Monday, June 17, 2024

ಸತ್ಯ | ನ್ಯಾಯ |ಧರ್ಮ

ಪ.ಜಾತಿ/ಪಂಗಡಕ್ಕೆ 12 ಜಾತಿಗಳು : ಸಂಪುಟ ನಿರ್ಧಾರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕದ ಬೆಟ್ಟ ಕುರುಬ ಸೇರಿದಂತೆ ದೇಶದ ಹಲವು ರಾಜ್ಯಗಳ 12 ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸೇರ್ಪಡೆಗೊಳಿಸುವಂತೆ ಸರ್ಕಾರ ಅನುಮೋದನೆ ಮಾಡಿದೆ.

ದೇಶದ ವಿವಿಧೆಡೆಯಿಂದ ಕೆಲವು ಸಮುದಾಯದ ಜನಾಂಗದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿತ್ತು ಇದೀಗ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬೇಡಿಕೆಗೆ ಮುಕ್ತಿ ನೀಡಿದೆ.

ಸೇರ್ಪಡೆಯಾಗಿರುವ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆಯಾವ ಸಮುದಾಯಗಳೆಲ್ಲಾ ಇವೆ ಎನ್ನುವ ಮಾಹಿತಿಯನ್ನು ನೋಡುವುದಾದರೆ, ಕರ್ನಾಟಕದಲ್ಲಿ ಕಾಡು ಕುರುಬಕ್ಕೆ ಸಮಾನರಾದ ಬೆಟ್ಟ ಕುರುಬರು, ಉತ್ತರ ಪ್ರದೇಶದಲ್ಲಿ ಸುಮಾರು 13 ಜಿಲ್ಲೆಗಳಲ್ಲಿನ ಗೊಂಡರು.ದುರಿಯಾ, ನಾಯಕ್‌, ಓಜಾ, ಪಠಾರಿ, ರಾಜ್ ಗೋಂಡ ಇವುಗಳು ಗೊಂಡರ ಉಪಜಾತಿಗಳಾಗಿವೆ. ಹಿಮಾಚಲ ಪ್ರದೇಶದ ಹಟ್ಟಿ ಸಮುದಾಯದವರು, ಇದರಲ್ಲಿ ಸುಮಾರು 1 ಲಕ್ಷ 60 ಸಾವಿರ ಜನರು ಈ ಪಟ್ಟಿಯಲ್ಲಿದ್ದಾರೆ. ಛತ್ತೀಸ್ ಗಢದ ಬಿಂಜ್ಹಿಯಾ ಜಾತಿಗಳನ್ನೂ 12 ಪರಿಶಿಷ್ಟ ಜಾತಿಗಳನ್ನು ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಲಾಗಿದೆ. ತಮಿಳುನಾಡಿನ ನರಿಕೊರವನ್‌ಗೆ ಸಮಾನಾಂತರವಾದ ಕುರಿವಿಕ್ಕರನ್‌ ಸಮುದಾಯವನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಸರ್ಕಾರದ ನಿರ್ಧಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಸ್ವಾಗತಾರ್ಹ ಕೋರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು