗಮಗಳಿಂದ ಆಯೋಗದ ಠೇವಣಿ ಖಾತೆ ಲೆಕ್ಕ ಶೀರ್ಷಿಕೆ ಸಂಖ್ಯೆ: 8449-00-120-0-18-677 ಹಾಗೂ ಠೇವಣಿ ಸಂಖ್ಯೆ: 265721010 ಗೆ ವರ್ಗಾವಣೆ ಮಾಡಿರುವ ಅನುದಾನದಿಂದ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಪಿ.ಡಿಖಾತೆ/ಬ್ಯಾಂಕ್ ಖಾತೆಗೆ ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟು ಬಿಡುಗಡೆ ಮಾಡಿ ಆದೇಶಿಸಿದೆ.

ಈ ಅನುದಾನವನ್ನು ಸಮೀಕ್ಷಾದಾರರಿಗೆ ತಲಾ ರೂ.5,000 ರಂತೆ ಮೊದಲನೇ ಕಂತಿನ ಗೌರವಧನ ನೀಡಲು ಬಳಕೆ ಮಾಡುವುದು. ಉಳಿದ ಅನುದಾನವನ್ನು ಮುಂದಿನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.

ಸಮೀಕ್ಷೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾಗುವ ಅನುದಾನ ಹಾಗೂ ವೆಚ್ಚದ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು ಹಾಗೂ ನಿಯಮಾನುಸಾರ ವೆಚ್ಚಗಳನ್ನು ಭರಿಸಿದ ನಂತರ ಹಣ ವಿನಿಯೋಗ ಪ್ರಮಾಣ ಪತ್ರವನ್ನು ಆಯೋಗಕ್ಕೆ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಕೆ. ಎ. ದಯಾನಂದ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page