Tuesday, July 29, 2025

ಸತ್ಯ | ನ್ಯಾಯ |ಧರ್ಮ

ದೂರದೃಷ್ಟಿಯಿಲ್ಲದ ಅಶಿಕ್ಷಿತ ನಾಯಕರು ನಮ್ಮನ್ನು ಆಳುತ್ತಿದ್ದಾರೆ: ಕಾಜೋಲ್

ಭಾರತವು ಬದಲಾವಣೆಗಳನ್ನು ತ್ವರಿತ ಗತಿಯಲ್ಲಿ ಕಾಣದಿರಲು ಅವಿದ್ಯಾವಂತ ನಾಯಕರೇ ಕಾರಣ ಎಂದಿದ್ದಾರೆ ಬಾಲಿವುಡ್‌ ನಟಿ ಕಾಜೋಲ್.‌

ದಿ ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಅವರು “ಯಾವುದೇ ದೂರದೃಷ್ಟಿ ಹೊಂದಿಲ್ಲದ ನಾಯಕರು ನಮ್ಮನ್ನು ಆಳುತ್ತಿದ್ದಾರೆ. ಭಿನ್ನ ನೋಟಗಳನ್ನು ಗಳಿಸಲು ಶಿಕ್ಷಣ ಬಹಳ ಉಪಯುಕ್ತವಾದುದು” ಎಂದು ಅವರು ಹೇಳಿದ್ದಾರೆ.

“ಭಾರತದಂತಹ ದೇಶದಲ್ಲಿ ಬದಲಾವಣೆಯೆನ್ನುವುದು ತೆವಳುತ್ತಾ ಸಾಗಿದೆ. ನಾವು ನಮ್ಮ ಸಂಪ್ರದಾಯದ ಕೂಪಗಳಲ್ಲಿ ಮುಳುಗಿದ್ದೇವೆ. ಇದರಿಂದ ನಮ್ಮನ್ನು ಹೊರತರುವಲ್ಲಿ ಶಿಕ್ಷಣ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ ನಮ್ಮಲ್ಲಿರುವುದು ಅವಿದ್ಯಾವಂತ ನಾಯಕರು. ಹೀಗೆ ಹೇಳುವುದು ನನ್ನನ್ನು ಸಂಕಷ್ಟಕ್ಕೆ ದೂಡಬಹುದಾದರೂ ಅದೇ ಸತ್ಯ.

ಅಂತಹ ದೂರದೃಷ್ಟಿ ಇಲ್ಲದ ನಾಯಕರು ನಮ್ಮನ್ನು ಆಳುತ್ತಿದ್ದಾರೆ. ಕನಿಷ್ಠ ಶಿಕ್ಷಣವು ವಿಭಿನ್ನ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ’ ಎಂದು ಕಾಜೋಲ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page